ನೀಲಗಿರಿ:ನವ ಜೀವನಕ್ಕೆ ಕಾಲಿಡುತ್ತಿದ್ದೇನೆ ಎಂಬ ಖುಷಿಯಲ್ಲಿ ಹೊಸ ಹುರುಪಿನೊಂದಿಗೆ ಮದುವೆ ಮಂಟಪದ ಹಸೆಮಣೆಯಲ್ಲಿ ಕುಳಿತಿದ್ದ ವರನೊಬ್ಬ ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಚಪ್ಪಾಳೆ ತಟ್ಟುತ್ತಾ ವಧು ಹೇಳಿದ ಮಾತು ಕೇಳಿ ಒಂದು ಕ್ಷಣ ದಿಗಿಲು ಬಡಿದಂತಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮದುವೆ ಮಂಟಪಕ್ಕೆ ವಧು ಅಥವಾ ವರ ಬರದೇ ಸಮಾರಂಭ ನಿಂತಿರುವುದನ್ನು ಕೇಳಿದ್ದೇವೆ. ಯಾವುದಾದರೂ ಅನಾಹುತ ಸಂಭವಿಸಿದಾಗಲೂ ಮದುವೆ ಕಾರ್ಯ ನಿಂತಿರುತ್ತದೆ. ಆದರೆ, ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೋಟಗಿರಿಯಲ್ಲಿ ನಡೆದ ಘಟನೆ ಇದಕ್ಕೆ ತದ್ವಿರುದ್ಧವಾಗಿದೆ.
ತಾಳಿ ಕಟ್ಟುವವರೆಗೂ ಅಂದುಕೊಂಡಂತೆ ಎಲ್ಲವೂ ಸುಸೂತ್ರವಾಗಿಯೇ ನಡೆದಿತ್ತು. ವಧುವೂ ಸಹ ಖುಷಿಯಾಗಿಯೇ ಮಂಟಪಕ್ಕೆ ಅಲಂಕಾರ ಸಮೇತ ಬಂದಿದ್ದಳು. ಅವಳನ್ನು ನೋಡಿ ವರನೂ ಸಹ ಉಲ್ಲಾಸಗೊಂಡಿದ್ದನ್ನು. ಹೊಸ ಜೀವನ ಪ್ರಾರಂಭಿಸಲು ತುದಿಗಾಲಲ್ಲಿ ನಿಂತಿದ್ದ ವರ ಇನ್ನೇನು ವಧುವಿಗೆ ತಾಳಿ ಕಟ್ಟಬೇಕು ಅಷ್ಟರಲ್ಲಿ ವಧು ಚಪ್ಪಾಳೆ ತಟ್ಟುತ್ತಾ ನನಗೆ ಮದುವೆ ಇಷ್ಟವಿಲ್ಲ ಎನ್ನುವುದನ್ನು ಕೇಳಿ ಇಡೀ ಮದುವೆ ಮಂಟಪ ನಿಶ್ಯಬ್ಧಕ್ಕೆ ಜಾರಿತ್ತು.
ಹೌದು, ನೀಲಗಿರಿ ಜಿಲ್ಲೆಯ ಕೋಟಗಿರಿ ನಿವಾಸಿ ಪ್ರಿಯದರ್ಶಿನಿಗೂ ಅದೇ ಜಿಲ್ಲೆಯ ವ್ಯಕ್ತಿಯೊಬ್ಬನೊಂದಿಗೂ ಮದುವೆ ನಿಶ್ಚಯವಾಗಿತ್ತು. ಅದರಂತೆಯೇ ನಿನ್ನೆ (ಅ. 31) ಮದುವೆ ಸಮಾರಂಭವೂ ಜರುಗಿತ್ತು. ತಾಳಿ ಕಟ್ಟುವ ಸಮಯದಲ್ಲಿ ವರನಿಗೆ ಶಾಕ್​ ನೀಡಿದ ವಧು, ಚಪ್ಪಾಳೆ ತಟ್ಟುತ್ತಾ ಮದುವೆ ಇಷ್ಟವಿಲ್ಲ. ಇನ್ನು ಅರ್ಧ ಗಂಟೆಯಲ್ಲಿ ನನ್ನ ಪ್ರಿಯಕರ ಆಗಮಿಸುತ್ತಾನೆ ಎಂದು ವರನಿಗೆ ಹೇಳುತ್ತಾಳೆ. ಅದನ್ನು ಕೇಳಿದ ವರ ಶಾಕ್​ನಿಂದ ಒಂದೂ ತಿಳಿಯದಂತೆ ಹಿರಿಯರತ್ತ ಮುಖ ತಿರುಗಿಸುತ್ತಾನೆ.
ವಧು ಏನೇ ಹೇಳಿದರು ವರ ಮಾತ್ರ ಕುಳಿತ ಜಾಗದಿಂದ ಕದಲುವುದೇ ಇಲ್ಲ. ಆಸೆಯ ಕಣ್ಣುಗಳಿಂದ ಆಕೆಯನ್ನೇ ನೋಡುವಾಗ ಇದ್ದಕ್ಕಿದಂತೆ ಎದ್ದು ನಿಲ್ಲುವ ವಧು ಅಲ್ಲಿಂದ ಹೊರಡಲು ಮುಂದಾಗುತ್ತಾಳೆ. ಈ ವೇಳೆ ಮಧ್ಯ ಪ್ರವೇಶಿಸುವ ಆಕೆಯ ಮನೆಯವರು ಕಪಾಳಕ್ಕೆ ಬಾರಿಸಿದರೂ ಆ ಬಗ್ಗೆ ತಲೆ ಕೆಡೆಸಿಕೊಳ್ಳದ ಪ್ರಿಯದರ್ಶಿನಿ ಮಂಟಪದಿಂದ ಹೊರನಡೆಯುತ್ತಾಳೆ.
ಆದರೆ, ಆಕೆಯ ಪ್ರಿಯಕರ ಮಾತ್ರ ಮಂಟಪಕ್ಕೆ ಬರುವುದೇ ಇಲ್ಲ. ಅತ್ತ ವರನೂ ಸಹ ದುಃಖದಿಂದಲೇ ಅಲ್ಲಿಂದ ನಿರ್ಗಮಿಸುತ್ತಾರೆ. ಇತ್ತ ವಧುವಿನ ಮನೆಯವರು ಆಕೆಯನ್ನು ಶಪಿಸುತ್ತಲೇ ಮಗಳ ಹಿಂದೆ ಹೋಗುತ್ತಾರೆ. ಆದರೆ, ವಧು ಮಾತ್ರ ಯಾರಿಗೂ ಸಿಗದೇ ಅಲ್ಲಿಂದ ಹೊರಡುತ್ತಾಳೆ.(ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − twelve =
Remember me
