ಒಡಿಶಾ :ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಆಚರಣೆಯೂ ಆಧುನಿಕತೆಗೆ ಪೂರಕವಾಗಿದ್ದು, ಇದಕ್ಕೆ ಮದುವೆಯೂ ಹೊರತಲ್ಲ. ಮದುವೆಯ ಶಾಸ್ತ್ರ ಸಂಪ್ರದಾಯಗಳೆಲ್ಲವೂ ಹೊಸ ಹೊಸ ಟ್ರೆಂಡ್​ಗಳ ಜತೆಯಲ್ಲೇ ಸಾಗುವಾಗ ಇಲ್ಲೊಂದು ನವಜೋಡಿ ಇಂದಿನ ದಿನಗಳಲ್ಲಿ ಬಹಳ ವಿರಳವಾಗಿರುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ಒಡಿಶಾದ ಗಂಜಾಂ ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.
ಬಂಕತಾರಾ ಮೂಲದ ಮಹೇಂದ್ರ ನಾಯಕ್​ ಮತ್ತು ಪಟ್ರಪಲ್ಲಿಯ ಸರಿತಾ ಹೊಸದಾಗಿ ಮದುವೆಯಾಗಿದ್ದು, ಈ ಮದುವೆ ಕಾರ್ಯಕ್ಕೆ ಹೆಣ್ಣಿನ ಮನೆಗೆ ವರನು ಕುದುರೆಯ ಮೇಲೆ ಬಂದಿದ್ದಾನೆ. ಇದಷ್ಟೇ ಅಲ್ಲ ಹೆಣ್ಣಿನ ಮನೆಯಲ್ಲಿ ಮದುವೆ ಕಾರ್ಯವೆಲ್ಲವೂ ಮುಗಿದ ನಂತರ ವಧು ಸರಿತಾ 4 ಕಿ. ಮೀ. ದೂರದಲ್ಲಿರುವ ತನ್ನ ಅತ್ತೆಯ ಮನೆಗೆ ಎತ್ತಿನ ಗಾಡಿಯಲ್ಲಿ ಹೋಗಿದ್ದಾರೆ. ಮಹೇಂದ್ರ ಹೇಗೂ ಕುದುರೆಯನ್ನು ಏರಿ ಬಂದರೆ, ವಧುವಿಗೆ ಮಾತ್ರ ಎತ್ತಿನಗಾಡಿಯ ಪ್ರಯಾಣ ಕೊಂಚ ಕಷ್ಟಕರವಾಗಿ ಕಂಡುಬಂತು. ತಮ್ಮ ಮದುವೆಯಲ್ಲಿ ತಮ್ಮಿಷ್ಟದಂತೆ ಈ ಆಚರಣೆಯನ್ನು ನಡೆಸುವ ಮೂಲಕ ಜನತೆಗೆ ಹಳೆಯ ಸಾಂಪ್ರಾದಾಯಿಕ ಆಚರಣೆಗಳ ಬಗ್ಗೆ ಮತ್ತೆ ನೆನಪಾಗುವಂತೆ ಮಾಡಿದ್ದಾರೆ ಈ ಜೋಡಿ.
ನಮ್ಮ ಮದುವೆಗೆ ಕಾರು ಇತ್ಯಾದಿ ದೊಡ್ಡ ವಾಹನಗಳ ಅಗತ್ಯವಿಲ್ಲ. ನಾವು ಸಾಂಪ್ರಾದಾಯಿಕ ಆಚರಣೆಯನ್ನೇ ಮುಂದುವರೆಸುತ್ತೇವೆ ಎಂದು ಮೊದಲೇ ಈ ಬಗ್ಗೆ ತಮ್ಮ ಎರಡೂ ಕುಟುಂಬಗಳಿಗೆಮಾಹಿತಿ ನೀಡಿದ್ದ ವಧು-ವರರು, ನಂತರ ಸ್ನೇಹಿತರು, ಕುಟುಂಬದವರ ಸಮ್ಮುಖದಲ್ಲಿ ನವ ಜೀವನಕ್ಕೆ ಕಾಲಿಟ್ಟರು. ವಧು ತೆರಳುವ ಎತ್ತಿನ ಬಂಡಿಗೆ ಸ್ನೇಹಿತರೆಲ್ಲರೂ ಸೇರಿ ಅಲಂಕರಿಸಿದ್ದರು. ನಂತರ ವಧು-ವರರನ್ನು ಎಲ್ಲರೂ ಹರಸಿ ಹಾರೈಸಿದರು. ಈ ಮದುವೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಸಿಕ್ಕಿದೆ.
ಈ ರೀತಿಯ ಆಚರಣೆ ಸಾಮಾನ್ಯವಾಗಿ ಹಿಂದಿನ ದಿನಗಳಲ್ಲಿ ಬಹಳ ಸಾಮಾನ್ಯವಾಗಿತ್ತು. ನವ ವಿವಾಹಿತ ವರನನ್ನು ಕುದುರೆಯ ಮೇಲೆ ಕೂರಿಸಿ ಮದುವೆಯ ಮನೆಗೆ ಕರೆ ತಂದರೆ, ವಧುವನ್ನು ಅತ್ತೆಯ ಮನೆಗೆ ಎತ್ತಿನ ಬಂಡಿಯಲ್ಲಿ ಕೂರಿಸಿ ಕಳುಹಿಸುವ ಸಾಂಪ್ರಾದಾಯಿಕ ಆಚರಣೆ ಹಿಂದೆಲ್ಲಾ ನಡೆದುಕೊಂಡು ಬಂದಿತ್ತು. ಆದರೆ ಕಾರಿನ ಕಾರುಬಾರಿನ ನಡುವೆ ಈ ಪದ್ಧತಿ ಕಾಲಕ್ರಮೇಣ ಅಳಿಯುತ್ತಾ ಬಂತೆನ್ನಬಹುದು.
ಆದರೆ ಈ ಇಂಟರ್​​ನೆಟ್​ ಯುಗದಲ್ಲಿ ಎಲ್ಲವೂ ಕೂಡ ಡಿಜಿಟಲ್​ ಆಗಿ ಮಾರ್ಪಟ್ಟಿದ್ದೆ. ಅದರಲ್ಲೂ ಲಾಕ್​ಡೌನ್​ ಸಮಯದಲ್ಲಿ ಹೆಚ್ಚಾಗಿ ಮದುವೆಗಳು ನಾಲ್ಕು ಗೋಡೆಗಳ ನಡುವೆ ನಡೆದರೇ, ಇನ್ನೂ ಹಲವು ಕಡೆಗಳಲ್ಲಿ ಆನ್​ಲೈನ್​ನಲ್ಲೇ ಮದುವೆ ನಡೆದ ಪ್ರಕರಣಗಳೂ ಬಹಳಷ್ಟಿವೆ.
ಎಷ್ಟೋ ಜನರ ಮದುವೆಗಳಲ್ಲಿ ತಮಗೆ ಕಾರಿಲ್ಲದಿದ್ದರೂ ಬಾಡಿಗೆಯ ಕಾರನ್ನಾದರೂ ಪಡೆದು ಹೆಣ್ಣನ್ನು ಗಂಡನ ಮನೆಗೆ ಗಂಡನ್ನು ಹೆಣ್ಣಿನ ಮನೆಗೆ ಕಳುಹಿಸುವ ಶಾಸ್ತ್ರ ಮಾಡುವ ಈ ಕಾಲದಲ್ಲಿ ಇವ್ಯಾವುದೂ ಕೂಡ ಅಗತ್ಯವಿಲ್ಲ. ಇದಕ್ಕಿಂತ ನಮ್ಮ ಹಳೆಯ ಸಂಪ್ರದಾಯಗಳೇ ಮೇಲು ಎಂಬುದನ್ನು ಈ ನವಜೋಡಿ ಸಮಾಜಕ್ಕೆ ತೋರಿಸಿಕೊಟ್ಟಿದೆ.
ಯುವಕನ ಹೊಟ್ಟೆಯಲ್ಲಿದ್ದವು 56 ಬ್ಲೇಡ್‌ ತುಂಡುಗಳು; ಮುಂದೆ ಕಾದಿತ್ತು ಅಚ್ಚರಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten − 3 =
Remember me
