ಲಂಡನ್​: ಬ್ರಿಟನ್​ನಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಹತ್ಯೆ ಮಾಡಿ ಬಳಿಕ ಆಕೆಯ ಸ್ನೇಹಿತೆಯನ್ನು ಅನ್ನು ಕೊಲೆ ಮಾಡಲು ಯತ್ನಿಸಿದ ಆರೋಪವನ್ನು ಒಪ್ಪಿಕೊಂಡ ಬ್ರೆಜಿಲಿಯನ್ ವ್ಯಕ್ತಿಗೆ ಐಲ್‌ವರ್ತ್ ಕ್ರೌನ್ ಕೋರ್ಟ್‌ ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಜೂನ್ 13 ರಂದು ಕೆವೆನ್ ಲೌರೆಂಕೊ ಡಿ ಮೊರೈಸ್ (24) ಹೈದರಾಬಾದ್​​​ ಮಹಿಳೆ ಕೊಂಥಮ್ ತೇಜಸ್ವಿನಿ (27) ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಹಿರಿದು ಕೊಂದಿದ್ದ. ನಂತರ ತನ್ನ ಸ್ನೇಹಿತೆಗೆ ಕರೆ ಮಾಡಿ ನಾನು ಭಾರತೀಯ ಹೆಣ್ಣುಮಕ್ಕಳನ್ನು ಕೊಂದಿದ್ದೇನೆ ಎಂದು ಹೇಳಿದನು. ಫೋನ್ ಲೊಕೇಶನ್ ಡೇಟಾ ಬಳಸಿ ಟ್ರ್ಯಾಕ್​ ಮಾಡಿದ ಪೊಲೀಸರು ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದರು. ಸತತ ಆರು ತಿಂಗಳ ಕಾಲ ನಡೆದ ವಿಚಾರಣೆಯ ನಂತರ ಕೆವಿನ್, ತೇಜಸ್ವಿನಿ (27)ಯನ್ನು ಹತ್ಯೆ ಮಾಡಿದ್ದಾಗಿ ಮತ್ತು ಆಕೆಯ ರೂಮ್​ಮೇಟ್​​ ಅಖಿಲಾ ಜನಗಾಮ (ಈಗ 29) ಅವರನ್ನು ಕೊಲೆ ಮಾಡಲು ಯತ್ನಿಸಿದ್ದನ್ನು ಒಪ್ಪಿಕೊಂಡಿದ್ದಾನೆ.
ಇದನ್ನು ಓದಿhttps://www.vijayavani.net/request-modi-to-read-gandhis-autobiography-kharge-on-pms-world-came-to-know-about-gandhi-after-film-remark
ಕೆವಿನ್ ಪ್ಯಾರನಾಯ್ಡ್ ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನೆ. ಹತ್ಯೆ ಮಾಡಿದ ಸಂದರ್ಭದಲ್ಲಿ ಆತನ ಮಾನಸಿಕ ಸ್ಥಿತಿ ಸರಿಯಿರಲಿಲ್ಲ ಎಂದು ಗಮನಿಸಿದ ನ್ಯಾಯಾಧೀಶ ಮಾರ್ಟಿನ್ ಎಡ್ಮಂಡ್ಸ್ ಮೆಂಟಲ್​ ಹೆಲ್ತ್​ ಆ್ಯಕ್ಟ್​ ಸೆಕ್ಷನ್​ 37/41 ಪ್ರಕಾರ ಆಸ್ಪತ್ರೆಯಲ್ಲಿಯೇ ಬಂಧನ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಶಿಕ್ಷೆ ಪ್ರಕಟಿಸಿದ ಬಳಿಕ ಆರೋಪಿಯನ್ನು ಬೆಕೆನ್‌ಹ್ಯಾಮ್‌ನಲ್ಲಿರುವ ಬೆಥ್ಲೆಮ್ ರಾಯಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಗ್ರೀನ್‌ವಿಚ್ ವಿಶ್ವವಿದ್ಯಾನಿಲಯದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಓದಲು ವಿದ್ಯಾರ್ಥಿ ವೀಸಾದಲ್ಲಿ ಕೊಂಥಮ್ ತೇಜಸ್ವಿನಿ 2020ರಲ್ಲಿ ಹೈದರಾಬಾದ್‌ನಿಂದ ಲಂಡನ್‌ಗೆ ತೆರಳಿದ್ದರು. ನಂತರ ವೆಂಬ್ಲಿಯಲ್ಲಿ ಟೀಮ್ ಲೀಡರ್ ಆಗಿ ಕೆಲಸಕ್ಕೆ ಸೇರಿದ್ದರು. ಮಾರ್ಚ್ 2023ರಲ್ಲಿ ಅಖಿಲಾ ಜನಗಾಮ ಭೇಟಿಯಾದ ತೇಜಸ್ವಿನಿ ಇಬ್ಬರು ರೂಮ್​​ಮೇಟ್​ಗಳಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಭಾರತೀಯ ಸೇನೆ ಗಣರಾಜ್ಯೋತ್ಸವ ಪರೇಡ್‌ಗೆ ಮಾತ್ರ ಸೀಮಿತವಲ್ಲ: ಪ್ರಧಾನಿ ಮೋದಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × five =
Remember me
