ತಿರುಪತಿ:ಅಕ್ಕನೊಂದಿಗೆ ಮೊಬೈಲ್​ಫೋನ್​ಗಾಗಿ ಕಿತ್ತಾಡಿದ ಬಾಲಕನೊಬ್ಬ, ಅಪ್ಪ ಬೈದರೆಂದು ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದೋರ್ನಕಂಬಲ ಗ್ರಾಮದ ಮುನಿ ತೇಜ (13) ಆತ್ಮಹತ್ಯೆ ಮಾಡಿಕೊಂಡವ.
ಮುನಿ ತೇಜನಿಗೆ ಮೊಬೈಲ್​ಫೋನ್​ ಖರೀದಿಸಿಕೊಡಲು ತಂದೆ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅಕ್ಕನ ಬಳಿ ಇದ್ದ ಮೊಬೈಲ್​ಫೋನ್​ ಕೊಡುವಂತೆ ಕೇಳಿದ್ದ. ಆದರೆ, ಅಕ್ಕ ನಿರಾಕರಿಸಿದ್ದಳು. ಈ ಹಿನ್ನೆಲೆಯಲ್ಲಿ ಆತ ಅಕ್ಕನೊಂದಿಗೆ ಬುಧವಾರ ಬೆಳಗ್ಗೆ ಜಗಳ ಮಾಡುತ್ತಿದ್ದ.ವಿಷಯ ತಿಳಿದ ಆತನ ತಂದೆ ಜಗಳವಾಡದಂತೆ ಆತನಿಗೆ ಬುದ್ಧಿ ಹೇಳಿ ಕೆಲಸಕ್ಕೆ ತೆರಳಿದ್ದರು. ಇದರಿಂದ ನೊಂದ ಬಾಲಕ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಮಧ್ಯಾಹ್ನವಾದರೂ ಆತ ಹೊರಬರದಿದ್ದಾಗ ಅನುಮಾನಗೊಂಡ ಮನೆಯವರು ಕೋಣೆಯ ಬಾಗಿಲು ಮುರಿದು ಒಳಹೋದಾಗ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಯಿತು.
ಕುಣಿಕೆ ಬಿಚ್ಚಿ, ಆತನನ್ನು ಇಳಿಸುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ. ಈ ಬಗ್ಗೆ ಚಂದ್ರಗಿರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿಲ್ದಾಣ ಸ್ವಲ್ಪ ದೂರ ಇರುವಾಗಲೇ ತುರ್ತು ಸರಪಳಿ ಎಳೆದ ವಲಸೆ ಕಾರ್ಮಿಕರು ಅರೆಸ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 13 =
Remember me
