ಉತ್ತರ ಪ್ರದೇಶ:ವಿವಾಹಕ್ಕೂ ಮುನ್ನ ವರ ಕಳ್ಳತನದ ಆರೋಪದಲ್ಲಿ ಸಿಕಿಬಿದ್ದ ಕಾರಣವನ್ನು ತಿಳಿದ ವಧು, ಅದೇ ಮಂಟಪದಲ್ಲಿ ಆತನ ಸಹೋದರನನ್ನು ಮದುವೆಯಾದ ಘಟನೆ ಉತ್ತರಪ್ರದೇಶದ ಅಲಿಗಢದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಆತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ವಿದ್ಯಾರ್ಥಿಗಳು ನವೀಕರಣಗೊಳ್ಳಬೇಕು; ಡಾ. ಶಿವಕುಮಾರ
ನಿಶ್ಚಯಿಸಿದ್ದ ವಧುವಿಗೆ ತಾಳಿ ಕಟ್ಟಲು ಸಿದ್ಧನಾಗಿದ್ದ ವರ, ಕಳ್ಳತನ ಪ್ರಕರಣದಲ್ಲಿ ಶಂಕಿತನಾಗಿದ್ದ ಕಾರಣ ತಿಳಿದ ಪೊಲೀಸರು ಮದುವೆ ಮಂಟಪಕ್ಕೆ ಆಗಮಿಸಿ, ಆತನನ್ನು ಬಂಧಿಸಿದ್ದಾರೆ.
ಪೊಲೀಸರು ಮದುವೆ ಮಂಟಪಕ್ಕೆ ಆಗಮಿಸಿ, ವರನನ್ನು ಬಂಧಿಸಿದ ಘಟನೆ ಸ್ಥಳದಲ್ಲಿ ಭಾರೀ ಗದ್ದಲವನ್ನು ಸೃಷ್ಟಿ ಮಾಡಿತು. ಯುವಕನನ್ನು ಪೊಲೀಸರು ಕರೆದೊಯ್ದ ಬೆನ್ನಲ್ಲೇ ಕುಟುಂಬದ ಸದಸ್ಯರು ಮತ್ತು ಮದುವೆಗೆ ಆಗಮಿಸಿದ್ದ ಅತಿಥಿಗಳು ಪೊಲೀಸ್ ಠಾಣೆಯ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಇದನ್ನೂ ಓದಿ:ಆಯುಷ್ಮಾನ್​ ಭವ ಅಭಿಯಾನಕ್ಕೆ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಈ ವೇಳೆ ಮದುವೆಗೆ ಎಂದು ಸಿದ್ಧಗೊಂಡಿದ್ದ ವಧು, ಮಂಟಪ್ಪದಲ್ಲೇ ಕಾಯುತ್ತಿದ್ದನ್ನು ತಿಳಿದ ವರನ ಅಣ್ಣ, ಆಕೆಯನ್ನು ವಿವಾಹವಾಗಲು ನಿರ್ಧರಿಸಿದ್ದಾರೆ. ತದನಂತರ ಕುಟುಂಬದವರು ಇಬ್ಬರಿಗೂ ಮದುವೆ ಮಾಡಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).
2100ನೇ ವರ್ಷಕ್ಕೆ ಜಗತ್ತಿನ ಜನಸಂಖ್ಯೆ ಎಷ್ಟಿರಲಿದೆ ಗೊತ್ತೇ?; ಇಲ್ಲಿದೆ ಇತ್ತೀಚಿನ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 3 =
Remember me
