ನಾಗ್ಪುರ:ಲವ್​ ಜಿಹಾದ್​ ಬಗ್ಗೆ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡಿದ್ದು ಕಾನೂನು ಕ್ರಮಕ್ಕೆ ಮುಂದಾಗುತ್ತಿವೆ. ಆದರೆ ಅದೇ ರೀತಿಯ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಇದೀಗ ಮಹಾರಾಷ್ಟ್ರದಲ್ಲಿ ಲವ್​ ಜಿಹಾದ್​​ ರೀತಿಯ ಪ್ರಕರಣದಿಂದಾಗಿ ಅಜ್ಜಿ ಮೊಮ್ಮಗನ ಪ್ರಾಣವೇ ಹೋಗಿದೆ.
ಇದನ್ನೂ ಓದಿ:ಕೃಷಿ ಕಾಯ್ದೆಯ ಅಪನಂಬಿಕೆಗಳನ್ನು ತೆಗೆದುಹಾಕಲು ಮುಂದಾದ ಬಿಜೆಪಿ! ದೇಶಾದ್ಯಂತ 700 ಸುದ್ದಿಗೋಷ್ಠಿ
ನಾಗ್ಪುರ ನಗರ ವಾಸಿ ಯುವತಿಯೊಬ್ಬಳಿಗೆ (20) ಸಾಮಾಜಿಕ ಜಾಲತಾಣದಲ್ಲಿ 17 ವರ್ಷದ ಯುವಕ ಪರಿಚಿತನಾಗಿದ್ದ. ಬೇರೆ ಧರ್ಮಕ್ಕೆ ಸೇರಿದ್ದ ಆತ ಆಗಾಗ ಯುವತಿಯ ಮನೆಗೆ ಬಂದು ಹೋಗುತ್ತಿದ್ದನಂತೆ. ಆದರೆ ಇತ್ತೀಚೆಗೆ ಯುವತಿ ತನ್ನ ಮನೆಯಿಂದ ತನ್ನ ಅಂಕಲ್​ ಮನೆಗೆ ಶಿಫ್ಟ್​ ಆಗಿದ್ದಾಳೆ. ಅಲ್ಲಿ ತನ್ನ ಅಜ್ಜಿ ಮತ್ತು 10 ವರ್ಷದ ತಮ್ಮನೊಂದಿಗೆ ಕಾಲ ಕಳೆಯುವಾಗ ಈ ಯುವಕ ಅಲ್ಲಿಗೆ ಬಂದಿದ್ದಾನೆ. ತನ್ನ ಮೊಮ್ಮಗಳೊಂದಿಗೆ ಬೇರೆ ಧರ್ಮದ ಯುವಕನೊಬ್ಬ ಸ್ನೇಹ ಮಾಡಿದ್ದನ್ನು ಅಜ್ಜಿ ಪ್ರಶ್ನಿಸಿದ್ದಾಳೆ. ಆಗ ಸಿಟ್ಟಿಗೆದ್ದ ಬಾಲಕ ಅಜ್ಜಿಯ ಕೊಲೆ ಮಾಡಿದ್ದಾನೆ. ಯುವತಿಯ ತಮ್ಮನನ್ನು ಬಾತ್​ರೂಂಗೆ ಎಳೆದೊಯ್ದು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ನಂತರ ಆತ ಚಲಿಸುತ್ತಿದ್ದ ರೈಲಿಗೆ ಎದುರು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ
ಇದನ್ನೂ ಓದಿ:‘ನಾ ನಿಂಗೊಬ್ಬಳಿಗೇ ಸೇರಿದವನಲ್ಲ, 10 ಮಹಿಳೆಯರಿಗೆ ಸೇರಿದವನು’ ತಲಾಖ್​ ಹೇಳುವ ಮುನ್ನ ಶಾಕ್ ಕೊಟ್ಟ ಗಂಡ
ಯುವತಿಯ ತಾಯಿ ಮನೆಗೆ ಬಂದು ನೋಡಿದಾಗ ಆಕೆಗೆ ಆಘಾತವಾಗಿದೆ. ತಕ್ಷಣವೇ ತನ್ನ ಪತಿಗೆ ಈ ವಿಚಾರವನ್ನು ತಿಳಿಸಿದ್ದಾಳೆ. ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದು ಲವ್​ ಜಿಹಾದ್​ನಿಂದಲೇ ಆಗಿರುವ ಕೃತ್ಯ ಎಂದು ವಿಶ್ವ ಹಿಂದೂ ಪರಿಷತ್​ ಮತ್ತು ರಾಷ್ಟ್ರೀಯ ಭಜರಂಗದಳದ ಕಾರ್ಯಕರ್ತರು ದೂರಿದ್ದಾರೆ. ಇಂದು ಸಂಜೆ ನಾಗ್ಪುರದಲ್ಲಿ ಹೋರಾಟಕ್ಕೆ ಕರೆ ನೀಡಲಾಗಿದೆ. (ಏಜೆನ್ಸೀಸ್​)
ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
