ತಿರುವನಂತಪುರಂ:ಬರೀ ಹೆಣ್ಣು ಮಕ್ಕಳಲ್ಲ, ಗಂಡು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯವೆಸಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ವರದಿಯೊಂದರ ಪ್ರಕಾರ ಕೇರಳದಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯಗಳಲ್ಲಿ ಶೇ. 17 ದೌರ್ಜನ್ಯಗಳು ಬಾಲಕರ ಮೇಲೇ ನಡೆದಿರುವುದು.
ಇದನ್ನೂ ಓದಿ:ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಯಚೂರು ವಿವಿ ಆರಂಭಿಸಿ; ಹೈ.ಕ. ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಆಗ್ರಹ
ಮಹಿಳಾ ಪೊಲೀಸ್​ ಬೆಟಾಲಿಯನ್​ನ ಕಮಾಂಡೆಂಟ್​ ಆರ್​​ ನಿಶಾಂತಿಣಿ ಈ ವರದಿಯನ್ನು ತಯಾರಿಸಿದ್ದಾರೆ. 2015ರಿಂದ 2019ರವರೆಗೆ ಕೇರಳ ರಾಜ್ಯವೊಂದರಲ್ಲಿ ಮಕ್ಕಳ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯಗಳ ಪಟ್ಟಿ ಆಧಾರಿಸಿ ವರದಿ ತಯಾರಿಸಲಾಗಿದೆ. ಈ ಅವಧಿಯಲ್ಲಿ 13,184 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 1,150 ಪ್ರಕರಣಗಳು ಬಾಲಕರ ಮೇಲೆ ನಡೆದಿರುವ ಲೈಂಗಿಕ ಹಿಂಸಾಚಾರದ್ದು.
ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಶೇ. 17 ರಷ್ಟು ಪ್ರಕರಣಗಳು 9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕರ ಮೇಲಿನದ್ದಾಗಿದೆ. ಶೇ. 25ರಷ್ಟು ಪ್ರಕರಣಗಳಲ್ಲಿ 10ರಿಂದ 12 ವರ್ಷ ವಯಸ್ಸಿನ ಮಕ್ಕಳು ಸಂತ್ರಸ್ತರಾಗಿದ್ದಾರೆ. ಇನ್ನುಳಿದ ಪ್ರಕರಣಗಳಲ್ಲಿ 13-14 ವರ್ಷ ವಯಸ್ಸಿನ ಮಕ್ಕಳು ಸಂತ್ರಸ್ತರಾಗಿದ್ದಾರೆ.
ಇದನ್ನೂ ಓದಿ:ಹಳ್ಳಿ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ಅಂತರ್ಜಾಲ ಶಿಕ್ಷಣ
ಸಾಮಾನ್ಯವಾಗಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವಾದರೆ, ಅವರು ಅವರ ತಂದೆ ತಾಯಿಯ ಬಳಿ ಅಥವಾ ಸ್ನೇಹಿತರ ಬಳಿ ವಿಷಯವನ್ನು ಹೇಳುತ್ತಾರೆ. ಆದರೆ ಬಾಲಕರು ಕಳಂಕ ಎದುರಿಸಲು ಹೆದರಿ, ವಿಚಾರವನ್ನು ಬಚ್ಚಿಡುತ್ತಾರೆ ಎನ್ನುತ್ತಾರೆ ವರದಿ ತಯಾರಿಸಿರುವ ನಿಶಾಂತಿಣಿ. (ಏಜೆನ್ಸೀಸ್​)
ಅಡುಗೆ ಮಾಡುವುದಕ್ಕೆ ಅಮ್ಮ-ಮಗಳ ಜಗಳ; ಊಟ ಕೊಟ್ಟಿಲ್ಲವೆಂದು ಇಬ್ಬರನ್ನೂ ಕೊಲೆ ಮಾಡಿದ ಮಗ!

ಇದೇನು ನದಿಯೋ ಅಥವಾ ರಕ್ತದೋಕಳಿಯೋ? ಗಾಬರಿಯಿಂದ ಕಂಗಾಲಾದ ಸ್ಥಳೀಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − ten =
Remember me
