ಬ್ರೆಜಿಲ್​:ಫುಟ್ಬಾಲ್​ ದಂತಕಥೆ ಪೀಲೆ ಎಂದೇ ಖ್ಯಾತರಾಗಿದ್ದ ಎಡ್ಸನ್​ ಅರಾಂಟೆಸ್​ ಡು ನಸಿಮೆಂಟೊ(82) ಅವರು ಗುರುವಾರ ತಡರಾತ್ರಿ ನಿಧನರಾದರು.
ಫುಟ್ಬಾಲ್​ನ ಮಾಸ್ಟರ್ ಮೈಂಡ್​, ಬ್ರೆಜಿಲ್​ನ ಸ್ಟಾರ್​ ಆಟಗಾರ ಪೀಲೆ ಅವರು ಮೂರು ಬಾರಿ(1958, 1962 ಮತ್ತು 1970) ವಿಶ್ವಕಪ್​ ಟೂರ್ನಿಯಲ್ಲಿ ಬ್ರೆಜಿಲ್​ ತಂಡವನ್ನ ಚಾಂಪಿಯನ್​ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕೆಲ ವರ್ಷಗಳಿಂದ ಕರುಳಿನ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಪೀಲೆ ಅವರಿಗೆ ಕಳೆದ ವರ್ಷ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು. ಕಳೆದ ತಿಂಗಳು ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ನವೆಂಬರ್​ ಕೊನೇ ವಾರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಕಿಮೊಥೆರಪಿ ಚಿಕಿತ್ಸೆಗೆ ಅವರ ದೇಹ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಕ್ಯಾನ್ಸರ್​ ಉಲ್ಬಣಗೊಂಡಿತ್ತು. ಉಸಿರಾಟ ಸಮಸ್ಯೆಯಿಂದಲೂ ಬಳಲುತ್ತಿದ್ದರು. ನುರಿತ ವೈದ್ಯರ ತಂಡ ಚಿಕಿತ್ಸೆ ನೀಡಿತ್ತಾದರೂ ಪ್ರಯೋಜನವಾಗಲಿಲ್ಲ. ಗುರುವಾರ ತಡರಾತ್ರಿ ಆಸ್ಪತ್ರೆಯಲ್ಲೇ ಬ್ರೆಜಿಲ್​ನ ದಂತಕಥೆ ಪೀಲೆ ಕೊನೆಯುಸಿರೆಳೆದರು. ತಂದೆ ಇನ್ನಿಲ್ಲ ಎಂಬ ಸುದ್ದಿಯಲ್ಲಿ ಅವರ ಪುತ್ರಿ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಗಣ್ಯರು, ಅಭಿಮಾನಿಗಳು ಪೀಲೆ ಅವರ ನಿಧನದ ಸುದ್ದಿ ಕೇಳಿ ಕಂಬನಿ ಮಿಡಿದಿದ್ದಾರೆ.
1940ರ ಅಕ್ಟೋಬರ್​ 23ರಂದು ಬ್ರೆಜಿಲ್​ನ ಟ್ರೆಸ್​ ಕೊರಾಕೋಸ್​ನಲ್ಲಿ ಜನಿಸಿದ್ದ ಪೀಲೆ ಅವರು 1957ರಲ್ಲಿ ರಾಷ್ಟ್ರೀಯ ಫುಟ್ಬಾಲ್​ ತಂಡಕ್ಕೆ ಪದಾರ್ಪಣೆ ಮಾಡಿದರು. 1000ಕ್ಕೂ ಹೆಚ್ಚು ಗೋಲ್​ಗಳನ್ನು ದಾಖಲಿಸಿದ್ದರು. 1977ರಲ್ಲಿ ನಿವೃತ್ತಿ ಘೋಷಿಸಿದ್ದರು. 1995-98ರ ಅವಧಿಯಲ್ಲಿ ಬ್ರೆಜಿಲ್​ ದೇಶದ ಕ್ರೀಡಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಮೂರು ಮದುವೆ ಆಗಿದ್ದ ಪೀಲೆ ಅವರಿಗೆ 7 ಮಕ್ಕಳಿದ್ದಾರೆ.(ಏಜೆನ್ಸೀಸ್​)
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ನಿಧನ

ಅಡಕೆ ಬೆಳೆಗೆ ಇನ್ನು ಮುಂದೆ ಭವಿಷ್ಯವಿಲ್ಲ!

ಬೆಂಗ್ಳೂರಲ್ಲಿ ಕಿಡ್ನ್ಯಾಪ್​, ಚಿಕ್ಕಬಳ್ಳಾಪುರದಲ್ಲಿ ಕೊಲೆ, ಚಾರ್ಮಾಡಿಘಾಟ್​ನಲ್ಲಿ ಶವ! ಕರವೇ ಅಧ್ಯಕ್ಷ ಸೇರಿ ಐವರ ಬಂಧನ, 9 ತಿಂಗಳ ಬಳಿಕ ರಹಸ್ಯ ಬಯಲಾಗಿದ್ದೇ ರೋಚಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
