ಉನ್ನಾವ್ :ಕರೊನಾ ಕರ್ಫ್ಯೂ ಜಾರಿಗೊಳಿಸುವ ಭರಾಟೆಯಲ್ಲಿ ಪೊಲೀಸರು 17 ವರ್ಷ ವಯಸ್ಸಿನ ಬಾಲಕನೊಬ್ಬನ ಪ್ರಾಣ ತೆಗೆದಿರುವ ಘಟನೆ ನಡೆದಿದೆ. ಮನೆಯ ಮುಂದೆ ತರಕಾರಿ ಮಾರುತ್ತಿದ್ದ ನತದೃಷ್ಟ ಬಾಲಕನೊಬ್ಬ ಪೊಲೀಸರ ಲಾಠಿ ಏಟು ತಿಂದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ.
ಉನ್ನಾವ್​ ಜಿಲ್ಲೆಯ ಬಂಗಾರ್​ಮಾವ್​ ಪ್ರದೇಶದ ಭಟ್​ಪುರಿ ಬಡಾವಣೆಯಲ್ಲಿ ಬಾಲಕನೊಬ್ಬ ಮನೆಯ ಹೊರಗೆ ತರಕಾರಿ ಮಾರುತ್ತಿದ್ದ. ಕರೊನಾ ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ ಅವನನ್ನು ಹಿಡಿದ ಪೊಲೀಸ್ ಪೇದೆ ಲಾಠಿಯಿಂದ ಹೊಡೆದರು. ನಂತರ ಪೊಲೀಸ್​ ಠಾಣೆಗೆ ಕರೆದೊಯ್ದು ಅಲ್ಲೂ ಥಳಿಸಿದರು. ಬಾಲಕನ ಪರಿಸ್ಥಿತಿ ಬಿಗಡಾಯಿಸಿತೆಂದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಾಗ ಬಾಲಕ ಮೃತಪಟ್ಟಿದ್ದ ಎನ್ನಲಾಗಿದೆ.
ಇದನ್ನೂ ಓದಿ:ದಿ ಫ್ಯಾಮಿಲಿ ಮ್ಯಾನ್ ವಿರುದ್ಧ ಎನ್​ಟಿಕೆ ಆಕ್ರೋಶ … ಇಲ್ಲಿದೆ ಕಾರಣ
ಪೊಲೀಸರ ಈ ವರ್ತನೆಯಿಂದ ಸಿಟ್ಟುಗೊಂಡಿರುವ ಸ್ಥಳೀಯರು ಲಖನೌ ರೋಡ್​ ಕ್ರಾಸಿಂಗ್​ನಲ್ಲಿ ವಾಹನಗಳನ್ನು ಅಡ್ಡಗಟ್ಟಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಪ್ರತಿಭಟನೆ ನಡೆಸಿದರು ಎನ್ನಲಾಗಿದೆ. ನಂತರ “ಘಟನೆಗೆ ಕಾರಣರಾದ ಪೇದೆ ವಿಜಯ್​ ಚೌಧರಿಯನ್ನು ತಕ್ಷಣವೇ ಸಸ್ಪೆಂಡ್​ ಮಾಡಿದ್ದು, ಹೋಮ್​ಗಾರ್ಡ್​ ಸತ್ಯಪ್ರಕಾಶ್​ರನ್ನು ಕೆಲಸದಿಂದ ತೆಗೆಯಲಾಗಿದೆ. ಇಡೀ ಪ್ರಕರಣದ ತನಿಖೆ ನಡೆಯಲಿದ್ದು, ಪೊಲೀಸರ ವಿರುದ್ಧ ಎಫ್​.ಐ.ಆರ್. ದಾಖಲಿಸಲಾಗಿದೆ” ಎಂದು ಪೊಲೀಸ್ ಇಲಾಖೆ ಹೇಳಿಕೆ ನೀಡಿದೆ.(ಏಜೆನ್ಸೀಸ್)
ಡಿಎಲ್​ಎಫ್​ ಲಂಚ ಪ್ರಕರಣದಲ್ಲಿ ಲಾಲು ಪ್ರಸಾದ್​ ಯಾದವ್​​ಗೆ ಕ್ಲೀನ್​ ಚಿಟ್​
VIDEO | ಆ್ಯಂಜಲೀನಾ ಜೋಲಿ ‘ಜೇನುಹುಳಗಳ ದಿನ’ ಆಚರಿಸಿದ್ದು ಹೀಗೆ!
ಭವಾನಿಪುರದಿಂದ ಮತ್ತೆ ಸ್ಪರ್ಧಿಸಲಿದ್ದಾರೆ ಮಮತಾ ಬ್ಯಾನರ್ಜಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − five =
Remember me
