ಅಸ್ಸಾಂ:ಮದ್ಯಪಾನವೇ ಇಲ್ಲೊಬ್ಬನ ಮದುವೆಗೆ ಮುಳುವಾಗಿದೆ. ಮದುವೆಯ ದಿನವೂ ಮದ್ಯವನ್ನು ಬಿಡದ ವರ ಕುಡಿದುಕೊಂಡೇ ಕಲ್ಯಾಣಮಂಟಪಕ್ಕೆ ಬಂದಿದ್ದರಿಂದ ಮದುವೆಯೇ ನಿಂತುಹೋಗಿದೆ. ಅಸ್ಸಾಂ ರಾಜ್ಯದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.
ಅಸ್ಸಾಮ್​ನ ನಲ್ಬರಿ ಜಿಲ್ಲೆಯ ಬರ್ಖಾನಜನ್ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಪ್ರಸನ್​ಜಿತ್ ಹಲೊಯ್​ ಮದುವೆವಂಚಿತ ವರ. ಈತ ತನ್ನ ಮದುವೆಯ ದಿನದಂದೂ ಪಾನಮತ್ತನಾಗಿದ್ದು, ಕಲ್ಯಾಣಮಂಟಪಕ್ಕೆ ಅಮಲಿನಲ್ಲೇ ಬಂದಿದ್ದ. ಈತ ಎಷ್ಟರಮಟ್ಟಿಗೆ ಕುಡಿದಿದ್ದ ಎಂದರೆ ಕಲ್ಯಾಣಮಂಟಪದಲ್ಲಿ ಸರಿಯಾಗಿ ಕುಳಿತುಕೊಳ್ಳಲಿಕ್ಕೂ ಆಗುತ್ತಿರಲಿಲ್ಲ.
ಇದನ್ನೂ ಓದಿ:ಪ್ರಿಯಕರನ ಭೇಟಿಗೆಂದು ಬಂದ ಗಗನಸಖಿ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವು; ಪರಿಚಯ-ಪ್ರೇಮವಾದ 6 ತಿಂಗಳಲ್ಲೇ ಮರಣ
ವರನ ಕಡೆಯ ವ್ಯಕ್ತಿಯೊಬ್ಬ ಆತನಿಗೆ ಆಧಾರ ಒದಗಿಸುತ್ತಿದ್ದರೂ ಆತ ಪಕ್ಕಕ್ಕೆ ವಾಲುತ್ತಿದ್ದ. ವರ ಮಾತ್ರವಲ್ಲದೆ ಆತನ ತಂದೆಯೂ ಪಾನಮತ್ತನಾಗಿ ಬಂದಿದ್ದು, ಆತ ಕಾರಿನಿಂದ ಇಳಿಯಲೂ ಕಷ್ಟ ಪಟ್ಟಿದ್ದ. ಇದನ್ನೆಲ್ಲ ನೋಡಿದ ವಧು ತನಗೆ ಈ ಮದುವೆಯೇ ಬೇಡ ಎಂದಿದ್ದಾಳೆ. ಈ ಸಂಬಂಧವಾಗಿ ವಧುವಿನ ಕಡೆಯವರು ಪೊಲೀಸರಿಗೆ ದೂರು ನೀಡಿದ್ದು, ಅವರು ವಧುಗೆ ರಕ್ಷಣೆ ನೀಡಿ ಅಲ್ಲಿಂದ ತೆರಳಲು ಅನುವು ಮಾಡಿಕೊಟ್ಟಿದ್ದಾರೆ.
ಕರಗ ಕುರಿತು ಅವಹೇಳನಕಾರಿ ಮಾತಾಡಿದ ಶಾಸಕ ಹ್ಯಾರಿಸ್; ಭಾರಿ ಪ್ರತಿಭಟನೆಯ ಸುಳಿವು ಸಿಗುತ್ತಿದ್ದಂತೆ ಕ್ಷಮೆಯಾಚನೆ

ದೇವಸ್ಥಾನದ ರಥದ ಮುಕ್ತಿಬಾವುಟಕ್ಕೆ ಭಾರಿ ಬೇಡಿಕೆ; ಊಹೆಗೂ ಮೀರಿದ ಭರ್ಜರಿ ಮೊತ್ತಕ್ಕೆ ಹರಾಜು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 6 =
Remember me
