ನವದೆಹಲಿ:ಆಕೆ ಎರಡು ಬಾರಿ ಮದುವೆಯಾಗಿದ್ದವಳು. ಮೂರನೇ ಬಾರಿ ಮದುವೆಯಾಗಿ ಗಂಡನೊಂದಿಗೆ ಕ್ಯಾಲಿಫೋರ್ನಿಯಾಗೆ ಹಾರಬೇಕಿತ್ತು. ಆದರೆ, ಚಾಲಾಕಿ ಅತ್ತೆ ಅದಕ್ಕೆ ಅವಕಾಶ ಕೊಡಲಿಲ್ಲ.
ಜಾರ್ಖಂಡ್​ ಮೂಲದ ಮಹಿಳೆ ಮೊದಲ ಬಾರಿಗೆ ಗಿರಿಧ್​ ಜಿಲ್ಲೆಯ ರಾಜ್​ಧನ್ವರ್​ನ ನಿಲಯ್​ಕುಮಾರ್​ ಎಂಬುವರನ್ನು ಮದುವೆಯಾಗಿ ಎರಡು ವರ್ಷ ಸಂಸಾರ ನಡೆಸಿದ್ದಳು. ಬಳಿಕ ಆತ ಒಂದು ಕೋಟಿ ರೂ. ಕೊಡುವಂತೆ ಮಾಡಿ ಅಲ್ಲಿಮದ ಕಾಲ್ಕಿತ್ತಿದ್ದಳು.
ಇದನ್ನೂ ಓದಿ;3 ವರ್ಷ ಪ್ರೀತಿಸಿ ಮದ್ವೆಯಾದ 2 ತಿಂಗಳಿಗೆ ಪತ್ನಿಗೆ ಬೆಂಕಿಯಿಟ್ಟ ಪತಿ: ಕಾರಣ ಕೇಳಿದ್ರೆ ಪ್ರೀತಿಗೆ ಕಳಂಕ ಅಂತಿರಾ
ಇದಾದ ಬಳಿಕ ಗುಜರಾತ್​ನ ಅಮಿತ್​ ಮೋದಿ ಎಂಬುವರನ್ನು ಬಲೆಗೆ ಬೀಳಿಸಿಕೊಂಡ ಮಹಿಳೆ ಆತನನ್ನು ಮದುವೆಯಾದಳು. ಕುಟುಂಬ ಕಷ್ಟದಲ್ಲಿದೆ ಎಂದು ನೆಪ ಹೇಳಿ 40- 45 ಲಕ್ಷ ರೂ. ವಂಚಿಸಿದ್ದಳು. ಡಿವೋರ್ಸ್​ ಸಿಗದಾದಾಗ ತನ್ನ ತಂಗಿ ದೆಹಲಿಗೆ ತೆರಳುತ್ತಿದ್ದು, ಬಿಟ್ಟು ಬರುವುದಾಗಿ ಹೇಳಿ ಮನೆಯಿಂದ ಹೋದವಳು ಮತ್ತೆ ಮರಳಲೇ ಇಲ್ಲ.
ಇದಾದ ಬಳಿಕ ಪುಣೆಯ ಸುಮಿತ್​ ದಶರತ್​ ಪವಾರ್​ ಎಂಬುವರನ್ನು ಮದುವೆಯಾದಳು. ಈತ ಕ್ಯಾಲಿಫೋರ್ನಿಯಾದಲ್ಲಿ ಉದ್ಯೋಗದಲ್ಲಿದ್ದ. ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಲು ತನ್ನ ಊರಾದ ಛತ್ರ ಜಿಲ್ಲೆಯ ಇಟ್ಕೋರಿ ಗ್ರಾಮದ ವಿಳಾಸ ಬಳಸಲೇಬೇಕಾಯಿತು. ಈ ನಡುವೆ, ಆಕೆಯ ಫೋನ್​ ಅತ್ತೆಯ ಕೈಗೆ ಸಿಕ್ಕಿತ್ತು. ಅದರಲ್ಲಿ ಆಕೆ ತನ್ನ ಹಳೆಯ ಗಂಡಂದಿರ ಜತೆಗಿರುವ ಫೋಟೋ ಸಿಕ್ಕಿದೆ. ಇದರಿಂದ ಸಂಶಯಗೊಂಡ ಅತ್ತೆ ವಿಚಾರಣೆ ನಡೆಸಿದಾಗ ಈಕೆಯ ಬಣ್ಣವೆಲ್ಲ ಬಯಲಾಗಿದೆ.
ಇದನ್ನೂ ಓದಿ;ಮ್ಯಾಟ್ರಿಮೊನಿ ಸೈಟ್​ಗಳೇ ಈತನಿಗೆ ಆದಾಯ ಮೂಲ; ಪೊಲೀಸ್​ ಬಲೆಗೆ ಬಿದ್ದವನದ್ದು ಭಯಂಕರ ಇತಿಹಾಸ
ಪ್ರತಿಬಾರಿ ಮದುವೆಯಾಗುವಾಗಲೂ ಆಕೆ ಮ್ಯಾಟ್ರಿಮೋನಿ ವೆಬ್​ಸೈಟ್​ಗಳಲ್ಲಿ ಹೊಸ ಪ್ರೊಫೈಲ್​ ಕ್ರಿಯೇಟ್​ ಮಾಡುತ್ತಿದ್ದಳು. ತಾನು ಈ ಹಿಂದೆ ಮದುವೆಯಾಗಿದ್ದನ್ನು ಮುಚ್ಚಿಡುತ್ತಿದ್ದಳು. ಸದ್ಯ ಈಕೆ ವಿರುದ್ಧ ಪುಣೆ ಪೊಲೀಸರು ಪಾಸ್​ಪೋರ್ಟ್​ಗೆ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಕೇಸ್​ ದಾಖಲಿಸಿದ್ದಾರೆ.
ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − four =
Remember me
