ಮುಂಬೈ:ಮದುವೆಯಾದ ವಾರದೊಳಗೆ ಗಂಡನ ಮನೆಯಿಂದ ಹಣ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ ವಧುವಿನ ಸಹಚರರನನ್ನು ಪ್ರಕರಣ ದಾಖಲಾದ ಒಂದು ವರ್ಷದ ನಂತರ ಮುಂಬೈನ ಮಲಾಡ್​ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಮಲೇಶ್​ ಕದಂ ಎಂದು ಗುರುತಿಸಲಾಗಿದ್ದು, ಪ್ರಕರಣದ ಮತ್ತೋರ್ವ ಆರೋಪಿಗಳಾದ ಆಶಾ ಗಾಯಕ್ವಾಡ್​, ಮನೀಶಾ ಕಶ್ಯಪ್​ ತಲೆಮಾರಿಸಿಕೊಂಡಿದ್ದು ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ಧಾರೆ.
ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಮಲಾಡ್​ ಠಾಣೆಯ ಪೊಲೀಸ್​ ಅಧಿಕಾರಿ ಒಬ್ಬರು 28 ವರ್ಷದ ಸಂತ್ರಸ್ತನಿಗೆ ಮಾತನಾಡುವ ವೇಳೆ ತೊದಲುತ್ತಿದ್ದ ಕಾರಣ ಆತನಿಗೆ ಹೆಣ್ಣು ಕೊಡಲು ಯಾರು ಮುಂದೆ ಬಂದಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಬಂಧಿತ ಆರೋಪಿ ಕಮಲೇಶ್​ ತಾನು ಮದುವೆ ಬ್ರೋಕರ್​ ಎಂದು ಹೇಳಿಕೊಂಡು ಮೊದಲಿಗೆ ತನ್ನನ್ನು ತಾನು ಪರಿಚಯಿಸಿಕೊಂಡಿದ್ದಾನೆ.
ಇದನ್ನೂ ಓದಿ:ಕ್ಯಾಶ್​ ಮ್ಯಾನೇಜ್​ಮೆಂಟ್​ ಸರ್ವೀಸ್​ ಕಚೇರಿಗೆ ನುಗ್ಗಿ 7 ಕೋಟಿ ರೂ. ದೋಚಿದ ಖದೀಮರು!
ಬಳಿಕ ಸಂತ್ರಸ್ತನನ್ನು ಈ ಮೊದಲೇ ಮದುವೆಯಾಗಿ ಎರಡು ಮಕ್ಕಳ ತಾಯಿ ಆಶಾ ಗಾಯಕ್ವಾಡ್​ ಎಂಬ ಮಹಿಳೆಗೆ ಪರಿಚಯಿಸಿದ್ದಾನೆ. ಬಳಿಕ ಆತನನ್ನು ಪುಸಲಾಯಿಸಿ ಮಹಿಳೆಯೊಂದಿಗೆ ಮದುವೆ ಮಾಡಿಸಿದ್ದಾನೆ. ವಿವಾಹವಾದ ಬಳಿಕ ಆರೋಪಿಗಳು ಸಂಚು ರೂಪಿಸಿ ಹುಡುಗನ ಮನೆಯಿಂದ ಹಣ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.
ಕೂಡಲ್ಲೇ ಎಚ್ಚೆತ್ತ ಯುವಕನ ತಂದೆ ಆರೋಪಿಗಳ ವಿರುದ್ಧ ಮಲಾಡ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಣ ದೋಚಿ ಪರಾರಿಯಾದ ಬಳಿ ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಂಡಿದ್ದ ವಧು ಆಶಾ ಸಂತ್ರಸ್ತನಿಗೆ ಕರೆ ಮಾಡಿ ಮಕ್ಕಳಿಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ದಾಖಲಿಸಬೇಕಾಗಿದೆ ಎಂದು ಹಣ ಕೇಳಿದ್ದಳು.
ಆರೋಪಿಯ ಜಾಡು ಹಿಡಿದು ಸಾಗಿದ ಪೊಲೀಸರ ಬಲೆಗೆ ಕಮಲೇಶ್​ ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಆಶಾ ಹಾಗೂ ಮನೀಶಾ ತಲೆಮಾರಿಸಿಕೊಂಡಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಮಲಾಡ್​ ಠಾಣೆಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − three =
Remember me
