ಭಾನುವಾರ (ಏಪ್ರಿಲ್ 21)ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದ್ದು, ಸರಕು ಸಾಗಣೆ ರೈಲಿನ ಬಳಿ ಆಟವಾಡುತ್ತಿದ್ದ ಬಾಲಕನೊಬ್ಬ ಅರಿವಿಗೆ ಬಾರದೆ ರೈಲಿನ ಚಕ್ರದಡಿ ಕುಳಿತ್ತಿದ್ದಾನೆ. ಈ ವೇಳೆ ರೈಲು ಚಲಿಸಿದ್ದು, ನೂರು ಕಿಲೋಮಿಟರ್​ಗೂ ಹೆಚ್ಚು ದೂರ ವೀಲ್​ಗಳ ಮಧ್ಯೆಯೇ ಕುಳಿತು ಪ್ರಯಾಣಿಸಿರುವುದು ರೈಲ್ವೇ ಅಧಿಕಾರಿಗಳ ಗಮನಕ್ಕೆ ಬಂದಿದೆ. ಸದ್ಯ ಮಗುವು ಸುರಕ್ಷಿತವಾಗಿದ್ದೇ ಆದರೂ ಚಕ್ರದ ನಡುವೆ ಸಿಲುಕಿಕೊಳ್ಳಲು ಕಾರಣವೇನು ಎಂಬುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ.
ಇದನ್ನೂ ಓದಿ:ವೈರಲ್​ ಆಗಲು ಹೀಗೂ ಮಾಡ್ತಾರಾ? ಅಪ್ಪಿತಪ್ಪಿ ಈ ದುಸ್ಸಾಹಸಕ್ಕೆ ಕೈ ಹಾಕ್ಬೇಡಿ ಪ್ರಾಣ ಹೋದೀತು!
ಉತ್ತರ ಪ್ರದೇಶದ ರೈಲ್ವೇ ಹಳಿಗಳ ಬಳಿ ವಾಸಿಸುತ್ತಿದ್ದ ಬಾಲಕ ರೈಲು ಚಲಿಸಲು ಸ್ಥಳದಿಂದ ಹೊರಡುವ ಮುನ್ನ ಅದರಡಿ ಆಟವಾಡುತ್ತಿದ್ದ ಎಂದು ಹೇಳಲಾಗಿದೆ. ಈ ವೇಳೆ ರೈಲು ಹೊರಟಿರುವುದು ಮಗುವಿನ ಗಮನಕ್ಕೆ ಬಂದಿಲ್ಲ. ಬದಲಿಗೆ ಆಟವಾಡುತ್ತಲ್ಲೇ ಚಕ್ರದ ನಡುವೆ ಸಿಲುಕಿಕೊಂಡಿದ್ದಾನೆ. ಹಾಗೆಯೇ ಕುಳಿತ ಬಾಲಕ ಸುಮಾರು 100 ಕಿಮೀ.ಗೂ ಹೆಚ್ಚು ದೂರ ಪ್ರಯಾಣಿಸಿದ್ದಾನೆ. ಹಳಿಯ ಮಧ್ಯೆ ಎಲ್ಲಿಯೂ ಆಯಾತಪ್ಪಿ ಬೀಳದ ಬಾಲಕ, ಸುರಕ್ಷಿತವಾಗಿ ಕುಳಿತ್ತದ್ದು ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳಿಗೆ ಶಾಕ್ ತಂದಿದೆ.
ಬಾಲಕನನ್ನು ಅಂತಿಮವಾಗಿ ಹರ್ದೋಯ್‌ ನಿಲ್ದಾಣದಲ್ಲಿ ಆರ್​ಪಿಎಫ್ ಅಧಿಕಾರಿಗಳು ರಕ್ಷಿಸಿದ್ದು, ಬಿಸಿಲಿನ ಶಾಖದ ನಡುವೆಯೂ ಬಾಲಕ ರೈಲಿನ ವೀಲ್‌ಸೆಟ್‌ನ ನಡುವೆ ಹೇಗೆ ಕುಳಿತ್ತಿದ್ದ ಎಂಬುದೇ ಆಶ್ಚರ್ಯ ಎಂದು ರೈಲ್ವೇ ಇಲಾಖೆ ತಿಳಿಸಿದೆ. ಅಂತಿಮವಾಗಿ ದಣಿದ ಬಾಲಕನನ್ನು ಹರ್ದೋಯಿಯಲ್ಲಿರುವ ಮಕ್ಕಳ ಆರೈಕೆ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).
4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

ನೀನೆಂದಿಗೂ ನನ್ನ ಜತೆಯಲ್ಲೇ ಇರ್ತೀಯಾ ಮಗನೇ; ಭಾವುಕರಾದ ಶಿಖರ್ ಧವನ್​ಗೆ ಫ್ಯಾನ್ಸ್​ ಆಸರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + nineteen =
Remember me
