ಲಖನೌ:ಮದುವೆ ಎನ್ನುವುದು ಒಂದು ಹಬ್ಬವಿದ್ದಂತೆ. ಅದಕ್ಕೆಂದು ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಆ ದಿನಕ್ಕಾಗಿ ವಧು ವರರಿಬ್ಬರೂ ಕಾಯುತ್ತಿರುತ್ತಾರೆ. ಆದರೆ ಇಲ್ಲೊಬ್ಬ ವಧು ಮಾತ್ರ ಮದುವೆ ಮಂಟಪದಿಂದಲೇ ಎದ್ದು ಹೋಗಿದ್ದಾಳೆ. ಹಾಗೆ ಧಿಡೀರನೆ ಎದ್ದು ಹೋದ ವಧು ವಾಪಾಸು ಬರುವಷ್ಟರಲ್ಲಿ ಪತಿ ಸೇರಿ ಪೂರ್ತಿ ಕುಟುಂಬ ಆಕೆಯತ್ತ ಹೆಮ್ಮೆಯ ನೋಟ ಬೀರಿದೆ.
ಇದನ್ನೂ ಓದಿ:ಅನಿಲ್ ಕಪೂರ್, ವರುಣ್​ ಧವನ್​ಗೆ ಕರೊನಾ; ‘ಜುಗ್ ಜುಗ್​ ಜೀಯೊ’ ಚಿತ್ರೀಕರಣ ಸ್ಥಗಿತ
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಪ್ರಜ್ಞಾ ತಿವಾರಿಗೆ ಡಿಸೆಂಬರ್​ 2ರಂದು ಮದುವೆ ನಿಶ್ಚಯವಾಗಿತ್ತು. ಅದರಂತೆ ಮದುವೆಯೂ ಆಯಿತು. ಆದರೆ ಮದುವೆಯಾದ ಕೆಲವೇ ಗಂಟೆಯಲ್ಲಿ ವಧು ಮಂಟಪದಿಂದ ಕಾಣೆಯಾಗಿದ್ದಾಳೆ.
ಇದನ್ನೂ ಓದಿ:ಹೈದರಾಬಾದ್​ ಪಾಲಿಕೆ ರಿಸಲ್ಟ್​: ಮಾಜಿ ಮೇಯರ್​ಗೆ ವಿಜಯದ ಮಾಲೆ- ಬಿಜೆಪಿಗೆ ಮುನ್ನಡೆ
ಪ್ರಜ್ಞಾ ಶಿಕ್ಷಕಿಯಾಗುವ ಆಸೆ ಹೊತ್ತಿದ್ದು, ಅದಕ್ಕೆಂದು ಅರ್ಜಿ ಸಲ್ಲಿಸಿದ್ದಳು. ಆ ಕೆಲಸದ ಕೌನ್ಸೆಲಿಂಗ್​ನ್ನು ಆಕೆಯ ಮದುವೆಯ ದಿನದಂದೇ ಮಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ಮಂಟಪದಿಂದ ಎದ್ದು ಹೋದ ಪ್ರಜ್ಞಾ ಕೌನ್ಸೆಲಿಂಗ್​ನಲ್ಲಿ ಹಾಜರಾಗಿದ್ದಾರೆ. ಶಿಕ್ಷಕಿಯಾಗುವ ಅವರ ಕನಸು ನೆರವೇರಿದ್ದು, ಹತ್ತಿರದ ಊರಿನಲ್ಲೇ ಪೋಸ್ಟಿಂಗ್​ ಮಾಡಿಕೊಡಲಾಗಿದೆ. ಕೆಲಸಕ್ಕಾಗಿ ಮದುವೆ ಮಂಟಪದಿಂದಲೇ ಎದ್ದು ಬಂದ ವಧುವಿಗೆ ಜಿಲ್ಲೆಯ ಶಿಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ. ಇದೀಗ ಪ್ರಜ್ಞಾಳ ಪೂರ್ತಿ ಕುಟುಂಬ ಪ್ರಜ್ಞಾ ಬಗ್ಗೆ ಹೆಮ್ಮೆ ಪಡುತ್ತಿದೆ. (ಏಜೆನ್ಸೀಸ್​)
ರಕ್ತದ ಮಡುವಿನಲ್ಲಿ ಬಿದ್ದು ಅಂಗಲಾಚುತ್ತಿದ್ದ ಮಂಜನ ಪ್ರಾಣ ಜನರ ಕಣ್ಣೆದುರೇ ಹೋಯ್ತು…

3 ಕೋಟಿ ಖರ್ಚು ಮಾಡಿಸಿ ಮದ್ವೆಯಾದವ ಮೊದಲ ರಾತ್ರಿಯೇ ಫುಲ್ ಟೈಟ್! ಮುಂದೆ ಆಗಿದ್ದೆಲ್ಲವೂ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 12 =
Remember me
