ಲಖನೌ: ಕರೊನಾ ಸೋಂಕು ತಡೆಗಟ್ಟುವ ಸಲುವಾಗಿ ದೇಶದಲ್ಲಿ ಲಾಕ್​ಡೌನ್ ಘೋಷಣೆಯಾಗಿದ್ದು ಪ್ರಯಾಣದ ಮೇಲೆ ನಿರ್ಬಂಧ ಹೇರಲಾಗಿದೆ. ನಿಶ್ಚಿಯಿಸಲ್ಪಟ್ಟ ಮದುವೆ ನಡೆಸುವುದಕ್ಕೆ ಅವರು ಕಂಡುಕೊಂಡ ವಿಧಾನ ಈಗ ದೇಶದ ಗಮನಸೆಳೆದಿದೆ. ವಧು ಬಿಹಾರದ ಪಟನಾದವಳು. ವರ ಉತ್ತರ ಪ್ರದೇಶದ ಘಾಜಿಯಾಬಾದ್​ನವನು. ಅವರ ವಿವಾಹ ಸರಳವಾಗಿ ಅವರವರ ಮನೆಯಲ್ಲಿದ್ದುಕೊಂಡೇ ನಡೆಯಿತು. ಅದೂ ವಿಡಿಯೋ ಕಾಲ್​ ಮೂಲಕ!
ವಧು ಸಾದಿಯಾ ನಸ್ರೀನ್ ಮತ್ತು ವರ ದಾನಿಷ್​ ರಝಾ ಅವರ ವಿವಾಹ ಮಾರ್ಚ್ 23ರಂದು ನಡೆಸಲು ಅವರ ಮನೆಯವರು ನಿಶ್ಚಯಿಸಿದ್ದರು. ಆದರೆ, ಸರ್ಕಾರ ದಿಢೀರ್ ಅಗಿ ಸಂಕಷ್ಟಮಯ ಸನ್ನಿವೇಶದ ಕಾರಣ 21ದಿನಗಳ ಲಾಕ್​ಡೌನ್ ಘೋಷಿದೆ. ಇದರ ನಡುವೆ ಕೆಲವು ರಾಜ್ಯಗಳಲ್ಲಿ ಮೊದಲೇ ನಿರ್ಬಂಧ ಇದ್ದ ಕಾರಣ, ವರ ರಝಾ ಘಾಜಿಯಾಬಾದ್​ನಿಂದ ಪಟನಾಕ್ಕೆ ಪ್ರಯಾಣಿಸುವುದು ಸಾಧ್ಯವಾಗಲಿಲ್ಲ. ಇಷ್ಟಾಗ್ಯೂ ವಿವಾಹ ಕಾರ್ಯ ನೆರವೇರಿಸಲು ಆ ಕುಟುಂಬಗಳು ನಿಶ್ಚಯಿಸಿದ ಕಾರಣ ಧಾರ್ಮಿಕ ಮುಖಂಡರು ವಿಡಿಯೋ ಕಾಲ್​ ಮೂಲಕ ಅದನ್ನು ನೆರವೇರಿಸಿಕೊಟ್ಟರು.
ವಿಡಿಯೋದಲ್ಲಿ ಜೋಡಿ ಖುಬೂಲ್​ ಹೇ ಎಂದು ಹೇಳುವ ದೃಶ್ಯವಿದೆ. ಅದೇ ರೀತಿ ಸಂಬಂಧಿಕರು ಪರಸ್ಪರ ಆಲಂಗಿಸಿಕೊಂಡು ಮುಬಾರಕ್ ಹೋ ಎಂದು ಹೇಳುವುದೂ ಕಾಣಿಸುತ್ತಿದೆ. ಈ ವಿಶೇಷ ವಿವಾಹ ಕಾರ್ಯವನ್ನು ವಿಡಿಯೋ ಮಾಡಿದ್ದು, ಅದೀಗ ವೈರಲ್ ಆಗಿದೆ. (ಏಜೆನ್ಸೀಸ್)
ರೈಲ್ವೆ ಬೋಗಿಗಳಾಗುತ್ತಿವೆ ಕರೊನಾ ಐಸೋಲೇಷನ್ ಯೂನಿಟ್ಸ್!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − 1 =
Remember me
