ಮುಂಬೈ:ರೀಲ್ಸ್​ ಹುಚ್ಚು ಯುವ ಜನರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿದೆ. ಇತ್ತೀಚೆಗಷ್ಟೇ ಇಂತಹದ್ದೇ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ ಜಲಾಶಯಕ್ಕೆ ತೆರಳಿ ರಿಸ್ಕ್ ಸ್ಟಂಟ್ ಮಾಡಿ ಪ್ರಾಣ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ:ಕೇಂದ್ರದ ಈ ಕಂಪೆನಿ ಷೇರು ವರ್ಷಕ್ಕೇ ದ್ವಿಗುಣ..ಕಳೆದ ವರ್ಷ 186 ರೂ.ಇದ್ದಿದ್ದು ಈಗ 333 ರೂ.ಗೆ ಏರಿಕೆ!
ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೂವರು ಯುವಕರು ನಾಗ್ಪುರದ ಉಮ್ರೆಡ್ ಪಟ್ಟಣದ ಸಮೀಪವಿರುವ ಮಕರಧೋಕ್ಡಾ ಅಣೆಕಟ್ಟು ವೀಕ್ಷಣೆಗೆ ತೆರಳಿದ್ದರು. ಮಳೆಗೆ ಅಣೆಕಟ್ಟಿನ ಕೋಡಿ ಬಿದ್ದಿದ್ದು, ಯುವಕರು ತುಂಬಾಇಳಿಜಾರು ಮತ್ತು ಜಾರಿಬೀಳುವ ರೀತಿ ಇರುವ ಕೋಡಿ ಮೇಲೆ ಹತ್ತಲು ಮುಂದಾಗಿದ್ದಾರೆ.
ಅವರಲ್ಲಿ ಒಬ್ಬ ಮೇಲಕ್ಕೆ ಬಂದು ವಿಜಯದ ಸಂಕೇತವನ್ನು ನೀಡುತ್ತಾನೆ. ಬಳಿಕ ಮತ್ತೊಬ್ಬ ಸ್ನೇಹಿತನನ್ನು ಮೇಲಕ್ಕೆ ಎಳೆಯಲು ಯತ್ನಿಸಿದ್ದಾನೆ. ಆದರೆ ಅವನು ಕೈಜಾರಿ ಬಿದ್ದಿದ್ದಾನೆ. ಉಳಿದ ಇಬ್ಬರು ಸಹ ಕೆಳಗೆ ಜಾರಿದ್ದಾರೆ. ಒಬ್ಬ ಯುವಕ ಅಣೆಕಟ್ಟೆಗೆ ಬಿದ್ದಿದ್ದು, ಈಜಲು ಬಾರದ ಕಾರಣ ಮುಳುಗಿದ್ದಾನೆ. ಸ್ಥಳೀಯರು ಆತನನ್ನು ಗಮನಿಸಿ ಹೊರತೆಗೆಯಲು ಪ್ರಯತ್ನಿಸುವ ಮೊದಲು ಅವನು ಸಂಪೂರ್ಣವಾಗಿ ಮುಳುಗಿದ್ದಾನೆ.
ಮೋಜಿಗೆ ಬಂದ ಯುವಕರು ಹುಚ್ಚು ಸಾಹಸಕ್ಕೆ ಇಳಿದು ಒಬ್ಬ ಪ್ರಾಣ ತೆತ್ತಿದ್ದಾನೆ. ಈ ವೇಳೆ ನೆರೆದಿದ್ದ ಕೆಲವರು ಯುವಕ ನೀರಿನಲ್ಲಿ ಮುಳುಗುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ. ಆ ವೀಡಿಯೋ ಈಗ ವೈರಲ್ ಆಗಿವೆ. ಈಜುಗಾರರ ಸಹಾಯದಿಂದ ಮೃತ ದೇಹವನ್ನು ಹೊರ ತೆಗೆಯಲಾಗಿದೆ.
ಇತ್ತೀಚಿಗೆ ಯುವಕರು ಕೇವಲ ಮೋಜಿಗಾಗಿ ಮತ್ತು ವೈರಲ್ ಆಗಲು ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ.
‘ಮಿಸ್ಟರ್ ಬಚ್ಚನ್’: ಲೆಹೆಂಗಾದೊಳಗೆ ಕೈ ಹಾಕಿ ಸ್ಟೆಪ್ಸ್​.. ಟ್ರೋಲಿಂಗ್ ಕುರಿತು ನಿರ್ದೇಶಕ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × one =
Remember me
