ಇಂದೋರ್:ಇಂದೋರ್ ನಗರದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವರ ಹಾಗೂ ವಧುವಿನ ನಡುವೆ ವಾಗ್ವಾದದ ನಂತರ ವಿಷ ಇಬ್ಬರೂ ಸೇವಿಸಿದ್ದಾರೆ. ಈ ಪ್ರಕರಣದಲ್ಲಿ ದುರದದೃಷ್ಟವಶಾತ್ ವರ ಸಾವಿಗೆ ಶರಣಾಗುವಲ್ಲಿ ಯಶಸ್ವಿಯಾಗಿದ್ದು ವಧುವಿನ ಸ್ಥಿತಿ ಗಂಭೀರವಾಗಿದೆ.
21 ವರ್ಷದ ವರ ಸಾವನ್ನಪ್ಪಿದ್ದು ಮದುವೆ ಸಂಭ್ರಮಾಚರಣೆ ದುರಂತ ಘಟನೆಗೆ ತಿರುಗಿದೆ. ಇಬ್ಬರೂ ವಿಷ ಸೇವಿಸಿದ ವಿಚಾರ ತಿಳಿದ ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಅಲ್ಲಿ ವರ ಮೃತಪಟ್ಟಿದ್ದಾನೆ. ವಧು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಈ ಘಟನೆ ಮಂಗಳವಾರ ನಡೆದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ರಂಜಾನ್ ಖಾನ್, ಕನಾಡಿಯಾ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ಜಗಳ ನಡೆದ ಕಾರಣ ವರನು ವಿಷ ಸೇವಿಸಿ ತನ್ನ 20 ವರ್ಷದ ವಧುವಿಗೆ ಈ ವಿಷಯವನ್ನು ತಿಳಿಸಿದ್ದಾನೆ. ಇದನ್ನು ತಿಳಿದ ತಕ್ಷಣ ವಧು ಕೂಡ ವಿಷ ಸೇವಿಸಿದ್ದಾಳೆ. ಮದುಮಗ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದು, ಜೀವರಕ್ಷಕ ವ್ಯವಸ್ಥೆಯಲ್ಲಿರುವ ಮಹಿಳೆಯ ಸ್ಥಿತಿ ಗಂಭೀರವಾಗಿದೆ” ಎಂದರು.
ವರನ ಕುಟುಂಬದ ಸದಸ್ಯರು ಮಾತ್ರ ಕಳೆದ ಹಲವು ದಿನಗಳಿಂದ ಯುವತಿ ತನ್ನನ್ನು ಮದುವೆಯಾಗುವಂತೆ ಯುವಕನ ಮೇಲೆ ಒತ್ತಡ ಹೇರುತ್ತಿದ್ದಳು. ಆದರೆ ಯುವಕ ಮಾತ್ರ ತನ್ನ ವೃತ್ತಿಜೀವನದ ಅಭಿವೃದ್ಧಿಗಾಗಿ ಎರಡು ವರ್ಷಗಳ ಕಾಲಾವಕಾಶ ಕೋರಿದ್ದ. ಈ ಸಂದರ್ಭ ಯುವತಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು ಎಂದಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 6 =
Remember me
