ಹೈದರಾಬಾದ್​:ಮೊಬೈಲ್​ ಎಷ್ಟು ಸಹಕಾರಿಯೋ ಅಷ್ಟೇ ಅಪಾಯಕಾರಿಯೂ ಹೌದು ಎನ್ನುವುದಕ್ಕೆ ಇಲ್ಲೊಂದು ನಿರ್ದೇಶನ ಸಿಕ್ಕಿದೆ. ಮಕ್ಕಳಿಗೆ ಮೊಬೈಲ್​ ಕೊಟ್ಟರೆ ಏನಾಗಬಹುದು. ಹೆಚ್ಚೆಂದರೆ ಮೊಬೈಲ್​ ಹಾಳಾಗಬಹುದು ಎಂದುಕೊಳ್ಳಬಹುದು. ಆದರೆ ಇಲ್ಲಿ ಆಗಿರುವುದೇ ಬೇರೆ.
16 ವರ್ಷದ ಬಾಲಕನೊಬ್ಬ ತನ್ನ ತಾಯಿಯ ಮೊಬೈಲ್​ನಲ್ಲಿ ಗೇಮ್​ ಆಡಲು ಹೋಗಿ ಭಾರೀ ಮೊತ್ತದ ಹಣವನ್ನೇ ಖಾಲಿ ಮಾಡಿದ್ದಾನೆ. ಆನ್​ಲೈನ್​ ಗೇಮ್​ ಆಡುತ್ತಿದ್ದ ಈ ಬಾಲಕ ತನ್ನ ತಾಯಿಯ ಖಾತೆಯಿಂದ ಬರೋಬ್ಬರಿ 36 ಲಕ್ಷ ರೂ. ಹಣವನ್ನು ವ್ಯಯಿಸಿದ್ದಾನೆ. ಹೈದರಾನಾದ್​ ಅಂಬಾರಪೇಟೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ತನ್ನ ಮಗನಿಂದ ಈಗ ಇರುವ ಹಣವನ್ನೂ ಕಳೆದುಕೊಂಡಿದ್ದಾರೆ.ದುಡ್ಡು ಹೇಗೆ ಖಾಲಿಯಾಯಿತು ಎಂಬ ಬಗ್ಗೆ ಮಹಿಳೆ ಸೈಬರ್​ ಕ್ರೈಂ ಗೆ ದೂರು ನೀಡುತ್ತಾಳೆ. ತನಿಖೆ ಕೈಗೊಂಡ ಪೊಲೀಸರಿಗೆ ಈಕೆಲಸ ಯಾರದ್ದು ಎಂದು ತಿಳಿದುಬಿಡುತ್ತದೆ. ಆ ವೇಳೆ ಮೊಬೈಲ್​ನಲ್ಲೇ ಗೇಮ್​ಗಾಗಿ ಈ ಬಾಲಕ ತಾಯಿಯ ಖಾತೆಯಲ್ಲಿರುವ ಹಣ ಬಳಸಿರುವುದು ಪತ್ತೆಯಾಗಿದೆ.
ಒಂದೊಂದು ಗೇಮ್​​ಗೆ 1500 ರೂ.ನಿಂದ 10,000 ರೂ.ವರೆಗೂ ಪಾವತಿ ಮಾಡಿದ್ದಾನೆ. 11ನೇ ತರಗತಿಯಲ್ಲಿ ಓದುತ್ತಿರವ ಈತ ತನ್ನ ತಾಯಿಯ ಖಾತೆಯಿಂದ 1 ರಿಂದ 2 ಲಕ್ಷದವರೆಗೂ ಹಣವನ್ನು ಡ್ರಾ ಮಾಡಿಕೊಂಡಿದ್ದಾನೆ. ಹೀಗೆ ಆನ್​ಲೈನ್​ ಗೇಮ್​ ಹುಚ್ಚಿಗೆ ಬಿದ್ದ ಯುವಕ ಬರೋಬ್ಬರಿ 36 ಲಕ್ಷ ರೂ.ಹಣವನ್ನು ಹಾಳುಮಾಡಿದ್ದಾನೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 18 =
Remember me
