ನವದೆಹಲಿ:ಅಲ್ಲಿ ಸೇರಿದ್ದ ಎಲ್ಲರೂ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಮದುವೆ ಗಂಡು ವಿಭಿನ್ನವಾಗಿ ಸಿದ್ಧತೆ ಮಾಡಿಕೊಂಡಿದ್ದ. ಕೊರಳಿಗೆ ಹೂವು, ಚಿನ್ನದ ಹಾರದ ಬದಲಿಗೆ ನೋಟಿನ ಹಾರ ಹಾಕಿಕೊಂಡಿದ್ದ. ಕುತ್ತಿಗೆಯಲ್ಲಿ ನೋಟಿನ ಹಾರ ಹಾಕಿ, ಕುದುರೆ ಏರಿ ಮದುವೆ ಮಂಟಪಕ್ಕೆ ಆಗಮಿಸಲು ತಯಾರಿ ನಡೆಸುತ್ತಿದ್ದ. ಆದರೆ ಕೊನೆಯ ಕ್ಷಣದಲ್ಲಿ ಆಗಿದ್ದೇ ಬೇರೆ. ವರನ ಕುತ್ತಿಗೆಯಲ್ಲಿದ್ದ ನೋಟಿನ ಹಾರ ಬಾಲಕನೊಬ್ಬನ ಕಣ್ಣು ಕುಕ್ಕಿದೆ. ಬಾಲಕ ಮದುವೆ ಗಂಡಿನ ಕುತ್ತಿಯಲ್ಲಿದ್ದ 500 ರೂ. ನೋಟಿನಿಂದ ಮಾಡಿದ ಹಾರವನ್ನು ಕಸಿದು ಪರಾರಿಯಾಗಿದ್ದಾನೆ.
ಮದುವೆ ಗಂಡಿನ ಕುತ್ತಿಗೆಯಲ್ಲಿದ್ದ ನೋಟಿನ ಹಾರವನ್ನು 14 ವರ್ಷದ ಬಾಲಕನೊಬ್ಬ ಎಗರಿಸಿದ್ದಾನೆ. ಸದ್ಯ ಈ ಘಟನೆಯ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಬಾಲಕ ವರನ ಕುತ್ತಿಗೆಲ್ಲಿದ್ದ ನೋಟಿನ ಹಾರವನ್ನು ಗಮನಿಸಿದ್ದಾನೆ. ಮದುವೆ ಗಂಡು ಕುದರೆ ಸವಾರಿ ಮಾಡಲು ಹೊರಟಿದ್ದಾಗ 500 ರೂ. ನೋಟುಗಳಿಂದ ಮಾಡಿದ್ದ ಹಾರವನ್ನು ಕಿತ್ತಕೊಂಡು ಓಡಿ ಹೋಗಿದ್ದಾನೆ ಎಂದು ಹೇಳಿರುವುದು ವರದಿಯಾಗಿದೆ.
ನೋಟಿನ ಹಾರದಲ್ಲಿ 500ರೂ. ಮುಖಬೆಲೆಯೆ 2 ಲಕ್ಷ ರೂಪಾಯಿ ಮೌಲ್ಯದ ನೋಟುಗಳಿದ್ದವು ಎನ್ನಲಾಗಿದೆ. ಈ ಘಟನೆ ಪಶ್ಚಿಮ ದೆಹಲಿಯ ಮಾಯಾಪುರಿಯಲ್ಲಿ ಗುರುವಾರ ರಾತ್ರಿ ಬ್ಯಾಂಕ್ವೆಟ್ ಹಾಲ್‌ನ ಹೊರಗೆ ನಡೆದಿದೆ. ಬಾಲಕ ನೋಟಿನ ಹಾರವನ್ನು ಕಸಿದುಕೊಂಡು ಹತ್ತಿರದಲ್ಲಿದ್ದ ಕಾಡಿನ ದಾರಿಯಲ್ಲಿ ಪರಾರಿಯಾಗಿದ್ದಾನೆ. ಕೂಡಲೇ ನಾವು ಅವನನ್ನು ಬೆನ್ನಟ್ಟಿದೆವು ಎಂದು ಮದುವೆ ಗಂಡಿನ ಸಹೋದರ ಇಮ್ರಾನ್ ಖಾನ್ ಹೇಳಿದ್ದಾನೆ.
ಕೂಡಲೇ ವರನ ಕಡೆಯವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಬಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯವಾಳಿಗಳನ್ನು ಪರಿಶೀಲಿಸಿ, ಬಾಲಕನ ಪತ್ತೆ ಹಚ್ಚುವ ಕೆಲಸ ಮಾಡಿದ್ದಾರೆ. ವರದಿಯ ಪ್ರಕಾರ 329 ನೋಟುಗಳನ್ನು ಬಳಸಿ ನೋಟಿನ ಹಾರ ತಯಾರಿಸಲಾಗಿತ್ತು. ಬಾಲಕ ವರದನ ಕುತ್ತಿಗೆಯಿಂದ ಹಾರವನ್ನು ಎಳೆದುಕೊಳ್ಳುವ ವೇಳೆ ಕೆಲವು ನೋಟುಗಳು ಚೆಲ್ಲಾಪಿಲ್ಲಿಯಾಗಿವೆ. ಸದ್ಯ 500 ರೂ. ಮುಖಬೆಲೆಯ 79 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 11 =
Remember me
