ಪುಲ್​ಪಲ್ಲಿ (ಕೇರಳ):ಹೊಸ ತಲೆಮಾರಿನ ವಿವಾಹ ಟ್ರೆಂಡ್​ಗಳು ಅಚ್ಚರಿಯನ್ನು ಉಂಟುಮಾಡುವಂಥವು. ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಕ್ಷಣಗಳು ಯಾವತ್ತೂ ನೆನಪಿರಬೇಕು ಎಂಬ ಕಾರಣಕ್ಕೆ ಅಚ್ಚಳಿಯದ ಅಚ್ಚರಿಯನ್ನು ಜೋಡಿಸುತ್ತಾರೆ. ಅಂಥ ಅಚ್ಚರಿಯಲ್ಲಿ ಹೆಲಿಕಾಪ್ಟರ್​ನಲ್ಲಿ ಆಗಮಿಸಿದ ಮದುಮಗಳ ಈ ಕಥೆ ಕೂಡ ಸೇರ್ಪಡೆ.
ವಯನಾಡು ಜಿಲ್ಲೆಯ ಪುಲ್​ಪಲ್ಲಿ ಎಂಬಲ್ಲಿರು ಪಯಸ್ಸಿರಾಜ ಕಾಲೇಜು ಮೈದಾನದಲ್ಲಿ ಸೋಮವಾರ ಅಪರಾಹ್ನ ಹೆಲಿಕಾಪ್ಟರ್ ಬಂದಿಳಿದದ್ದು ನೋಡಿ ಸ್ಥಳೀಯರೆಲ್ಲ ಅಚ್ಚರಿಯಿಂದ ನೋಡತೊಡಗಿದರು. ಸಂಸದ ರಾಹುಲ್ ಗಾಂಧಿ ಬಂದ್ರೇನೋ ಅಂತ ಜನ ನೋಡಿದ್ರೆ ಆ ಹೆಲಿಕಾಪ್ಟರ್​ನಿಂದ ಇಳಿದು ಬಂದದ್ದು ‘ಮದುಮಗಳು’! ಸ್ಥಳೀಯರು ಈಗ ನಿಜಕ್ಕೂ ಕಣ್ಣರಳಿಸಿಯೇ ನೋಡತೊಡಗಿದರು.
ಇದನ್ನೂ ಓದಿ:2,800 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡ ಬಿಬಿಎಂಪಿ- ಬಿಲ್ ಪಾವತಿಸದಿದ್ದರೆ ರಸ್ತೆ ಬಂದ್ ಮಾಡ್ತೇವೆಂದ ಗುತ್ತಿಗೆದಾರರು
ಇಡುಕ್ಕಿಯ ವಂಡನ್​ಮೇಡು ನಿವಾಸಿ ಲ್ಯೂಕ್ ಥಾಮಸ್ ಮತ್ತು ಲಿಸ್ಸಿ ಅವರ ಪುತ್ರಿ ಮರಿಯಾ ಲ್ಯೂಕ್​ ಆ ಮದುಮಗಳು. ಆಕೆಯ ವಿವಾಹ ಕಾರ್ಯಕ್ರಮ ಅಡಿಕೊಳ್ಳಿ ಸೇಂಟ್ ಸೆಬಾಸ್ಟಿಯನ್ ಚರ್ಚ್​ನಲ್ಲಿ ಸ್ಥಳೀಯ ನಿವಾಸಿ ಟೋಮಿ ಮತ್ತು ಡೋಲಿ ಅವರ ಪುತ್ರ ವೈಶಾಖ್ ಜತೆಗೆ ನಿಗದಿಯಾಗಿತ್ತು. ಅದಕ್ಕಾಗಿ ಆಕೆ ಬಂದಿಳಿದ ಕ್ಷಣ ಇದಾಗಿದ್ದು, ಸದ್ಯ ಟಾಕ್ ಆಫ್ ದ ಟೌನ್ ಆಗಿದೆಯಂತೆ! (ಏಜೆನ್ಸೀಸ್)
ಟ್ರಾಫಿಕ್ ಸಿಗ್ನಲ್​ನ ಬ್ಯಾಟರಿ ಕಳವು – ಶಂಕರಮಠ ಜಂಕ್ಷನ್​ನಲ್ಲಿ ಕೃತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 3 =
Remember me
