ನವದೆಹಲಿ:ಇತ್ತೀಚೆಗೆ ವೈದ್ಯರಿಂದ ಹಿಡಿದು ವಾರ್ಡ್​ಬಾಯ್​, ಆಸ್ಪತ್ರೆಯ ಸ್ವಚ್ಛತಾಗಾರರವರೆಗೆ ಎಲ್ಲರಲ್ಲೂ ಮಾನವೀಯತೆಯೇ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಣ ಕೊಡದೆ ಏನೊಂದು ಕೆಲಸ ಆಗುವುದಿಲ್ಲ ಎಂಬಂತೆ ತೋರುತ್ತಿದೆ. ಕೇವಲ 30 ರೂ. ಲಂಚ ಕೊಡಲಿಲ್ಲ ಎಂಬ ಕಾರಣಕ್ಕೆ ವಾರ್ಡ್​ಬಾಯ್​ ಒಬ್ಬ ಸ್ಟ್ರೆಚರ್​ ದೂಡಲು ನಿರಾಕರಿಸಿದ್ದಾನೆ. ಇದರಿಂದಾಗಿ ಆ ಬಡ ಕುಟುಂಬದ 6 ವರ್ಷದ ಮಗು ಸ್ಟ್ರೆಚರ್​ ಅನ್ನು ದೂಡಿಕೊಂಡು ಹೋಗಿದೆ.
ಉತ್ತರ ಪ್ರದೇಶದ ದೇವೊರಿಯಾ ಎಂಬಲ್ಲಿ ವ್ಯಕ್ತಿಯೊಬ್ಬ ತೀವ್ರ ಅಸ್ವಸ್ಥನಾಗಿದ್ದ. ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನನ್ನು ಪರೀಕ್ಷಿಸಿದ ವೈದ್ಯರು ನಿರ್ದಿಷ್ಟವಾದ ವಾರ್ಡ್​ಗೆ ಕರೆದೊಯ್ಯುವಂತೆ ಸೂಚಿಸಿದ್ದರು.
ಇದನ್ನೂ ಓದಿ:ಈ ವರ್ಷ ಎರಡು ಬಿಡುಗಡೆ; ಮೂರು ಶೂಟಿಂಗ್​ … ಇನ್ನು ಸುಮ್ಮನೆ ಕೂರಲ್ಲ ಅಕ್ಷಯ್​
ಆ ನಡೆಯಲಾಗದಷ್ಟು ನಿಶ್ಶಕ್ತನಾಗಿದ್ದ. ಆದ್ದರಿಂದ ಸ್ಟ್ರೆಚರ್​ ಮೇಲೆ ಮಲಗಿಸಿ ಆತನನ್ನು ವಾರ್ಡ್​ಗೆ ಕರೆದೊಯ್ಯುವುದು ಅನಿವಾರ್ಯವಾಗಿತ್ತು. ಅದರಂತೆ ಸ್ಥಳದಲ್ಲಿದ್ದ ವಾರ್ಡ್​ಬಾಯ್​ಗೆ ಆ ವ್ಯಕ್ತಿಯನ್ನು ಸ್ಟ್ರೆಚರ್​ನಲ್ಲಿ ಮಲಗಿಸಿ ಕರೆದೊಯ್ಯುವಂತೆ ಬಡ ಕುಟುಂಬ ಮನವಿ ಮಾಡಿಕೊಂಡಿತ್ತು.
ಆದರೆ ಆತ 30 ರೂ. ಕೊಟ್ಟರೆ ವಾರ್ಡ್​ವರೆಗೆ ಸ್ಟ್ರೆಚರ್​ ದೂಡುವುದಾಗಿ ಹೇಳಿದ. ಆತನಿಗೆ ಕೊಡಲು ಹಣ ಇಲ್ಲದ ಕಾರಣ ತಾಯಿ ಸ್ಟ್ರೆಚರ್​ನ ಮುಂಭಾಗದಲ್ಲಿ ಹಾಗೂ 6 ವರ್ಷದ ಬಾಲಕ ಹಿಂಭಾಗದಲ್ಲಿ ಸ್ಟ್ರೆಚರ್​ ಅನ್ನು ದೂಡಿಕೊಂಡು ಹೋಗಿ ಆ ವ್ಯಕ್ತಿಯನ್ನು ವಾರ್ಡ್​ಗೆ ಸ್ಥಳಾಂತರಿಸಿದರು.
ಈ ದೃಶ್ಯವನ್ನು ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ವಿಡಿಯೋ ಈಗ ವೈರಲ್​ ಆಗಿದೆ.
ಕೊವಿಡ್​-19ನಿಂದ ತತ್ತರಿಸಿರುವ ಅಮೆರಿಕಕ್ಕೆ ಆಘಾತ; ಶುರುವಾಗಿದೆ ಮತ್ತೊಂದು ಅಪಾಯಕಾರಿ ಸಾಂಕ್ರಾಮಿಕ ರೋಗ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 1 =
Remember me
