ಲಖನೌ:ಧಾರ್ಮಿಕ ಶಿಕ್ಷಣ ನೀಡುವ ಮದರಸಾದೊಳಗೆ ಮುಸ್ಲಿಂ ಬಾಲಕನೊಬ್ಬನನ್ನು ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್​ ನಗರದಲ್ಲಿ ನಡೆದಿದೆ. ಅದೃಷ್ಟವಶಾತ್​ ಬಾಲಕನನ್ನು ರಕ್ಷಿಸಲಾಗಿದ್ದು, ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಐದು ವರ್ಷದ ಮಗನ ಎದುರೇ ಹೋಯಿತು ಅಮ್ಮ, ಅಕ್ಕನ ಪ್ರಾಣ! ಕೊಲೆ ಮಾಡಿದ್ದು ಯಾರು ಎಂದು ಗೊತ್ತಾದರೆ ಬೆಚ್ಚಿ ಬೀಳುತ್ತೀರಿ
ನಗರದ ಜಹಾನಾಬಾದ್ ಪ್ರದೇಶದ ಅಲ್ಜಾಮಿಯಾ ಮದರಸಾದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಒಂದೆರೆಡು ತಿಂಗಳ ಹಿಂದೆ ಪೋಷಕರೊಬ್ಬರು ತಮ್ಮ 12 ವರ್ಷದ ಮಗನನ್ನು ಈ ಮದರಸಾಕ್ಕೆ ಸೇರಿಸಿದ್ದರು. ನನಗೆ ಇಲ್ಲಿರಲು ಇಷ್ಟವಿಲ್ಲವೆಂದು ಮಗ ಎಷ್ಟೇ ಬೇಡಿಕೊಂಡರೂ ಕೇಳದ ತಂದೆ ಆತನನ್ನು ಅಲ್ಲೇ ಬಿಟ್ಟು ತೆರಳಿದ್ದರು. ಮದರಸಾಕ್ಕೆ ದಾಖಲಾಗಿ ಕೆಲವೇ ದಿನದಲ್ಲಿ ಅಲ್ಲಿಂದ ಓಡಿ ಹೋಗುವ ಪ್ರಯತ್ನವನ್ನು ಬಾಲಕ ಮಾಡಿದ್ದಾನೆ. ಅದೇ ಕಾರಣಕ್ಕಾಗಿ ಬಾಲಕನನ್ನು ಮೆಟಲ್​ ಚೈನ್​ನಿಂದ ಕಟ್ಟಿ ಹಾಕಲಾಗಿದೆ. ತಪ್ಪು ಮಾಡಿದ್ದಕ್ಕಾಗಿ ಆತನ ಮೇಲೆ ಹಲ್ಲೆ ಮಾಡಲಾಗಿದೆ.
ಹಲ್ಲೆಯಿಂದ ಭಯಗೊಂಡಿದ್ದ ಬಾಲಕ ನವೆಂಬರ್​ 25ರಂದು ಮತ್ತೊಮ್ಮೆ ತಪ್ಪಿಸಿಕೊಂಡು ಮದರಸಾದಿಂದ ಹೊರಗೆ ಬಂದಿದ್ದಾನೆ. ದಾರಿಯಲ್ಲಿ ಓಡಿ ಹೊರಟಿದ್ದ ಬಾಲಕನನ್ನು ಅಲ್ಲಿನ ಸಿಬ್ಬಂದಿಗಳು ಕಷ್ಟ ಪಟ್ಟು ಹಿಡಿದಿದ್ದಾರೆ. ಆದರೆ ಈ ವೇಳೆ ಬಾಲಕ ಸಹಾಯಕ್ಕಾಗಿ ಕೂಗಿದ್ದರಿಂದಾಗಿ ಜನರು ಸೇರಿದ್ದು, ಸ್ಥಳಕ್ಕೆ ಪೊಲೀಸರನ್ನು ಕರೆಸಲಾಗಿದೆ.ನವೆಂಬರ್​ 27ರಂದು ಮಕ್ಕಳ ಕಲ್ಯಾಣ ಸಮಿತಿಯು ಬಾಲಕನ ಹೇಳಿಕೆಯನ್ನು ದಾಖಲಿಸಿದೆ. ತನ್ನಂತೆ ಒಟ್ಟು ಏಳು ಬಾಲಕರ ಮೇಲೆ ಈ ರೀತಿ ಹಿಂಸೆ ಮಾಡಲಾಗುತ್ತಿದೆ ಎಂದು ಬಾಲಕ ಹೇಳಿದ್ದಾನೆ. ಆದರೆ ಇದರ ಮಧ್ಯೆ ತನಿಖೆ ಆರಂಭಿಸಿದ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಮೊಹಮ್ಮದ್​ ಖಾಲಿದ್​, ಬಾಲಕ ಸುಳ್ಳು ಹೇಳಿದ್ದಾನೆ ಎಂದು ದಾಖಲಿಸಿದ್ದು, ಮದರಸಾದ ಮೇಲಿದ್ದ ಆರೋಪವನ್ನು ತೆಗೆದುಹಾಕಿದ್ದಾರೆ.
ಇದನ್ನೂ ಓದಿ:ಅತಿಥಿಗಳು ಬರಬಹುದು ಆದರೆ ಬಾತ್​ರೂಂ ಬಳಸೋಕೆ ಒಬ್ಬರಿಗೆ ಮಾತ್ರ ಅವಕಾಶ! ಸರ್ಕಾರದ ಹೊಸ ರೂಲ್ಸ್​
ಘಟನೆಯ ಸೂಕ್ಷ್ಮತೆಯನ್ನು ಅರಿತ ಜಿಲ್ಲಾಧಿಕಾರಿ ಪುಲ್ಕಿತ್ ಶ್ರೀವಾಸ್ತವ್, ಮೊಹಮ್ಮದ್​ ಖಾಲಿದ್​ ಅವರ ವರದಿಯನ್ನು ಪ್ರಶ್ನಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ದೂರು ಸಲ್ಲಿಸಲು ಏಕೆ ವಿಳಂಬವಾಗಿದೆ ಎಂದು ವಿವರಿಸಲು ಸಿಡಬ್ಲ್ಯೂಸಿಯನ್ನು ಕೇಳಿದ್ದಾರೆ. ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಮದರಸಾದ ಮೇಲ್ವಿಚಾರಕರು, ಬಾಲಕನ ತಂದೆ ಮತ್ತು ಓರ್ವ ಶಿಕ್ಷಕನ ಮೇಲೆ ದೂರು ದಾಖಲಿಸಲಾಗಿದೆ. (ಏಜೆನ್ಸೀಸ್​)
ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

ಹೆಂಡತಿ ಪ್ರೀತಿಯಿಂದ ಮಾಡಿಕೊಟ್ಟ ಟೀ ಕುಡಿದ ಪತಿ ಸಾವು, ಸ್ವಲ್ಪ ಹೊತ್ತಲ್ಲೇ ಆಸ್ಪತ್ರೆ ಸೇರಿದ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 6 =
Remember me
