ಲಖನೌ:ಮದುವೆ ವೇದಿಕೆ ಮೇಲಿದ್ದ ವಧು ಇನ್ನೇನು ಸಪ್ತಪದಿ ತುಳಿದು ನಂತರ ಗಂಡನ ಮನೆಗೆ ತೆರಳಬೇಕು ಎನ್ನುವಷ್ಟರಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅದಾದ ನಂತರ ಅದೇ ಮಂಟಪದಲ್ಲಿ ವಧುವಿನ ತಂಗಿಯನ್ನೇ ವರ ಮದುವೆಯಾಗಿ ಕರೆದುಕೊಂಡು ಹೋಗಿರುವುದಾಗಿ ಹೇಳಲಾಗಿದೆ.
ಉತ್ತರಪ್ರದೇಶದ ಸಮಸ್ಪುರ ಹೆಸರಿನ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಸುರಭಿ ಹೆಸರಿನ ಯುವತಿಗೆ ಮಂಜೇಶ ಹೆಸರಿನ ಯುವಕನೊಂದಿಗೆ ಮೇ 25ಕ್ಕೆ ಮದುವೆ ನಡೆಯುವುದಿತ್ತು. ಆ ದಿನ ರಾತ್ರಿ ಮುಹೂರ್ತವಿದ್ದಿದ್ದರಿಂದ ವರನ ಕಡೆಯ ದಿಬ್ಬಣ ವಧುವಿನ ಮನೆಗೆ ಸೇರಿತ್ತು. ವಧು ವರರಿಬ್ಬರೂ ವೇದಿಕೆಯನ್ನು ಹತ್ತಿ ವರಮಾಲೆಯನ್ನೂ ಬದಲಾಯಿಸಿಕೊಂಡಿದ್ದರು. ಅವರಿಬ್ಬರು ಇನ್ನೇನು ಸಪ್ತಪದಿ ತುಳಿಯುಬೇಕು ಎನ್ನುವಷ್ಟರಲ್ಲಿ ಸುರಭಿ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ.
ತಕ್ಷಣ ಕುಟುಂಬಸ್ಥರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಕೆ ಅದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಆಕೆಯನ್ನು ವಾಪಾಸು ಮನೆಗೆ ಕರೆದುಕೊಂಡು ಬರಲಾಗಿದೆ. ಕುಟುಂಬಸ್ಥರು ಒಪ್ಪಿ ಆಕೆಯ ತಂಗಿಯನ್ನು ಮಂಜೇಶನಿಗೆ ಮದುವೆ ಮಾಡಿಕೊಡಲು ನಿರ್ಧರಿಸಿದ್ದಾರೆ.
ಸುರಭಿಯ ಮೃತದೇಹವನ್ನು ಮನೆಯ ಕೋಣೆಯಲ್ಲಿ ಮಲಗಿಸಿ, ಮದುವೆ ಕಾರ್ಯಕ್ರಮವನ್ನು ಮುಂದುವರಿಸಲಾಗಿದೆ. ಶಾಸ್ತ್ರೋಸ್ತ್ರವಾಗಿ ಮದುವೆ ಮಾಡಿ ಮೃತಳ ತಂಗಿಯನ್ನು ಗಂಡನ ಮನೆಗೆ ಕಳುಹಿಸಿಕೊಟ್ಟ ನಂತರ ಆಕೆಯ ಅಂತ್ಯಸಂಸ್ಕಾರ ಮಾಡಲಾಗಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್​)
ಅತ್ತೆಯ ಕುಪ್ಪಸದಿಂದ ಅವಳದ್ದೇ ಕತ್ತು ಹಿಸುಕಿದ ಸೊಸೆ! ಪೊದೆಯಲ್ಲಿ ಅಡಗಿತ್ತು ಮಗ ಸೊಸೆಯ ರಹಸ್ಯ

ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 13 =
Remember me
