ಆಗ್ರಾ:ಜಗತ್ತಿನಲ್ಲಿ ತಾಯಿ ಪ್ರೀತಿಯ ಮುಂದೆ ಎಲ್ಲವೂ ನಶ್ವರ. ತಾಯಿಗಾಗಿ ಬರಿಗಾಲಲ್ಲಿ 3 ಕಿ.ಮೀ. ನಡೆದುಕೊಂಡು ಹೋಗಿ ಬಾಲಕನೊಬ್ಬ ತನ್ನ ತಂದೆಯೇ ವಿರುದ್ದವೇ ಪೊಲೀಸರಿಗೆ ದೂರು ನೀಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಇದನ್ನೂ ಓದಿ:ವಿದ್ಯಾರ್ಥಿನಿಯರ ಜತೆ ಕುಳಿತು ಬಿಸಿಯೂಟ ಸವಿದ ಅಂಬಾಟಿ ರಾಯುಡು ರಾಜಕೀಯದ ಬಗ್ಗೆ ಕೊಟ್ರು ಮಹತ್ವದ ಸುಳಿವು!
40 ವರ್ಷದ ಹರಿ ಓಮ್ ಎಂಬಾತನೇ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಆಗ್ರಾ ಗ್ರಾಮಾಂತರದ ಬಹ್‌ನಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು ಮದ್ಯವ್ಯಸನಿಯಾಗಿದ್ದಾನೆ.
ಮಂಗಳವಾರದಂದು ಕುಡಿದ ಅಮಲಿನಲ್ಲಿ ತನ್ನ ತಂದೆಯು, ತಾಯಿಯನ್ನು ಕಬ್ಬಿಣದ ಪೈಪ್ ಮತ್ತು ಬೆಲ್ಟ್‌ನಿಂದ ಹೊಡೆಯುವುದನ್ನು ನೋಡಿದ 12 ವರ್ಷದ ಬಾಲಕ 3 ಕಿ.ಮೀ. ನಡೆದುಕೊಂಡು ಪೊಲೀಸ್ ಠಾಣೆಗೆ ತೆರಳಿ, ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾನೆ. ಕೂಡಲೇ ಪೊಲೀಸರು, ಹುಡುಗನ ಮನೆಗೆ ಧಾವಿಸಿ ಹರಿಓಮ್​ನನ್ನು ಬಂಧಿಸಿದ್ದರು. ಆದರೆ ಆರೋಪಿಯ ಹೆಂಡತಿ, ಆತನ ವಿರುದ್ಧ ಯಾವುದೇ ಆರೋಪಗಳನ್ನು ಮಾಡಲು ಬಯಸದ ಕಾರಣ ಆತನನ್ನು ಪೊಲೀಸರು ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ.
ಇದನ್ನೂ ಓದಿ:ವಾಹನ ಸವಾರರಿಗೆ ಬಿಗ್​ ಶಾಕ್​: ಶೀಘ್ರವೇ ಈ ಹೆದ್ದಾರಿಯಲ್ಲಿ ಬೈಕ್, ಆಟೋ ಸಂಚಾರ ನಿಷೇಧ…
ಬಾಲಕನ ಧೈರ್ಯವನ್ನು 70 ವರ್ಷದ ಅಜ್ಜ ದೇಶರಾಜ್​ ಹಾಗೂ ಗ್ರಾಮಸ್ಥರು ಶ್ಲಾಘಿಸಿದ್ದಾರೆ. ಬಾಲಕನ ಕುರಿತು ಮಾತನಾಡಿದ ಪೊಲೀಸರು, ಚಿಕ್ಕ ಹುಡುಗನ ಧೈರ್ಯವನ್ನು ನೋಡಿ ನಮಗೆ ಆಶ್ಚರ್ಯ ಮತ್ತು ಸಂತೋಷ ಒಟ್ಟಿಗೆಯಾಗಿದೆ. ಅವನ ವಯಸ್ಸಿನ ಮಕ್ಕಳು ಪೊಲೀಸ್ ಠಾಣೆಗೆ ಧಾವಿಸಿ ಇಂತಹ ಘಟನೆಗಳ ಬಗ್ಗೆ ದೂರು ನೀಡುವುದು ಅಪರೂಪ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
