ಹೈದ್ರಾಬಾದ್​:ನಿಮಗೆ ಸಹಾಯ ಮಾಡುವ ಗುಣ ಇದ್ದರೆ ಸಾಕು, ನಿಮ್ಮ ಮರಣದ ನಂತರ ಕೂಡಾ ಸಹಾಯ ಮಾಡಬಹುದು. ರಸ್ತೆ ಅಪಘಾತದಿಂದ ಬ್ರೈನ್​ ಡೆಡ್​​ ಆಗಿರುವ ಆಟೋಚಾಲನ ಅಂಗಾಂಗವನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ. ಇದರಿಂದ ಆರು ಮಂದಿ ಮರುಜನ್ಮ ಪಡೆದಿದ್ದಾರೆ.
ಯಾದಾದ್ರಿ ಜಿಲ್ಲೆಯ ರಾಮಣ್ಣಪೇಟೆ ಮಂಡಲದ ಇಂದ್ರಪಾಲನಗರಂ ಗ್ರಾಮದ ಅಶೋಕ್ ಆಟೋ ಚಾಲಕನಾಗಿ ಜೀವನ ಸಾಗಿಸುತ್ತಿದ್ದರು. ಆಗಸ್ಟ್ 10ರಂದು ಡಿಜೆ ಬಾಕ್ಸ್ ಖರೀದಿಸಲು ಸಂಬಂಧಿಕರೊಂದಿಗೆ ವಾಹನದಲ್ಲಿ ನಿಜಾಮಾಬಾದ್ ಗೆ ತೆರಳಿದ್ದರು. ಗಜ್ವೇಲ್ ಸಮೀಪ ಬರುವಾಗ ವಾಹನ ಅಪಘಾತಕ್ಕೀಡಾಗಿದ್ದು, ಈ ಅವಘಡದಲ್ಲಿ ವಾಹನದ ಹಿಂಬದಿ ಕುಳಿತಿದ್ದ ಅಶೋಕ್ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಶೋಕ್ ಅವರನ್ನು ಸಿಕಂದರಾಬಾದ್‌ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಶೋಕ್ ಬ್ರೈನ್ ಡೆಡ್ ಆಗಿರುವುದಾಗಿ ವೈದ್ಯರು ತಿಳಿಸಿದರು.
ಜೀವದಾನ ಟ್ರಸ್ಟ್.. ಅವರ ಕುಟುಂಬ ಸದಸ್ಯರಿಗೆ ಅಂಗಾಂಗ ದಾನದ ಅಗತ್ಯದ ಬಗ್ಗೆ ಅರಿವು ಮೂಡಿಸಿದ್ದಾರೆ. ಇತರರಿಗೆ ಜೀವದಾನ ಮಾಡುವ ಉದ್ದೇಶದಿಂದ ಅಶೋಕ್ ಅವರ ಕುಟುಂಬ ಸದಸ್ಯರು ದೊಡ್ಡ ಹೃದಯದಿಂದ ಅಂಗಾಂಗ ದಾನವನ್ನು ಸ್ವೀಕರಿಸಿದರು. ಎರಡು ಕಿಡ್ನಿ, ಹೃದಯ, ಯಕೃತ್ ಮತ್ತು ಶ್ವಾಸಕೋಶಗಳನ್ನು ತೆಗೆದು ನಾಲ್ಕು ಜನರಿಗೆ ಜೀವಂದನ ಕಸಿ ಮಾಡಲಾಗಿದೆ.
ಚಾಲಕ ಅಶೋಕ್ ಸಾವನ್ನಪ್ಪಿದ್ದು, ಆರು ಜೀವಗಳನ್ನು ಉಳಿಸಿದ್ದಾರೆ. ಅಂಗಾಂಗ ದಾನದ ಬಳಿಕ ಆಸ್ಪತ್ರೆಯ ವೈದ್ಯರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
47 ನೇ ವಯಸ್ಸಿನಲ್ಲಿ 25 ವರ್ಷದಂತೆ ಕಾಣುತ್ತಾಳೆ ಮಲ್ಲಿಕಾ ಶೆರಾವತ್! ಎಲ್ಲಾ ಈ ಜ್ಯೂಸ್​​ ಮಹಿಮೆ…

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:19 − 17 =
Remember me
