ಪುಣೆ:ಜೈಲಿನಲ್ಲಿದ್ದ ಸ್ನೇಹಿತನ ಹುಟ್ಟಿದಹಬ್ಬ ಆಚರಿಸೋಕೆ ಹೋಗಿ ತಾವೂ ಜೈಲು ತಲುಪಿದ ಇಬ್ಬರು ಹುಡುಗರ ಕತೆ ಇದು. ಜೈಲಿನ ಹೊರಗೆ ಪಟಾಕಿ ಹೊಡೆದು ಗದ್ದಲ ಎಬ್ಬಿಸಿದ ಹುಡುಗರನ್ನು ಅರಸುತ್ತಾ ಹೋದ ಪೊಲೀಸರಿಗೆ ಮತ್ತೊಂದು ಕೇಸಿನ ವಾಂಟೆಡ್​ ಆರೋಪಿಗಳು ಸಿಕ್ಕ ಕುತೂಹಲಕಾರಿ ಘಟನೆ!
ಆಕಾಶ್ ಕಂಚಿಲೆ ಎಂಬ 20 ವರ್ಷದ ಯುವಕನನ್ನು ಪುಣೆ ಪೊಲೀಸರು ಕೊಲೆ ಕೇಸಿನಲ್ಲಿ ಬಂಧಿಸಿದ್ದರು. ಅವನು ಹಾಲಿ ಎರವಾಡ ಸೆಂಟ್ರಲ್ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದಾನೆ. ಫೆಬ್ರವರಿ 5 ರಂದು ಅವನ ಕೆಲವು ಸ್ನೇಹಿತರು ಜೈಲಿನ ಹೊರಗಡೆ ಪಟಾಕಿ ಹೊಡೆದು ಅವನ ಹುಟ್ಟಿದಹಬ್ಬವನ್ನು ಆಚರಿಸಿದರು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು.
ಇದನ್ನೂ ಓದಿ:ಕಾರು ತೊಳೆಯುತ್ತಿದ್ದವ ಮಾಟ ಮಂತ್ರ ಶುರು ಮಾಡಿದ ! ಈಗ ಪೊಲೀಸರ ಅತಿಥಿ!
ಈ ಬಗ್ಗೆ ಪ್ರತ್ಯೇಕ ಕೇಸು ದಾಖಲಿಸಿದ ಪೊಲೀಸರು ಈ ಕೃತ್ಯ ಎಸಗಿದವರನ್ನು ಹುಡುಕಲು ಶುರು ಮಾಡಿದರು. ಆಗ ತಿಳಿದ ವಿಷಯವೆಂದರೆ, ಪಟಾಕಿ ಹೊಡೆದ ಹುಡುಗರ ಗುಂಪಲ್ಲಿ ಇಬ್ಬರು ಎರವಾಡ ಪೊಲೀಸ್ ಠಾಣೆಯಲ್ಲಿ ದಾಖಲಾದ ಮತ್ತೊಂದು ಕೊಲೆ ಪ್ರಯತ್ನದ ಕೇಸಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು! ಇದೀಗ ಜೈಲಿನ ಬಳಿ ಪಟಾಕಿ ಹೊಡೆದು ಪೊಲೀಸರ ಗಮನ ಸೆಳೆದಿದ್ದರು.
ಈ ಹಿನ್ನೆಲೆಯಲ್ಲಿ ಆರೋಪಿಗಳಾದ 20 ವರ್ಷದ ಪ್ರಜ್ವಲ್ ಬರಾಟೆ ಮತ್ತು ಒಬ್ಬ ಅಪ್ರಾಪ್ತ ವಯಸ್ಕನನ್ನು ಪುಣೆಯ ಕಳೆವಾಡಿ ಪ್ರದೇಶದಿಂದ ಅಪರಾಧ ವಿಭಾಗದ ಪೊಲೀಸರು ಬುಧವಾರ ಬಂಧಿಸಿದರು. ಆ ಕೇಸಿನಲ್ಲಿ ಇಬ್ಬರು ಯುವಕರನ್ನು ಈ ಮುನ್ನವೇ ಬಂಧಿಸಲಾಗಿತ್ತು ಎನ್ನಲಾಗಿದೆ.(ಏಜೆನ್ಸೀಸ್)
‘ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ, ಅದಕ್ಕೇ ಪೊಲೀಸರನ್ನು ಮಾಡಿದ್ದಾನೆ ‘!

ಈ ಲೇಡಿ ಪೊಲೀಸ್​ ಓಡದಿದ್ದರೆ ಆತನ ಪ್ರಾಣವೇ ಹೋಗ್ತಿತ್ತು! ವಿಡಿಯೋ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + 15 =
Remember me
