ನವದೆಹಲಿ:ಕೆಲವು ಸಂಬಂಧಗಳು ಕೆಲವೇ ದಿನ, ವರ್ಷ, ತಿಂಗಳುಗಳವರೆಗೆ ಇರುತ್ತದೆ ಮತ್ತು ನಂತರ ಮುರಿದು ಬೀಳುತ್ತವೆ. ಸಾಮಾನ್ಯವಾಗಿ ಬ್ರೇಕಪ್ ಆದ ನಂತರ ಹುಡುಗ ಮತ್ತು ಹುಡುಗಿ ಪರಸ್ಪರ ಮಾತನಾಡುವುದನ್ನು ನಿಲ್ಲಿಸುತ್ತಾರೆ. ಆದರೆ ಅಗಲಿದ ನಂತರ ಜತೆಗಿರುವಾಗ ಆಗುವ ಖರ್ಚಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವವರೂ ಇದ್ದಾರೆ. ಇದಕ್ಕೆ ಸಂಬಂಧಿಸಿದ ಸುದ್ದಿಯೊಂದನ್ನು ನಾವು ಇಂದು ನಿಮಗೆ ತಿಳಿಸಿಕೊಡಲಿದ್ದೇವೆ…
ಒಬ್ಬ ಹುಡುಗ ತನ್ನ ಪ್ರೀತಿಯ ಬೆಲೆಯನ್ನು ಲೆಕ್ಕ ಹಾಕಿದ್ದಾನೆ. ಹೀಗಾಗಿ ತನ್ನ ಮಾಜಿ ಗೆಳತಿಯಿಂದ ಖರ್ಚು ವಸೂಲಿ ಮಾಡಲು ಯೋಚಿಸಿದ್ದಾನೆ. ಪ್ರಸ್ತುತ, ಅಂತಹ ಒಂದು ಪ್ರಕರಣವು  ಇಂದು  ಚರ್ಚೆಯ ವಿಷಯವಾಗಿದೆ. ಆನ್‌ಲೈನ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಅದರಲ್ಲಿ ಒಬ್ಬ CA ವ್ಯಕ್ತಿ ತನ್ನ ಮಾಜಿ ಗೆಳತಿಗೆ ಬ್ರೇಕಪ್ ನಂತರ ಖರ್ಚುಗಳ ಪಟ್ಟಿಯನ್ನು ಕಳುಹಿಸಿದನು ಮತ್ತು ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದ್ದಾನೆ. ಈ ಪಟ್ಟಿಯಲ್ಲಿ ಪ್ರಯಾಣದ ಕ್ಯಾಬ್ ವೆಚ್ಚಗಳು, ಚಲನಚಿತ್ರಗಳನ್ನು ನೋಡುವುದು, ಕಾಫಿ ಕುಡಿಯುವುದು ಇತ್ಯಾದಿಗಳು ಸೇರಿವೆ.

A post shared by Trolls Official (@trolls_official)

ಯುವತಿಗೆ ಏಳು ತಿಂಗಳಿಂದ ಈತನ ಜತೆ ಸಂಬಂಧವಿದೆ.   ಒಟ್ಟು 2 ಲಕ್ಷ ರೂ. ಖರ್ಚನ್ನು ಅರ್ಧಕ್ಕೆ ಇಳಿಸಿದ ಪ್ರೇಮಿ.. ಖರ್ಚಿಗೆ ಶೇ.18ರಷ್ಟು ಜಿಎಸ್ ಟಿ ಸೇರಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ. ಈ ತಮಾಷೆಯ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್​​ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ ವಿಭಿನ್ನ ಕಾಮೆಂಟ್‌ಗಳೊಂದಿಗೆ ಸುಮಾರು ಎರಡು ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ.  ಸರಿಯಾಗೆ  ಮಾಡಿದ್ಯಾ ಗುರು.. ಹೀಗೆ ಮಾಡಬೇಕು.. ನಾನು ಇದೆ ಪ್ಲ್ಯಾನ್​ ಮಾಡುತ್ತೇನೆ… ಒಳ್ಳೆಯ ಐಡಿಯಾ ಸ್ವಾಮಿ ಎಂದು ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × two =
Remember me
