ಚೆನ್ನೈ:ಚಲಿಸುವ ರೈಲಿನೊಂದಿಗೆ ಹುಡುಗಾಟ ಬೇಡವೇ ಬೇಡ ಎಂದು ಅನೇಕರು ಬುದ್ಧಿವಾದ ಹೇಳುತ್ತಲೇ ಇರುತ್ತಾರೆ. ಆದರೂ ಅಂಥ ದುಸ್ಸಾಹಸಗಳಿಗೆ ಕೈ ಹಾಕುವರರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಕೇವಲ ಚಲಿಸುವ ರೈಲು ಮಾತ್ರವಲ್ಲ ನಿಂತ ರೈಲಿನೊಂದಿಗೆ ಹುಡುಗಾಟವೂ ಪ್ರಾಣ ತೆಗೆಯಬಹುದು ಎನ್ನುವುದಕ್ಕೆ ಇಂದು ತಮಿಳುನಾಡಿನಲ್ಲಿ ನಡೆದಿರುವ ಘಟನೆಯೇ ಉದಾಹರಣೆ.
ಇದನ್ನೂ ಓದಿ:ಸಂಪುಟದಲ್ಲಿ ಜಾತಿವಾರು, ಜಿಲ್ಲಾವಾರು ಪ್ರಾತಿನಿಧ್ಯ ಕಷ್ಟ ಎಂದ ಸಚಿವ ಈಶ್ವರಪ್ಪ
ತಿರುವನೆಲ್ಲಿ ರೈಲು ನಿಲ್ದಾಣದ ನಾಗರಿಕ ಸರಬರಾಜು ಗುಣಮಟ್ಟ ಪರೀಕ್ಷಕರ ಮಗ ಗಣೇಶ್ವರ ಇಂದು ತಂದೆಯನ್ನು ನೋಡಲು ರೈಲು ನಿಲ್ದಾಣಕ್ಕೆ ಬಂದಿದ್ದ. ಅಪ್ಪ ಕೆಲಸದಲ್ಲಿ ತೊಡಗಿದ್ದಾಗ 15 ವರ್ಷದ ಮಗನಿಗೆ ಸೆಲ್ಫೀ ತೆಗೆದುಕೊಳ್ಳಬೇಕೆಂದೆನಿಸಿದೆ. ಅದೂ ರೈಲಿನ ಇಂಜಿನ್​ ಮೇಲೆ ನಿಂತು ಸೆಲ್ಫೀ ತೆಗೆದುಕೊಳ್ಳಬೇಕೆಂಬ ಆಸೆ ಹುಟ್ಟಿದೆ.
ಅದರಂತೆ ಗೂಡ್ಸ್​ ಗಾಡಿಯೊಂದರ ಇಂಜಿನ್​ ಮೇಲೆ ಹತ್ತಿದ ಗಣೇಶ್ವರ ಸೆಲ್ಫೀ ತೆಗೆದುಕೊಳ್ಳಲಾರಂಭಿಸಿದ್ದಾನೆ. ಆ ರೈಲು ವಿದ್ಯುತ್​ ಚಾಲಿತ ರೈಲಾಗಿದ್ದು, ಆತ ಸೆಲ್ಫೀ ತೆಗೆದುಕೊಳ್ಳುವಾಗ ಮೇಲಿದ್ದ ವಿದ್ಯುತ್​ ತಂತಿಗೆ ಆತನ ದೇಹ ತಗುಲಿದೆ. 25,000 ವ್ಯಾಟ್​ ವಿದ್ಯುತ್​ ಹರಿಯುತ್ತಿದ್ದ ವಿದ್ಯುತ್​ ತಂತಿಗೆ ದೇಹ ತಗಲುತ್ತಿದ್ದಂತೆಯೇ ಬಾಲಕ ಸಾವನ್ನಪ್ಪಿದ್ದಾನೆ. ವಿದ್ಯುತ್​ನಿಂದ ಸುಟ್ಟಿದ್ದ ದೇಹ ಪ್ಲಾಟ್​ಫಾರಂನ ಕೆಳಗೆ ಬಿದ್ದಿದೆ.
ಇದನ್ನೂ ಓದಿ:ಕಾಂಗ್ರೆಸ್ ಮುಖಂಡ ನಾಗರಾಜ್ ಪುತ್ರಿ ಲಾವಣ್ಯ ಜತೆ ಎಂಎಲ್ಸಿ ಆಯನೂರು ಮಂಜುನಾಥ್ ಪುತ್ರನ ನಿಶ್ಚಿತಾರ್ಥ
ಬಾಲಕನ ದೇಹವನ್ನು ತಿರುವನೆಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. (ಏಜೆನ್ಸೀಸ್​)
ಬಿಹಾರದ ನಿತೀಶ್​ ಸರ್ಕಾರದಲ್ಲಿ ಮೊದಲ ವಿಕೆಟ್​ ಪತನ; ಎನ್​ಡಿಎಗೆ ಬಂತು ಸಂಕಷ್ಟ

ಮನೆ ಮೇಲೆ ಈ ಕಲ್ಲು ಬಿದ್ದರೆ ನೀವೂ ರಾತ್ರೋರಾತ್ರಿ ಶ್ರೀಮಂತರಾಗಬಹುದು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one + 5 =
Remember me
