ನವದೆಹಲಿ:ಮದುವೆಯೊಂದರ ಫೋಟೋಗ್ರಫಿಗೆ ಹೋಗಿದ್ದ ಫೋಟೋಗ್ರಾಫರ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆತನಿಗೆ ಆರ್ಡರ್ ಕೊಟ್ಟಿದ್ದ ವಧು ಹಣ ವಾಪಸ್ ಕೊಡುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆಲ್ಲ ಮೂಲಕಾರಣವಾಗಿರುವ ಸಂಗತಿಯೊಂದು ಹೊರಬಿದ್ದಿದ್ದು, ವಿಷಯ ಇದೀಗ ಜಗಜ್ಜಾಹೀರಾಗಿದೆ.
ಈ ವಿಚಿತ್ರ ಪ್ರಸಂಗದ ಕುರಿತು ಫೋಟೋಗ್ರಾಫರ್​ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡು ಪರಿಹಾರ ಕೇಳಿದ್ದಾನೆ. ಈ ಫೋಟೋಗ್ರಾಫರ್ ಇತ್ತೀಚೆಗೆ ಮದುವೆಯೊಂದಕ್ಕೆ ಹೋಗಿದ್ದ. ಅದಕ್ಕಾಗಿ ಸಹಾಯಕನಾಗಿ ಬರುತ್ತಿದ್ದವ ಅಂದು ಲಭ್ಯವಿರದ್ದರಿಂದ ಆನ್​​ಲೈನ್​ನಲ್ಲಿ ಹುಡುಕಾಡಿದ್ದ. ಆಗ ಒಬ್ಬಳು ಲೇಡಿ ಫೋಟೋಗ್ರಾಫರ್​ ಲಭಿಸಿದ್ದು, ಆಕೆಯನ್ನು ಸಹಾಯಕಿ ಆಗಿ ಕರೆದುಕೊಂಡು ಮದುವೆಗೆ ಹೋಗಿದ್ದ.
ಮದುವೆ ಫೋಟೋಗ್ರಫಿ ಎಲ್ಲ ಮುಗಿದು ಅದಕ್ಕಾಗಿ ಹಣವೂ ಪಾವತಿ ಆಗಿದ್ದೆಲ್ಲವೂ ಮುಗಿದ ಮೇಲೆ ಫೋಟೋಗ್ರಾಫರ್​ಗೆ ಬಂದಿರುವ ಇ-ಮೇಲ್ ಆತನನ್ನು ಚಿಂತೆಗೀಡುಮಾಡಿದೆ. ಅದು ಆತ ಹೋಗಿದ್ದ ಮದುವೆಯ ವಧು ಕಳಿಸಿದ್ದ ಇ-ಮೇಲ್. ನಿಮ್ಮೊಂದಿಗೆ ಬಂದಿದ್ದ ಸಹಾಯಕಿ ನನ್ನ ಪತಿ ಜತೆ ಅಫೇರ್ ಹೊಂದಿದ್ದು, ಫೋಟೋಗ್ರಫಿಗೆ ನೀಡಿದ್ದ ಹಣ ಹಿಂದಿರುಗಿಸಿ ಎಂದು ಆಕೆ ಒತ್ತಾಯಿಸಿ ಇ-ಮೇಲ್​ ಕಳಿಸಿದ್ದಳು.​
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ನಾನು ಅಂದು ನನ್ನ ಸಹಾಯಕ ಇರದ್ದರಿಂದ ಆನ್​ಲೈನ್​ನಲ್ಲಿ ಸಿಕ್ಕ ಲೇಡಿ ಫೋಟೋಗ್ರಾಫರ್​​ನ ಸಹಾಯಕಿ ಆಗಿ ಕರೆದುಕೊಂಡು ಹೋಗಿದ್ದೆ. ಆದರೆ ಆಕೆ ಮದುವೆ ಬಳಿಕ ವರನೊಂದಿಗೆ ಅಫೇರ್​ ಹೊಂದಿ ಜತೆಗೇ ಮಲಗಿದ್ದ ವಿಷಯ ವಧುವಿನಿಂದಾಗಿ ಬೆಳಕಿಗೆ ಬಂದಿದೆ. ಆಕೆ ಅದಕ್ಕೆ ಸಂಬಂಧಿತ ಫೋಟೋ ಕೂಡ ಕಳಿಸಿಕೊಟ್ಟಿದ್ದಾಳೆ. ವಧು ಬಗ್ಗೆ ಬೇಸರವಾಗುತ್ತಿದೆಯಾದರೂ ನಾನೀಗ ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ಫೋಟೋಗ್ರಾಫರ್ ರೆಡ್ಡಿಟ್​ನಲ್ಲಿ ಹೇಳಿಕೊಂಡಿದ್ದಾನೆ. –ಏಜೆನ್ಸೀಸ್
ಡಾ.ರಾಜ್ ಕುಟುಂಬದಲ್ಲಿ ಒಬ್ಬರ ಹಿಂದೊಬ್ಬರ ಸಾವು; ಕಾರಣ ತಿಳಿಯಲು ಸದ್ಯದಲ್ಲೇ ಅಷ್ಟಮಂಗಲ ಪ್ರಶ್ನೆ!

ಭಾರತದ ಮಕ್ಕಳ ಅಶ್ಲೀಲ ಚಿತ್ರ ಸಂಗ್ರಹಿಸಿದ್ದ ಲಂಡನ್ ಶಿಕ್ಷಕನಿಗೆ 12 ವರ್ಷ ಜೈಲುಶಿಕ್ಷೆ: ಈತನ ಬಳಿ ಸಿಕ್ಕಿವೆ 1.2 ಲಕ್ಷ ಫೋಟೋಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
