ಉತ್ತರ ಪ್ರದೇಶ:ಮೊದಲ ರಾತ್ರಿಯಂದು ವಧುವಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಪರಿಕ್ಷಿಸಿದ ವೈದ್ಯರ ಮಾತು ಕೇಳಿ, ವರ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾನೆ.
ಕಳೆದ ಸೋಮವಾರ ಗ್ರೇಟರ್ ನೋಯ್ಡಾದ ಹಳ್ಳಿಯೊಂದರ ವ್ಯಕ್ತಿ ಸಿಕಂದ್ರಾಬಾದ್‌ನ ಯುವತಿಯೊಬ್ಬಳನ್ನು ಮದುವೆಯಾಗಿದ್ದಾನೆ. ಕಾರ್ಯಕ್ರಮವೆಲ್ಲ ಸುಸೂತ್ರವಾಗಿಯೇ ನಡೆದಿದೆ. ಅಂದು ರಾತ್ರಿ ವಧು-ವರರಿಬ್ಬರು ಕೋಣೆ ಸೇರಿದ್ದಾರೆ. ಈ ವೇಳೆ ಆಕೆಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿದ್ದು, ತಡ ಮಾಡದೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಪರೀಕ್ಷಿಸಿದ ವೈದ್ಯರು ಏನಾಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದನ್ನು ಕೇಳಿದ ವರನಿಗೆ ಒಂದು ಕ್ಷಣ ಏನೂ ತೋಚದಂತಹ ಪರಿಸ್ಥಿತಿ.
ಇದನ್ನೂ ಓದಿ:ಆಡುಗಳ ಮೇಲೆ ‘ಅಲ್ಲಾ’ ಗುರುತು ಪತ್ತೆ! 51 ಲಕ್ಷ ರೂ.ಗೆ ಮಾರಾಟವಾಯ್ತು ಜೋಡಿ ಮೇಕೆ
ಹೊಟ್ಟೆ ನೋವೆಂದು ಆಸ್ಪತ್ರೆ ಸೇರಿದ ನವವಿವಾಹಿತೆಯನ್ನು ಪರೀಕ್ಷಿಸಿದ ವೈದ್ಯರು, ಈಕೆ ಏಳು ತಿಂಗಳ ಗರ್ಭಿಣಿ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದಾಗಿ ಒಂದು ದಿನ ಕಳೆಯುತ್ತಿದ್ದಂತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಅಸಲಿಗೆ ಯುವತಿ ಮದುವೆಗೂ ಮೊದಲೇ ಗರ್ಭ ಧರಿಸಿದ್ದಳು. ಆದರೆ ಪಾಲಕರು ಮಗಳ ಈ ವಿಚಾರವನ್ನು ವರನ ಮನೆಯವರಿಗೆ ತಿಳಿಸದೆ ಮದುವೆ ಮಾಡಿದ್ದಾರೆ.
ಮದುವೆ ಮಾತುಕತೆ ವೇಳೆ ಮಗಳಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಇದರಿಂದಾಗಿ ಹೊಟ್ಟೆ ಸ್ವಲ್ಪ ಊದಿಕೊಂಡಿದೆ ಎಂದು ವರನ ಮನೆಯವರಿಗೆ ತಿಳಿಸಲಾಗಿತ್ತು. ಇದನ್ನು ನಂಬಿದ್ದ ಯುವಕ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದ. ಇದೀಗ ಆಕೆ ಮದುವೆಯಾಗಿ ಒಂದು ದಿನ ಕಳೆಯುತ್ತಿದ್ದಂತೆ ಹೆಣ್ಣು ಮಗುವಿಗೆ ಜನ್ಮ ನೀಡಿರುವುದನ್ನು ಕಂಡು ಆತ ಆಘಾತಕ್ಕೊಳಗಾಗಿದ್ದಾನೆ.
ಇದನ್ನೂ ಓದಿ:ಮೊದಲ ಬಾರಿ ಚುಂಬಿಸಿ ಡೆಟಾಲ್​ನಿಂದ ಬಾಯಿ ತೊಳೆದಿದ್ದರಂತೆ ಬಾಲಿವುಡ್​ನ ಈ ನಟಿ!
ಹೆರಿಗೆಯಾಗುತ್ತಿದ್ದಂತೆ ಯುವತಿ ಮನೆಯವರಿಗೆ ಮಾಹಿತಿ ನೀಡಲಾಗಿದೆ. ಅವರು ಸಿಕಂದ್ರಾಬಾದ್‌ನಿಂದ ಬಂದು ತಾಯಿ ಮತ್ತು ಮಗುವನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಎರಡೂ ಕುಟುಂಬಗಳು ಮಾತುಕತೆ ಮೂಲಕ ಒಪ್ಪಂದ ಮಾಡಿಕೊಂಡಿದ್ದು ನೂತನ ವಧು-ವರರು ದೂರವಾಗಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಘಟನೆಯ ಬಗ್ಗೆ ಮಾಹಿತಿ ಬಂದಿದೆ ಎಂದು ದಂಕೌರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಂಜಯ್ ಸಿಂಗ್ ಹೇಳಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 14 =
Remember me
