ಬೆಂಗಳೂರು:ವಧು-ವರನ ನೃತ್ಯದಿಂದ ಹಿಡಿದು ಮದುವೆ ಮನೆಗಳ ಹಲವು ಸನ್ನಿವೇಶಗಳ ವಿಡಿಯೋಗಳು ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿರುತ್ತದೆ. ಕೆಲವು ಕಣ್ಣು ಹುಬ್ಬೇರಿಸುವಂತೆ ಮಾಡಿದರೆ, ಇನ್ನು ಕೆಲವು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಅಂತಹುದೇ ಇಲ್ಲೊಂದು ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್: ಸ್ಟೀವ್ ಸ್ಮಿತ್​ರನ್ನು ಕೈಬಿಟ್ಟ ಆಸ್ಟ್ರೇಲಿಯಾ! ಮಿಚೆಲ್ ಮಾರ್ಷ್ ನಾಯಕ..
ಆ ಮದುವೆ ವಿಡಿಯೋ ಇಷ್ಟು ವೈರಲ್ ಆಗಿರುವುದಕ್ಕೆ ಕಾರಣ ವಧು- ವರರು. ಮದುವೆ ಮಂಟಪದಲ್ಲಿ ಸಿಹಿ ತಿನ್ನಿಸುವಾಗ ಅವರು ನಡೆದುಕೊಂಡ ರೀತಿ ನಿಜಕ್ಕೂ ಬಹಳ ವಿಚಿತ್ರವಾಗಿದೆ.
Muh me Rasgulla daala to ladki ko itna gussa aa gaya,just imagine ke 😮😲चलो छोड़ो 🫣🤭🤐pic.twitter.com/ONniSS9DCe
— HasnaZarooriHai🇮🇳 (@HasnaZaruriHai)April 29, 2024

ಸಾಮಾನ್ಯವಾಗಿ ಹೆಣ್ಣಾಗಲಿ ಗಂಡಾಗಲಿ ಅವರ ಗುಣ ಸ್ವಭಾವ ಏನೇ ಇದ್ದರೂ ಮದುವೆ ಸಂದರ್ಭ ನಯ, ನಾಜೂಕು, ಗಾಂಭೀರ್ಯ ಇದ್ದೇ ಇರುತ್ತದೆ. ಆದರೆ ಇಲ್ಲಿ ಅದ್ಯಾವುದೂ ಇಲ್ಲ. ಮದುವೆ ಮಂಟಪದಲ್ಲಿಯೇ ವಧು ಉಗ್ರ ರೂಪ ತಳೆದು ಬಿಟ್ಟಿದ್ದಾಳೆ. ಅದು ಕೂಡಾ ಕ್ಷುಲ್ಲಕ ಕಾರಣಕ್ಕೆ.ಇಷ್ಟಕ್ಕೂ ಅಲ್ಲಿ ಆಗಿದ್ದೇನೆಂದರೆ, ವರ ವಧುವಿಗೆ ರಸಗುಲ್ಲಾ ತಿನ್ನಿಸಲು ಹೋಗಿದ್ದಾನೆ. ವಧು ಬೇಡ ಎನ್ನುತ್ತಾಳೆ. ಆದ್ರೆ ವರ ಬಿಡಬೇಕಲ್ಲ, ಮದುಮಗಳ ಗಲ್ಲ ಹಿಡಿದು ಬಲವಂತವಾಗಿ ರಸಗುಲ್ಲಾವನ್ನು ವಧುವಿನ ಬಾಯಿಗೆ ತುರುಕುತ್ತಾನೆ.
ಇದು ವಧುವಿಗೆ ಇಷ್ಟವಾಗುವುದಿಲ್ಲ. ಮದುವೆ ಮಂಟಪದಲ್ಲಿಯೇ ವರನಿಗೆ ಮನ ಬಂದಂತೆ ಹೊಡೆದು ಸ್ಟೇಜ್​ನಿಂದ ಕೆಳಕ್ಕೆ ತಳ್ಳುತ್ತಾಳೆ. ವರ ಮೇಲೇರಿ ಬರಲು ಯತ್ನಿಸಿದರೂ ಮತ್ತೆ ಕೆಳಕ್ಕೆ ತಳ್ಳುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಚಂದ್ರಯಾನದ ಮೂರನೇ ಮಿಷನ್ ಏಕೆ ನಾಲ್ಕು ಸೆಕೆಂಡುಗಳಷ್ಟು ವಿಳಂಬವಾಯಿತು? ಇಸ್ರೋ ಉತ್ತರಿಸಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
