ಮೂರು ಗಂಟಿನ ಮದುವೆನೂರು ವರ್ಷಕ್ಕೂ ಮೀರಿದ್ದು ಎನ್ನುತ್ತಾರೆ ನಮ್ಮ ಹಿರಿಯರು. ದಾಂಪತ್ಯಕ್ಕೆ ಕಾಲಿಟ್ಟು ಜೀವನದ ಎರಡನೇ ಅಧ್ಯಾಯವನ್ನು ಪ್ರಾರಂಭಿಸುವ ಮೂಲಕ ಹತ್ತಾರು ಕನಸು ಕಾಣುವ ಅದೆಷ್ಟೋ ನವ ಜೋಡಿಗಳು, ನಮ್ಮ ಲೈಫ್​ ಹೀಗಿರಬೇಕು, ಹಾಗಿರಬೇಕು ಎಂದೆಲ್ಲಾ ಪೂರ್ವ ಯೋಜನೆ ಹಾಕಿಕೊಳ್ಳುತ್ತಾರೆ. ಆದ್ರೆ, ಹಸೆಮಣೆ ಏರುವ ಮುನ್ನ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ತಾಳಿ ಕಟ್ಟಲು ಇನ್ನೇನು ಕೆಲವೇ ಕ್ಷಣಗಳು ಬಾಕಿ ಎಂದಾಗ ಕೆಲವರ ಬಣ್ಣ ಬಟಾಬಯಲಾಗುವುದು ನಿಜಕ್ಕೂ ಒಂದು ಕ್ಷಣ ನಿಂತಲ್ಲೇ ಕುಸಿಯುವಂತೆ ಮಾಡುತ್ತದೆ. ಅಂತಹದ್ದೇ ಒಂದು ಘಟನೆ ಇಲ್ಲೂ ನಡೆದಿದೆ.
ಇದನ್ನೂ ಓದಿ:ಕಂಕುಳಿನ ದುರ್ವಾಸನೆಯಿಂದ ಬೇಕಾ ಮುಕ್ತಿ? ಹಾಗಾದ್ರೆ ಈ ಸಿಂಪಲ್ ಟಿಪ್​ ಅನುಸರಿಸಿ, ಆಮೇಲೆ ನೋಡಿ ಚಮತ್ಕಾರ!
ಹುಡುಗಿಯನ್ನು ಒಪ್ಪುವ ಹುಡುಗನ ಮನೆಯವರು ತಮ್ಮ ಮಗನಿಗೆ ಇಷ್ಟು ವರದಕ್ಷಿಣೆ ಕೊಡಬೇಕು, ಇಂತಹದ್ದೇ ವಸ್ತುಗಳನ್ನು ಕೊಡುವುದು ಒಳಿತು ಎಂದು ವಧುವಿನ ಮನೆಯವರಿಗೆ ಹತ್ತು ಹಲವು ಷರತ್ತುಗಳನ್ನು ವಿಧಿಸುತ್ತಾರೆ. ಆದರೆ, ಕೆಲವೇ ಕೆಲವರು ಮಾತ್ರ ವರನ ಈ ವರದಕ್ಷಿಣೆ ಕಂಡಿಷನ್​ಗಳನ್ನು ಸುತರಾಮ್ ಒಪ್ಪದೆ, ತಿರಸ್ಕರಿಸುತ್ತಾರೆ. ಮದುವೆ ಸಂಬಂಧವನ್ನು ಕಡಿತಗೊಳಿಸುತ್ತಾರೆ. ಇದು ಮದುವೆಯ ಮುನ್ನವೇ ನಡೆದರೆ ಬಹಳ ಒಳ್ಳೆಯದು ಎಂದು ಅನೇಕರು ಅಭಿಪ್ರಾಯಿಸುತ್ತಾರೆ. ಈ ಯುವತಿಯ ಬಾಳಿನಲ್ಲೂ ಅದೇ ರೀತಿ ಆಗಿದ್ದಿದ್ದರೆ, ಬಹುಶಃ ಇಂದು ಆಕೆ ಕಣ್ಣೀರಿನಲ್ಲಿ ಕೈತೊಳೆಯುವಂತ ಪರಿಸ್ಥಿತಿ ಬರುತ್ತಿರಲಿಲ್ಲ.
ವರದಿ ಪ್ರಕಾರ, ತಮ್ಮ ಮಗಳಿಗೆ ಹುಡುಗನನ್ನು ತಾವೇ ನಿಶ್ಚಯಿಸಿದ್ದ ಪೋಷಕರು, ವಿವಾಹಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಈ ವೇಳೆ ತಾಳಿ ಕಟ್ಟಲು ಇನ್ನೇನು ಕೆಲವೇ ಕೆಲವು ಕ್ಷಣಗಳು ಮಾತ್ರ ಬಾಕಿ ಉಳಿದಿದೆ ಎನ್ನುವಷ್ಟರಲ್ಲಿ ವರ ತನ್ನ ಕಿರಾತಕ ಬುದ್ದಿಯನ್ನು ತೋರಿಸಿದ್ದಾನೆ. ಇದರಿಂದ ಮದುವೆ ಸಮಾರಂಭಕ್ಕೆ ಬಂದಿದ್ದ ಅತಿಥಿಗಳಿಗೆ ಭಾರೀ ಅಘಾತ ಉಂಟಾಗಿದ್ದು, ಯುವತಿ ಕುಟುಂಬಸ್ಥರು ನಿಂತಲ್ಲೇ ಕುಸಿದಿದ್ದಾರೆ. ಈ ಘಟನೆ ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಹಾಲಿ ಚಾಂಪಿಯನ್ಸ್‌ಗೆ ಹಿನ್ನಡೆ, ಲಂಕೆಗೆ ವಾಪಸ್ ಆದ ಪಥಿರಣ: ಪಂಜಾಬ್ ವಿರುದ್ಧ ವಿಶಿಷ್ಠ ದಾಖಲೆ ಬರೆದ ಧೋನಿ
ಮದುವೆಯಾಗುವ ಮುನ್ನ ವರದಕ್ಷಿಣೆ ಆಸೆಯಿಂದ ವಧು ಮನೆಯವರಿಗೆ ಬೇಡಿಕೆಯಿಟ್ಟದ್ದ ವರ, ತನಗೆ ಹ್ಯೂಂಡಾಯ್​ ಕ್ರೇಟಾ ಕಾರನ್ನು ವಿವಾಹದ ದಿನ ಕೊಡಬೇಕು ಎಂದು ಷರತ್ತು ವಿಧಿಸಿದ್ದ. ಇದಕ್ಕೆ ಪ್ರಾರಂಭದಲ್ಲಿ ಒಪ್ಪಿದ್ದ ಯುವತಿ ಕುಟುಂಬಸ್ಥರು, ದುಬಾರಿ ಕಾರನ್ನು ವರನಿಗೆ ವರದಕ್ಷಿಣೆಯಾಗಿ ಕೊಡಲು ಬಹಳ ಪರದಾಡಿದ್ದಾರೆ. ತದನಂತರ ಮುಂದೆ ಏನು ಮಾಡೋದು ಎಂದು ಯೋಚಿಸಿ, ಬೇರೆ ದಾರಿ ಇಲ್ಲದೆ, ಕ್ರೇಟಾ ಬದಲಿಗೆ ವ್ಯಾಗನ್​ ಆರ್​​ ಕಾರನ್ನು ಕೊಟ್ಟಿದ್ದಾರೆ. ಈ ವಿಷಯ ಆತನ ಗಮನಕ್ಕೆ ಬಂದಿದ್ದೇ ತಡ ಮುಂದೆ ಆಗಿದ್ದೆಲ್ಲಾ ಅವಾಂತರ!
ತನ್ನ ಬೇಡಿಕೆ ಈಡೇರಿಸದ ವಧುವಿನ ಕುಟುಂಬಸ್ಥರ ವಿರುದ್ಧ ಕಿಡಿಕಾರಿದ ವರ, ತಾಳಿ ಕಟ್ಟುವ ಬದಲು ನನಗೆ ಈ ಮದುವೆ ಬೇಡ. ಆಕೆಯ ಮನೆಯವರು ನನಗೆ ಮೋಸ ಮಾಡಿದ್ದಾರೆ ಎಂದು ವಿವಾಹ ಮುರಿದು, ಸ್ಥಳದಿಂದ ಎದ್ದು ಹೋಗಿದ್ದಾನೆ. ಇದರಿಂದ ಮನನೊಂದ ವಧು, ಕುಳಿತ ಜಾಗದಲ್ಲೇ ಎಲ್ಲರ ಮುಂದೆ ಕಣ್ಣೀರಿಟ್ಟಿದ್ದು, ಮದುವೆ ರದ್ದುಗೊಳಿಸಿದ ಆತನನ್ನು ದಯವಿಟ್ಟು ಬಂಧಿಸಿ, ನನಗೆ ನ್ಯಾಯ ಕೊಡಿಸಿ ಎಂದು ತನ್ನ ಅಳಲು ತೋಡಿಕೊಂಡಿದ್ದಾಳೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).
5 ರೂ. ಪಾರ್ಲೆ-ಜಿ ಬಿಸ್ಕತ್​ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

ಈತ ಕ್ರೀಸ್​ಗೆ ಬಂದ್ರೆ ಬೌಲರ್​ಗಳೇ ಬೆವರುತ್ತಾರೆ! ಅಜಯ್​ ಜಡೇಜಾ ಹೆಸರಿಸಿದ ಸ್ಟಾರ್​ ಬ್ಯಾಟ್ಸ್​ಮನ್ ಇವರೇ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 14 =
Remember me
