ಕೇರಳ:ರಾಜ್ಯದಲ್ಲಿ ಸಾವರ್ಕರ್ ಫೋಟೋ, ಮೊಟ್ಟೆಯ ವಿಚಾರಗಳೇ ದೊಡ್ಡ ವಿವಾದವಾಗಿ ಚರ್ಚೆಯಲ್ಲಿದ್ದರೆ ಅತ್ತ ಕೇರಳದಲ್ಲಿ ಮುಸ್ಲಿಂ ಸಂಘಟನೆಯೊಂದರ ಮುಖಂಡ ವಿವಾದಾತ್ಮಕ ಹೇಳಿಕೆ ನೀಡಿದ್ದಾನೆ. ತರಗತಿಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಒಟ್ಟಿಗೆ ಕುಳಿತುಕೊಳ್ಳುವುದು ಅಪಾಯಕಾರಿ ಎಂಬುದಾಗಿ ಆತ ಹೇಳಿದ್ದಾನೆ.
ಕೇರಳದ ಇಂಡಿಯನ್​ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್​) ಸಂಘಟನೆಯ ಪ್ರಭಾರಿ ಪ್ರಧಾನ ಕಾರ್ಯದರ್ಶಿ ಪಿಎಂಎ ಸಲಾಂ ಎಂಬಾತ ಈ ಹೇಳಿಕೆ ನೀಡಿದ್ದಾನೆ. ಕೇರಳದಲ್ಲಿ ಅಲ್ಲಿನ ಸರ್ಕಾರ ಲಿಂಗಭೇದವಿಲ್ಲದ ಶಿಕ್ಷಣ ವ್ಯವಸ್ಥೆ ಪರಿಚಯಿಸುವ ಪ್ರಯತ್ನಕ್ಕೆ ಸಂಬಂಧಿಸಿ ಸಲಾಂ ಈ ಹೇಳಿಕೆ ನೀಡಿದ್ದಾನೆ.
ತರಗತಿಯಲ್ಲಿ ಹುಡುಗ-ಹುಡುಗಿಯರನ್ನು ಒಟ್ಟಿಗೆ ಕುಳ್ಳಿರಿಸುವ ಅಗತ್ಯ ಏನಿದೆ? ಯಾಕೆ ನೀವು ಅವರಿಗೆ ಅಂಥ ಅವಕಾಶ ಕಲ್ಪಿಸಿಕೊಡುತ್ತಿದ್ದೀರಿ? ಹಾಗೆ ಮಾಡುವುದು ಅಪಾಯಕಾರಿ. ಅದು ವಿದ್ಯಾರ್ಥಿಗಳನ್ನು ಕಲಿಕೆಯಿಂದ ವಿಚಲಿತಗೊಳಿಸುವುದಷ್ಟೇ ಅಲ್ಲ, ಸಮಸ್ಯೆಯನ್ನು ಸೃಷ್ಟಿಸುತ್ತದೆ ಎಂಬುದಾಗಿ ಆತ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.
ಲಿಂಗಭೇದ ಇಲ್ಲದಿರುವುದು ಧಾರ್ಮಿಕ ವಿಷಯವಲ್ಲ, ಅದು ನೈತಿಕ ವಿಷಯ. ಇದು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲಿದೆ. ನಾವು ಇದನ್ನು ವಾಪಸ್ ಪಡೆಯುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ಹೇಳಿದ್ದಾರೆ. ಮುಸ್ಲಿಂ ಸಂಘಟನೆಗಳು ಇಲ್ಲಿ ಈ ಹಿಂದೆಯೂ ಇದೇ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದ್ದವು.
ಸಾವರ್ಕರ್ ಫ್ಲೆಕ್ಸ್ ಸಂಘರ್ಷ ಮುಂದುವರಿಕೆ: ಅಲ್ಪಸಂಖ್ಯಾತ ಮುಖಂಡ ಹಾಕಿದ್ದ ಫ್ಲೆಕ್ಸ್ ತೆರವು..
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × three =
Remember me
