ನವದೆಹಲಿ:ಪಂಚ ರಾಷ್ಟ್ರಗಳ ಬ್ರಿಕ್ಸ್ (ಬ್ರೆಜಿಲ್-ರಷ್ಯಾ-ಇಂಡಿಯಾ-ಚೀನಾ-ಸೌತ್ ಆಫ್ರಿಕಾ) ಉಗ್ರ ನಿಗ್ರಹ ಕ್ರಿಯಾ ಯೋಜನೆಯನ್ನು ಈಗಾಗಲೇ ಅಳವಡಿಸಿಕೊಂಡಿದೆ. ಇದನ್ನು ಮುಂದಿನ 15 ವರ್ಷಗಳ ಅವಧಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕೆ ಸದಸ್ಯ ರಾಷ್ಟ್ರಗಳು ಗಮನಹರಿಸಬೇಕು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದ್ದಾರೆ.
ಅವರು ‘ಬ್ರಿಕ್ಸ್ಃ15-ಇಂಟ್ರಾ ಬ್ರಿಕ್ಸ್ ಕೋಆಪರೇಷನ್ ಫಾರ್ ಕಂಟಿನ್ಯುಟಿ, ಕನ್ಸೋಲಿಡೇಶನ್ ಆಂಡ್ ಕನ್ಸೆನ್ಸಸ್’ ಎಂಬ ವಿಷಯದ ವರ್ಚುವಲ್​ಶೃಂಗವನ್ನು ಉದ್ದೇಶಿಸಿ ಮಾತನಾಡಿದರು. 15 ವರ್ಷಗಳ ಅವಧಿಯಲ್ಲಿ ಬ್ರಿಕ್ಸ್ ಅನೇಕ ಸಾಧನೆಗಳನ್ನು ಮಾಡಿದೆ. ಜಗತ್ತಿನ ಉದಯೋನ್ಮುಖ ಆರ್ಥಿಕತೆಗಳ ಪ್ರಭಾವಿ ಧ್ವನಿಯಾಗಿ ನಾವು ಹೊರಹೊಮ್ಮಿದ್ದೇವೆ. ಈ ವೇದಿಕೆಯು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆದ್ಯತೆಗಳನ್ನು ಪ್ರತಿಪಾದಿಸುವುದಕ್ಕೂ ಬಳಕೆಯಾಗಬೇಕು ಎಂದು ಮೋದಿ ಹೇಳಿದರು. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್, ಸೌತ್ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ, ಬ್ರೆಜಿಲ್​ನ ಜೇರ್ ಬೊಲ್ಸನಾರೊ ಈ ಶೃಂಗದಲ್ಲಿ ಭಾಗವಹಿಸಿದರು. ಬ್ರಿಕ್ಸ್ ಶೃಂಗ ಇದು ಎರಡನೇ ಸಲ ಮೋದಿ ಅಧ್ಯಕ್ಷತೆಯಲ್ಲಿ ನಡೆದಿರುವಂಥದ್ದು. ಇದಕ್ಕೂ ಮೊದಲು 2016ರಲ್ಲಿ ಗೋವಾದಲ್ಲಿ ನಡೆದಿತ್ತು.
ಚೀನಾದಿಂದ ಆರ್ಥಿಕ ನೆರವು:ಅಫ್ಘನ್​ನ ತಾಲಿಬಾನ್ ಮಧ್ಯಂತರ ಸರ್ಕಾರಕ್ಕೆ ನೆರವಿನ ರೂಪದಲ್ಲಿ ಚೀನಾ 31 ದಶಲಕ್ಷ ಡಾಲರ್ ಘೋಷಿಸಿದೆ. ವಿದೇಶಾಂಗ ಸಚಿವರ ಸಭೆಯಲ್ಲಿ ಈ ನೆರವು ಘೋಷಣೆಯಾಗಿದೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಈ ವಿಷಯ ಘೋಷಿಸಿದ್ದು, ಅಫ್ಘನ್​ಗೆ ಧಾನ್ಯಗಳು, ಚಳಿಗಾಲಕ್ಕೆ ಅಗತ್ಯ ವಸ್ತುಗಳು, ಲಸಿಕೆ ಮತ್ತು ಔಷಧ ಗಳನ್ನು ಒದಗಿಸಲಾಗುತ್ತಿದೆ ಎಂದಿದ್ದಾರೆ.
ತಾಲಿಬಾನ್ ಸದ್ಯ ಮಧ್ಯಂತರ ಸರ್ಕಾರವನ್ನು ರಚಿಸಿದೆ. ಆದರೆ, ಡ್ರಗ್ಸ್ ಸಾಗಣೆ, ಭಯೋತ್ಪಾ ದನೆಗಳ ಮೂಲವಾಗಿ ಅಫ್ಘನ್ ನೆರೆಹೊರೆಯ ರಾಷ್ಟ್ರಗಳಿಗೆ ಬೆದರಿಕೆಯಾಗಬಾರದು. ದಶಕಗಳ ಕಾಲ ಇದರ ವಿರುದ್ಧ ಹೋರಾಟ ನಡೆಸಿದವರು ಅಫ್ಘನ್ ಪ್ರಜೆಗಳು. ಅವರ ಹಕ್ಕುಗಳನ್ನು ಚಲಾಯಿಸುವುದಕ್ಕೆ ಅವಕಾಶ ನೀಡಬೇಕು.
|ವ್ಲಾದಿಮಿರ್ ಪುತಿನ್ರಷ್ಯಾ ಅಧ್ಯಕ್ಷ
9/11ರಂದು ತಾಲಿಬಾನ್ ಸಚಿವರ ಪ್ರಮಾಣ ಸ್ವೀಕಾರ?:ಅಫ್ಘಾನಿಸ್ತಾನದ ಮಧ್ಯಂತರ ಸರ್ಕಾರದ ಸಚಿವರು ಸೆ. 11ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆ ದಿನ ತಾಲಿಬಾನಿಗಳ ಮಟ್ಟಿಗೆ ಮಹತ್ವದ ದಿನ. ಸರ್ಕಾರದ ಪ್ರಮಾಣಕ್ಕೆ ಚೀನಾ, ರಷ್ಯಾ, ಇರಾನ್, ಟರ್ಕಿ, ಕತಾರ್​ನ ನಾಯಕರಿಗೆ ಆಹ್ವಾನವನ್ನು ತಾಲಿಬಾನ್ ಕಳುಹಿಸಿದೆ. ಈ ಮೂಲಕ ಹೊಸ ವಿದೇಶಾಂಗ ನೀತಿಯನ್ನು ಅನುಸರಿಸುವುದಕ್ಕೆ ಅದು ದಾರಿ ಮಾಡಿಕೊಂಡಿದೆ.
ದಾಳಿಗೆ 20 ವರ್ಷ:ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರ (ಡಬ್ಲ್ಯುಟಿಸಿ)ದ ಮೇಲೆ ಉಗ್ರರು ದಾಳಿ ನಡೆಸಿ ನೆಲಸಮ ಮಾಡಿ ಸೆ.11ಕ್ಕೆ 20 ವರ್ಷವಾಗುತ್ತಿದೆ. ಅಲ್ ಕೈದಾ ಸಂಘಟನೆ ಈ ದಾಳಿ ನಡೆಸಿತ್ತು. 2,996 ಜನ ಈ ದಾಳಿಗೆ ಬಲಿಯಾಗಿದ್ದರು. ಇದಾದ ಕೆಲವೇ ದಿನಗಳ ಬಳಿಕ ಅಮೆರಿಕ ಸೇನೆ ಅಫ್ಘನ್​ನಲ್ಲಿ ನೆಲೆಯೂರಿ ಉಗ್ರ ದಮನ ಕಾರ್ಯ ಆರಂಭಿಸಿತ್ತು. ಆದರೆ, ಪಾಕಿಸ್ಥಾನದ ಕುತಂತ್ರದ ಕಾರಣ ಉದ್ದೇಶ ಪೂರ್ಣವಾಗಿ ಈಡೇರಿಸಲಾಗದೆ ಅಮೆರಿಕ ಸೇನೆ ಅಲ್ಲಿಂದ ಹಿಂದಿರುಗಿದೆ. ಈ ಸಂತೋಷವನ್ನು ಈಗ ತಾಲಿಬಾನಿಗಳು ಈ ಮೂಲಕ ಸಂಭ್ರಮಿಸಲು ಮುಂದಾಗಿದ್ದಾರೆ.
ಹಕ್ಕಾನಿ ನಿರ್ಬಂಧ ತೆರವಿಗೆ ಆಗ್ರಹ:ಅಮೆರಿಕ ನಮ್ಮನ್ನು ನಡೆಸಿಕೊಂಡ ರೀತಿ ಮರೆಯ ಲಾಗದು. ನಮಗೆ ಮುಜುಗರವನ್ನು ಉಂಟುಮಾಡಿದ ಅಮೆರಿಕಕ್ಕೂ ನಾವು ಮುಜುಗರದ ಅನುಭವ ನೀಡುತ್ತೇವೆ. ನಮ್ಮ ಗೃಹ ಸಚಿವ ಅವರ ನಿರ್ಬಂಧ ಪಟ್ಟಿಯಲ್ಲಿರುವುದು ನಮಗೆ ಮುಜುಗರದ ವಿಚಾರ. ಪಟ್ಟಿಯಲ್ಲಿರುವ ಎಲ್ಲ ಹಕ್ಕಾನಿ ನೆಟ್ವರ್ಕ್ ಉಗ್ರರ ಹೆಸರುಗಳನ್ನು ಕೈಬಿಡಬೇಕು. ದೋಹಾ ಒಪ್ಪಂದದ ಪ್ರಕಾರ ಇದು ನಡೆಯಬೇಕು. ಇಲ್ಲದೇ ಇದ್ದರೆ ಅದರ ಉಲ್ಲಂಘನೆಯಾಗುತ್ತದೆ ಎಂದು ತಾಲಿಬಾನ್ ಹೇಳಿದೆ. ಅಲ್ಲದೆ, ಕಾಬುಲ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಕಟ್ಟಡದ ಮೇಲಿನ ಮ್ಯೂರಲ್ ಮೇಲೆ ಬೃಹತ್ ತಾಲಿಬಾನ್ ಧ್ವಜ ಹಾರಿಸಲಾಗಿದೆ.
ಪತ್ರಕರ್ತರಿಗೆ ಛಡಿ ಏಟು:ಕಾಬುಲ್​ನಲ್ಲಿ ನಡೆದ ಮಹಿಳೆಯರ ಪ್ರತಿಭಟನೆಯ ವರದಿ ಮಾಡಿದ ಪತ್ರಕರ್ತರನ್ನು ಬಂಧಿಸಿದ ತಾಲಿಬಾನ್ ಅವರಿಗೆ ಛಡಿ ಏಟು ನೀಡಿದೆ. ಲಾಸ್​ಏಂಜಲೀಸ್ ಟೈಮ್ಸ್​ನ ಪ್ರತಿನಿಧಿ ಮರ್ಕಸ್ ಯಾಮ್ ಅಫ್ಘನ್ ಸುದ್ದಿ ಸಂಸ್ಥೆಯ ಪ್ರತಿನಿಧಿ ಎಟಿಲಾಟ್ರೋಝå್ ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ. ಫೋಟೋದಲ್ಲಿ ಇಬ್ಬರು ಪುರುಷರ ಬೆನ್ನಿನ ಭಾಗ ತೋರಿಸಲಾಗಿದ್ದು, ಛಡಿ ಏಟಿನ ಬರೆಗಳು ಕಾಣುತ್ತಿವೆ. ದರ್ಯಾಬಿ (ವಿಡಿಯೋ ಜರ್ನಲಿಸ್ಟ್ ) ಮತ್ತು ನಖ್ದಿ (ವರದಿಗಾರ) ಛಡಿ ಏಟು ತಿಂದ ಪತ್ರಕರ್ತರು.
ಅಹ್ಮದ್ ಷಾ ಮಸೂದ್ ಸಮಾಧಿ ನಾಶ:ಪಂಜ್​ಶೀರ್​ನಲ್ಲಿ ನಾರ್ದರ್ನ್ ಅಲಯನ್ಸ್ ಸಂಸ್ಥಾಪಕ ದಿವಂಗತ ಅಹ್ಮದ್ ಷಾ ಮಸೂದ್ ಅವರ ಸಮಾಧಿಯನ್ನು ತಾಲಿಬಾನಿಗಳು ನಾಶಮಾಡಿದ್ದಾರೆ. ಅವರ 20ನೇ ಪುಣ್ಯತಿಥಿಯಂದು ಈ ಕಾರ್ಯ ನಡೆದಿದೆ. ಅಹ್ಮದ್ ಷಾ ಮಸೂದ್​ರನ್ನು ಅಫ್ಘನ್ ‘ರಾಷ್ಟ್ರೀಯ ನಾಯಕ’ ಎಂದು ಪರಿಗಣಿಸಿತ್ತು.
ಚೀನಾದಿಂದ ಭಾರತಕ್ಕೆ ಮತ್ತಷ್ಟು ಆತಂಕ; 76 ಪುಟಗಳ ಅಧ್ಯಯನ ವರದಿಯಲ್ಲಿ ಹಲವು ವಿಷಯ ಬಹಿರಂಗ!

ಭಾರತದಲ್ಲಿ ಇನ್ನು ಈ ಕಾರು ಉತ್ಪಾದನೆ ಆಗುವುದಿಲ್ಲ; ಸದ್ಯಕ್ಕೆ ಇರುವ ದಾಸ್ತಾನಷ್ಟೇ ಮಾರಾಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 7 =
Remember me
