ನವದೆಹಲಿ:ಲಡಾಖ್​ನ ಗ್ಯಾಲ್ವಾನ್​ ಕಣಿವೆಯಲ್ಲಿ ಚೀನಾದೊಂದಿಗಿನ ಸಂಘರ್ಷದಲ್ಲಿ 20 ವೀರ ಯೋಧರು ಬಲಿಯಾಗಿದ್ದಾರೆ. ಇವರಲ್ಲಿ ಬಹುತೇಕರು ಬಿಹಾರ ರೆಜಿಮೆಂಟ್​ಗೆ ಸೇರಿದವರು.
ಸೋಮವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಚೀನಾದ 40ಕ್ಕೂ ಅಧಿಕ ಯೋಧರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.ಹುತಾತ್ಮ ಭಾರತೀಯ ಯೋಧರಲ್ಲಿ 13 ಜನರು ಬಿಹಾರ ರೆಜಿಮೆಂಟ್​ಗೆ ಸೇರಿದವರಾಗಿದ್ದಾರೆ. ಅದರಲ್ಲೂ 12 ಜನರು 16 ಬಿಹಾರ್​ ಬೆಟಾಲಿಯನ್​ನವರು. ಕರ್ನಲ್​ ಬಿ. ಸಂತೋಷ ಬಾಬು ಈ 12 ಜನರ ಪೈಕಿ ಒಬ್ಬರಾಗಿದ್ದಾರೆ. ಇನ್ನುಳಿದಂತೆ ಮೂವರು ಪಂಜಾಬ್​ ರೆಜಿಮೆಂಟ್​ಗೆ ಸೇರಿದವರು. ಇಬ್ಬರು ಮೀಡಿಯಂ ರೆಜಿಮೆಂಟ್​ನವರು. ಫೀಲ್ಡ್​ ರೆಜಿಮೆಂಟ್​ ಹಾಗೂ ಎಂಬಿಎಸ್​ಸಿಗೆ ಸೇರಿದ ತಲಾ ಒಬ್ಬ ಯೋಧ ವೀರ ಮರಣವನ್ನಪ್ಪಿದ್ದಾರೆ.
ಇದನ್ನೂ ಓದಿ;ಭಾರತಕ್ಕೆ ಪಾಕಿಸ್ತಾನಕ್ಕಿಂತಲೂ ದೊಡ್ಡ ಗಡಿ ತಂಟೆಕೋರ ಚೀನಾ….!
ಹುತಾತ್ಮ ಯೋಧರ ಪಟ್ಟಿ ಇಲ್ಲಿದೆ….* ಕರ್ನಲ್​ ಬಿಕುಮಲ್ಲಾ ಸಂತೋಷ್​ ಬಾಬು- ಹೈದರಾಬಾದ್​* ಸುಬೇದಾರ್​ ನುದುರಾಮ್​ ಸೋರೆನ್​- ಮಯೂರ್​ಬಂಜ್​* ಸುಬೇದಾರ್​ ಮನದೀಪ್​ ಸಿಂಗ್​- ಪಟಿಯಾಲಾ* ಸುಬೇದಾರ್​ ಸತ್ನಾಮ್​ ಸಿಂಗ್​- ಗುರುದಾಸ್​ಪುರ್​* ಹವಾಲ್ದಾರ್​ ಕೆ. ಪಳನಿ- ಮಧುರೈ* ಹವಾಲ್ದಾರ್​ ಸುನಿಲ್​ಕುಮಾರ್​- ಪಟನಾ* ಹವಾಲ್ದಾರ್​ ಬಿಪುಲ್​ ರಾಯ್​- ಮೀರತ್​* ದೀಪಕ್​ಕುಮಾರ್​- ರೇವಾ* ಸಿಪಾಯಿ ರಾಜೇಶ್​ ಓರಂಗ್​- ಬಿರ್​ಭೂಮ್​* ಸಿಪಾಯಿ ಕುಂದನ್​ಕುಮಾರ್​ ಒಝಾ- ಸಾಹೀಬ್​ಗಂಜ್​* ಸಿಪಾಯಿ ಗಣೇಶ್​ ರಾಮ್​- ಕಾನ್ಕೆ* ಸಿಪಾಯಿ ಚಂದ್ರಕಾಂತ್​ ಪ್ರಧಾನ್​- ಕಂದ್​ಮಲ್​* ಸಿಪಾಯಿ ಅಂಕುಶ್​- ಹಮಿರ್​ಪುರ್​* ಸಿಪಾಯಿ ಗುಲ್ವಿಂದರ್​- ಸಂಗ್ರೂರ್​* ಸಿಪಾಯಿ ಗುರುತೇಜ್​ ಸಿಂಗ್​- ಮಾನ್​ಸಾ* ಸಿಪಾಯಿ ಚಂದನ್​ ಕುಮಾರ್​- ಭೋಜ್​ಪುರ್​* ಸಿಪಾಯಿ ಕುಂದನ್​ಕುಮಾರ್​- ಸಹರ್ಸಾ* ಸಿಪಾಯಿ ಅಮನ್​ಕುಮಾರ್​- ಸಮಷ್ಟಿಪುರ* ಸಿಪಾಯಿ ಜೈಕಿಶೋರ್​ ಸಿಂಗ್​- ವೈಶಾಲಿ* ಸಿಪಾಯಿ ಗಣೇಶ್​ ಹನ್ಸ್​ದಾ ಪೂರ್ವ ಸಿಂಗ್​ಭೂಮ್​
ಇದನ್ನೂ ಓದಿ;ಮೌಂಟ್​ ಎವರೆಸ್ಟ್​ ಬುಡಕ್ಕೂ ಬಂತು ಚೀನಾ ಗಡಿ ತಂಟೆ ವಿವಾದ
ಇತ್ತೀಚಿನ ಬೆಳವಣಿಗೆಯಲ್ಲಿ ಚೀನಾ ಗ್ಯಾಲ್ವಾನ್​ ಕಣಿವೆ ತನ್ನದೇ ಎಂದು ಮೊಂಡು ವಾದ ಮಂಡಿಸುತ್ತಿದೆ. ಇತ್ತೀಚಿನ ದಶಕಗಳಲ್ಲಿಯೇ ಇಂಥದ್ದೊಂದು ಬೇಡಿಕೆ ಚೀನಾದಿಂದ ಕೇಳಿಬಂದಿರುವುದು ಇದೇ ಮೊದಲಾಗಿದೆ.
ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದೆ ಎಚ್ಚರಿಕೆ …! ಈ ಚೀನಿ ಆ್ಯಪ್​ಗಳಿದ್ದರೆ ಅಪಾಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 4 =
Remember me
