ಅನಂತಪುರ:ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರದಲ್ಲಿ ನಡೆದಿದ್ದು, ಮಹಿಳೆಯ ಕೊಲೆಯಿಂದಾಗಿ ಮಕ್ಕಳಿಬ್ಬರು ಅನಾಥವಾಗಿದ್ದಾರೆ.
ಘಟನೆ ಬಗ್ಗೆ ವಿವರಣೆ ನೀಡಿರುವ ಪೊಲೀಸ್​ ಅಧಿಕಾರಿ ಪ್ರತಾಪ್​ ರೆಡ್ಡಿ, ಶನಿವಾರ ಘಟನೆ ನಡೆದಿದ್ದು, 32 ವರ್ಷದ ಯಶೋಧ, ರಾಣಿ ನಗರದ ಕಬ್ಬಿಣ ಕೆಲಸಗಾರ ಶಂಕರ್ ಎಂಬುವರನ್ನು 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರ ಮದುವೆ ಸಾಕ್ಷಿಯಾಗಿ ಇಬ್ಬರು ಗಂಡು ಮಕ್ಕಳಿದ್ದರು. ನಾಲ್ಕು ವರ್ಷಗಳ ಹಿಂದೆ ಇಬ್ಬರ ನಡುವಿನ ವಿರಸದಿಂದಾಗಿ ದಂಪತಿ ಬೇರೆಯಾಗಿದ್ದಾರೆ. ​
ಇದನ್ನೂ ಓದಿರಿ:ಹಿರಿಯರ ಒಪ್ಪಿಗೆ ಪಡೆದು ಪ್ರೇಮವಿವಾಹವಾದ ನವಜೋಡಿಗೆ ಮೂರೇ ತಿಂಗಳಲ್ಲಿ ಕಾದಿತ್ತು ಬಿಗ್​ ಶಾಕ್​!
ಇದರ ನಡುವೆ ಯಶೋಧಾಗೆ ಮಸ್ಜಿದ್​ ಕೊಟ್ಟಲಾದ ಬುಕ್ಕರಾಯಸಮುದ್ರಂ ನಿವಾಸಿ ಆಟೋ ಚಾಲಕ ಮಲ್ಲಿಕಾರ್ಜುನ್​ ಪರಿಚಯವಾಗಿತ್ತು. ಮಲ್ಲಿಕಾರ್ಜುನನಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಅಶೋಕನಗರದಲ್ಲಿ ಎರಡು ವರ್ಷಗಳಿಂದ ವಾಸವಿದ್ದಾನೆ. ಯಶೋಧಾ ಮತ್ತು ಮಲ್ಲಿಕಾರ್ಜುನ್​ ನಡುವೆ ದೈಹಿಕ ಸಂಬಂಧ ಬೆಳೆದಿತ್ತು. ಇದರ ನಡುವೆ ಯಶೋಧಾಗೆ ಬೇರೊಬ್ಬನ ಜತೆ ಸಂಬಂಧ ಹೊಂದಿರುವ ಅನುಮಾನ ಮಲ್ಲಿಕಾರ್ಜುನ್​ಗೆ ಕಾಡತೊಡಗಿತ್ತು.
ಇದೇ ವಿಚಾರವಾಗಿ ಇಬ್ಬರ ನಡುವೆ ಶನಿವಾರ ಮಧ್ಯರಾತ್ರಿ ಜಗಳ ಶುರುವಾಗಿತ್ತು. ಕೋಪದಿಂದ ಮಲ್ಲಿಕಾರ್ಜುನ್​ ಕಬ್ಬಿಣದ ಸಲಾಕೆಯಿಂದ ಯೋಶಧಾಳ ತಲೆಗೆ ಹೊಡೆದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಾಬರಿಗೊಂಡ ಆತ ಮನೆಯ ಬಾಗಿಲು ಮುಚ್ಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿರಿ:ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!
ಇದಾದ ಬಳಿಕ ಯಶೋಧಾಳ ಭಾವ (ಅಕ್ಕ ವಿಜಯಲಕ್ಷ್ಮೀಯ ಪತಿ) ಸಂಜೀವ್​ ಕುಮಾರ್​ಗೆ​ ಭಾನುವಾರ ಕರೆ ಮಾಡಿದ ಮಲ್ಲಿಕಾರ್ಜುನ್, “ಹೋಗಿ ನೋಡಿ ನಿಮ್ಮ ಮರವನ್ನು ಕೊಂದರು” ಎಂದು ಹೇಳಿದ್ದಾನೆ. ಇದರ ಬೆನ್ನಲ್ಲೆ ಸಂಜೀವ್​ ಕುಮಾರ್​ ದಂಪತಿ ಅಶೋಕನಗರದ ಮನೆಗೆ ತೆರಳಿ ನೋಡಿದಾಗ ಬಾಗಿಲು ಮುಚ್ಚಿತ್ತು. ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದನ್ನು ನೋಡಿದ ದಂಪತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಮುರಿದು ನೋಡಿದಾಗ ತಂಗಿ ಸತ್ತು ಬಿದ್ದಿರುವುದು ಸಹೋದರಿಗೆ ವಿಜಯಲಕ್ಷ್ಮಿಗೆ ಗೊತ್ತಾಗುತ್ತದೆ. ಮಕ್ಕಳಿಬ್ಬರು ಅನಾಥವಾಗಿದ್ದು, ಅವರು ಜವಾಬ್ದಾರಿ ಇದೀಗ ಅಕ್ಕ-ಭಾವನ ಮೇಲೆ ಬಿದ್ದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ಇದನ್ನೂ ಓದಿರಿ:ಮೊದಲ ರಾತ್ರಿಯೇ ನೀವು ನನಗೆ ಬೇಡ ಎಂದುಬಿಟ್ಟಳು- ನರಕವಾಗಿರುವ ಬದುಕನ್ನು ಹೇಗೆ ಸಹಿಸಲಿ?
ಡ್ರಾಪ್ ಕೊಟ್ಟ ಮಹಿಳೆಯ ದೇಹದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿದ ಶಾಲಾ ಬಾಲಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ!

ಪ್ರೀತಿ ಹೆಸರಲ್ಲಿ ಲೂಟಿಮಾಡಿ ಈಗ ನನಗೆ ಬೇಕಾದಷ್ಟು ಜನ ಇದ್ದಾರೆ ಎನ್ನುತ್ತಿದ್ದಾಳೆ- ಬರೀ ಗಂಡಿಗೇಕೆ ಶಿಕ್ಷೆ?

ಬೆಳ್ಳಂಬೆಳಗ್ಗೆ ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್​ ತೆರೆದು ನೋಡಿದ ಪೊಲೀಸರಿಗೆ ಕಾದಿತ್ತು ಬಿಗ್​ ಶಾಕ್​!​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − seventeen =
Remember me
