ಹೈದರಾಬಾದ್​:ಮಹಿಳಾ ಟೆಕ್ಕಿಯೊಬ್ಬರು ಕ್ರಿಮಿನಾಶಕ ಸೇವಿಸಿ ಸಾವಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್​ನ ಜಗದ್ಗಿರಿಗುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೌನಿಕಾ (23) ಮೃತ ದುರ್ದೈವಿ. ನೆಹರು ನಗರದಲ್ಲಿ ತನ್ನ ಸ್ನೇಹಿತೆ ಸೌಮ್ಯ ಜತೆಯಲ್ಲಿ ಮೌನಿಕಾ ವಾಸವಿದ್ದರು. ಮಾದಪುರದಲ್ಲಿರುವ ಸಾಫ್ಟ್​ವೇರ್​ ಕಂಪನಿಯಲ್ಲಿ ಮೌನಿಕಾ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ತವರಿಗೆ ಮರಳಿದ್ದ ಆಕೆ ತುಂಬಾ ಮೌನವಾಗಿದ್ದಳು.
ಸೋಮವಾರ ರಾತ್ರಿ ರೂಮಿಗೆ ತೆರಳಿದ ಮೌನಿಕಾ ಮಂಗಳವಾರ ಬೆಳಗ್ಗೆ ರೂಮ್​ ಬಿಟ್ಟು ಬರಲೇ ಇಲ್ಲ. ಮನೆಯವರು ಎಷ್ಟೇ ಕೂಗಿದರೂ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬ ನೆರೆ ಮನೆಯವರನ್ನು ಕರೆಸಿ, ಬಾಗಿಲು ಮುರಿದು ನೋಡಿದಾಗ ಆಕೆ ಪ್ರಜ್ಞೆಯಿಲ್ಲದೆ ಬಿದ್ದಿದ್ದಳು. ಆಕೆಯ ಪಕ್ಕದಲ್ಲೇ ಕೀಟನಾಶಕ ಬಾಟೆಲ್​ ಸಹ ಪತ್ತೆಯಾಗಿತ್ತು. ಇದರಿಂದ ಮತ್ತಷ್ಟು ಆತಂಕಕ್ಕೆ ಒಳಗಾದ ಕುಟುಂಬ ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿತು.
ಇದನ್ನೂ ಓದಿ:ಸಚಿವ ಸಂಪುಟದಿಂದ ಸುಧಾಕರ್ ವಜಾ ಆಗುವ ತನಕ ಬಿಜೆಪಿ ವಿರಮಿಸುವುದಿಲ್ಲ; ಗೋವಿಂದ ಕಾರಜೋಳ ಎಚ್ಚರಿಕೆ
ಆದರೆ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಯುವಕನೊಬ್ಬನನ್ನು ಪ್ರೀತಿ ಮಾಡುತ್ತಿದ್ದಾಗಿ 2 ತಿಂಗಳ ಹಿಂದೆ ಪಾಲಕರಿಗೆ ತಿಳಿಸಿದ್ದಳು. ಆದರೆ, ಪಾಲಕರು ಒಪ್ಪದಿದ್ದಕ್ಕೆ ಅವರೊಂದಿಗೆ ಮಾತು ಬಿಟ್ಟಿದ್ದಳು. ಇತ್ತೀಚೆಗೆ ಆ ಯುವಕ ಬೇರೆ ಯುವತಿಯೊಂದಿಗೆ ಮದುವೆ ಆಗಲು ತಯಾರಿ ಮಾಡಿಕೊಳ್ಳುತ್ತಿರುವುದನ್ನು ಪಾಲಕರಿಗೆ ಮೌನಿಕಾ ತಿಳಿಸಿದ್ದಳು. ಇದೇ ನೋವಿನಲ್ಲಿ ಆಕೆ ವಿಷ ಸೇವಿಸಿದ್ದಾಳೆ ಎಂದು ಪಾಲಕರು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಜಗದ್ಗಿರಿಗುಟ್ಟ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
VIDEO | ಆಯುಷ್ಮಾನ್ ಭವ ಉದ್ಘಾಟನೆ; ಮಹತ್ವದ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವ

ಸರ್ವಪಕ್ಷ ಸಭೆಯಲ್ಲಿ ಕಾವೇರಿ ಪ್ರಸ್ತುತ ಪರಿಸ್ಥಿತಿ ಬಗ್ಗೆ ಡಿಸಿಎಂ ಹೇಳಿದ್ದೇನು?

VIDEO| ತಾಯಿಯ ಮದುವೆಯಲ್ಲಿ ಮಲತಂದೆಯನ್ನು ಸ್ವಾಗತಿಸಿದ ಮಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + four =
Remember me
