|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಹವಾಮಾನ ಬದಲಾವಣೆಯ ಒತ್ತಡದಿಂದ ಕೃಷಿ, ಮೀನುಗಾರಿಕೆ, ಆರೋಗ್ಯ ಸೇರಿ ವಿವಿಧ ವಲಯಗಳ ಮೇಲೆ ಆಗುವ ದುಷ್ಪರಿಣಾಮಗಳನ್ನು ನಿಯಂತ್ರಿಸುವ ಸಲುವಾಗಿ ರೂಪಿಸಿರುವ ಕ್ರಿಯಾ ಯೋಜನೆ ಇದೀಗ ಕೇಂದ್ರ ಸರ್ಕಾರದ ಅಂಗಳಕ್ಕೆ ಹೋಗಿದೆ.
2030ರ ವೇಳೆಗೆ ಹವಾಮಾನ ಬದಲಾವಣೆಯಿಂದಾಗುವ ಪರಿಣಾಮಗಳನ್ನು ಸಾಧ್ಯವಾದಷ್ಟು ತಡೆಗಟ್ಟುವ ಸಲುವಾಗಿ ವಿಶ್ವಸಂಸ್ಥೆಯ ಸೂಚನೆಯಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಂದ ಕ್ರಿಯಾ ಯೋಜನೆಯನ್ನು ತರಿಸಿಕೊಂಡಿದೆ. ಕೇಂದ್ರದಿಂದ ಅನುಮೋದನೆ ಸಿಕ್ಕ ಕೂಡಲೇ ನಿಯಂತ್ರಣ ಕ್ರಮಗಳನ್ನು ಆರಂಭಿಸ ಲು ಸರ್ಕಾರ ತೀರ್ವನಿಸಿದೆ. ವಿವಿಧ ವಲಯಗಳ ತಜ್ಞರಿಂದ ಪಡೆದ ಅಧ್ಯಯನ ವರದಿಗಳನ್ನು ಆಧರಿಸಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ತಜ್ಞರು ಪರಿಣಾಮಗಳು ಹಾಗೂ ನಿಯಂತ್ರಣದ ಕ್ರಮಗಳ ಬಗ್ಗೆ ತಮ್ಮ ವರದಿಗಳಲ್ಲಿ ವಿವರವಾಗಿಯೇ ಸಲ್ಲಿಸಿದ್ದರು.
ಪರಿಣಾಮಗಳು ಭೀಕರ:ಪರಿಸರದಲ್ಲಿ ಸಮತೋಲನ ಕಾಪಾಡಿ ಉಷ್ಣಾಂಶ ಹೆಚ್ಚಾಗದಂತೆ ನಿಯಂತ್ರಣ ಮಾಡದಿದ್ದರೆ ಪರಿಣಾಮಗಳು ಇಡೀ ಮನುಕುಲದ ಮೇಲೆ ಬೀಳುತ್ತವೆ. ಒಟ್ಟಾರೆ ಮನುಷ್ಯನ ಜೀವನದ ಮೇಲೆ ಪರಿಣಾಮವಾಗುತ್ತದೆ. ರಾಜ್ಯದಲ್ಲಿಯೂ ಯಾವ ಯಾವ ವಲಯದಲ್ಲಿ ಯಾವ ಮಟ್ಟಿನ ಪರಿಣಾಮಗಳಾಗುತ್ತವೆ ಎಂಬುದು ಸಾಕಷ್ಟು ಚರ್ಚೆಯಾಗಿದೆ. ಆದರೆ ಕ್ರಿಯಾ ಯೋಜನೆಗಾಗಿ ಸಲ್ಲಿಸಿರುವ ಅಧ್ಯಯನ ವರದಿಗಳು ಭೀಕರತೆಯನ್ನು ಇನ್ನಷ್ಟು ವಿಸ್ಮೃತವಾಗಿಯೇ ತಿಳಿಸಿವೆ.
ಬಡತನ ಹೆಚ್ಚಳ, ಜಿಡಿಪಿ ನಷ್ಟ:ಯುನೈಟೆಡ್ ಕಿಂಗ್​ಡಮ್ ಸಂಸ್ಥೆಯೊಂದರ ಅಧ್ಯಯನದ ಪ್ರಕಾರ, 2040ರ ವೇಳೆಗೆ ಬಾರತದಲ್ಲಿ ಹೊಸದಾಗಿ 5 ಕೋಟಿ ಜನ ಬಡತನಕ್ಕೆ ನೂಕಲ್ಪಡುತ್ತಾರೆ. ಅದನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿದೆ. ಹವಾಮಾನದಲ್ಲಿನ ಬದಲಾವಣೆಯಿಂದ ಆಗುವ ಪರಿಣಾಮಗಳಿಂದ ನಮ್ಮ ಜಿಡಿಪಿಯ ಶೇ.3.5 ನಷ್ಟವಾಗುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜಿಡಿಪಿಯ ಶೇ.20 ವೆಚ್ಚ ಮಾಡುತ್ತಿವೆ. ರಾಜ್ಯ ಸರ್ಕಾರ ಸಹ ಹೆಚ್ಚಿನ ಮೊತ್ತವನ್ನು ಬೇರೆ ಬೇರೆ ಇಲಾಖೆಗಳ ಮೂಲಕ ಖರ್ಚು ಮಾಡಲು ಸಿದ್ಧವಿರುವುದಾಗಿ ಕ್ರಿಯಾ ಯೋಜನೆಯಲ್ಲಿ ತಿಳಿಸಿದೆ ಎಂದು ಮೂಲಗಳು ಹೇಳಿವೆ.
ಜಿಲ್ಲೆಗಳಲ್ಲಿ ತರಬೇತಿ:ಕೇಂದ್ರ ಸರ್ಕಾರದಿಂದ ಕ್ರಿಯಾ ಯೋಜನೆಗೆ ಅನುಮತಿ ಸಿಕ್ಕ ಕೂಡಲೇ ರಾಜ್ಯದಲ್ಲಿ ಎಂಪ್ರಿ ಅಧಿಕಾರಿಗಳು ಹಾಗೂ ತಜ್ಞರು ಪ್ರತಿ ಜಿಲ್ಲೆಗೆ ತೆರಳಿ ಪ್ರಾತ್ಯಕ್ಷಿಕೆ ನೀಡಿ ಸರ್ಕಾರಿ ನೌಕರರು, ಸಂಘ-ಸಂಸ್ಥೆಗಳು, ಸಾರ್ವಜನಿಕರಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುವ ಬಗ್ಗೆ ಸಜ್ಜುಗೊಳಿಸಲಿದ್ದಾರೆ.
ಮಲೇಷ್ಯಾದಲ್ಲಿ ಪರಾಗ ಸ್ಪರ್ಶ ಅಧ್ಯಯನ:ಮಲೇಷ್ಯಾದಲ್ಲಿ ದುರೈನ್ ಎಂಬ ಹಣ್ಣು ಉತ್ಪಾದನೆ ಕಡಿಮೆಯಾಗಿರುವ ಬಗ್ಗೆ ಅಲ್ಲಿನ ಸರ್ಕಾರ ಅಧ್ಯಯನ ನಡೆಸಿದೆ. ಚಿಟ್ಟೆ, ಬಾವಲಿಯಂತಹ ಪರಾಗಸ್ಪರ್ಶ ನಡೆಸುವ ಕೀಟಗಳ ಸಂಖ್ಯೆ ಕಡಿಮೆಯಾಗಿರುವುದು ಕಾರಣವೆಂಬುದು ತಿಳಿದುಬಂದಿದೆ. ಅಲ್ಲಿನ ಕಾರ್ಖಾನೆಗಳಿಂದ ಬಾವುಲಿಗಳ ಸಂತತಿ ಕ್ಷೀಣಿಸುತ್ತಿದೆ.
ಪರಿಸರದ ಮೇಲಾಗುವ ಹಾನಿಯನ್ನು ಕಡಿಮೆ ಮಾಡುವುದು ಪರಿಸರ ಸಚಿವಾಲಯದ ಜವಾಬ್ದಾರಿ. ಆದರೆ ರಾಜ್ಯದಲ್ಲಿ ಪರಿಸರ ಸಚಿವರಿಗೆ ಇಲಾಖೆ ಬಗ್ಗೆ ಆಸಕ್ತಿಯೇ ಇಲ್ಲದಂತಾಗಿದೆ. ಯಡಿಯೂರಪ್ಪ ಸಂಪುಟದಲ್ಲಿ ಸಿ.ಪಿ.ಯೋಗೇಶ್ವರ್ ಪರಿಸರ ಸಚಿವರಾಗಿದ್ದರು. ಅವರು ಪ್ರವಾಸೋದ್ಯಮಕ್ಕೆ ಆಸಕ್ತಿ ತೋರಿಸಿದಷ್ಟು ಪರಿಸರದ ಬಗ್ಗೆ ತೋರಿಸಿಲಿಲ್ಲ. ಬಸವರಾಜ ಬೊಮ್ಮಾಯಿ ಅವರು ಆನಂದ ಸಿಂಗ್​ಗೆ ಈ ಖಾತೆ ನೀಡಿದ್ದಾರೆ. ಆದರೆ ಅವರಿಗೆ ಇಲಾಖೆ ಬಗ್ಗೆ ಆಸಕ್ತಿ ಇಲ್ಲ. ಕ್ರಿಯಾ ಯೋಜನೆಗೆ ಕೇಂದ್ರ ಒಪ್ಪಿಗೆ ನೀಡಿದ ಕೂಡಲೇ ಜಾರಿಗೆ ಇಲಾಖೆಗಳ ನಡುವೆ ಸೇತುವೆಯಂತೆ ಕೆಲಸ ಮಾಡಬೇಕಾದ ಪರಿಸರ ಇಲಾಖೆ ನಾವಿಕನಿಲ್ಲದ ದೋಣಿಯಂತಾಗಿದೆ.
ಪ್ಲಾಸ್ಟಿಕ್​ ಕಪ್​, ಪ್ಲೇಟ್​, ಸ್ಟ್ರಾಗಳ ಉತ್ಪಾದನೆಯೇ ಬಂದ್​; ಸರ್ಕಾರದಿಂದ ಘೋಷಣೆ

ಈತ ಡೇಟಿಂಗ್ ಕಿಂಗ್: ಇದುವರೆಗೆ 335 ಮಹಿಳೆಯರ ಜತೆ ಡೇಟ್ ಮಾಡಿರುವ ಇವನ ಟಾರ್ಗೆಟ್ ಎಷ್ಟು ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − three =
Remember me
