ನವದೆಹಲಿ:ಮದುವೆಯಾಗಲು ತೆರಳಿದ್ದ ವರ, ಮಟನ್​ ವಿಚಾರದಿಂದಾಗಿ ಸೋತು ವಾಪಸ್​ ಬಂದ ವಿಲಕ್ಷಣ ಘಟನೆ ವರದಿಯಾಗಿದೆ. ಅಂದ ಹಾಗೆ ವರ ಮಾಡಿದ್ದೇನೆಂದರೆ, ಮಟನ್​ ಇಲ್ಲಾ ಅಂದ್ರೆ ಮದುವೆ ಇಲ್ಲ ಅಂದಿದ್ದು.
ವರದಿಗಳ ಪ್ರಕಾರ, ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಬ್ಯಾಂಕರ್ ಆಗಿರುವ ವರ, ಭಾನುವಾರ ತನ್ನ ಮನೆಯವರೊಂದಿಗೆ ಮೆರವಣಿಗೆಯಲ್ಲಿ ಸಂಬಲ್‌ಪುರದ ಐಂತಪಾಲಿಯಲ್ಲಿರುವ ವಧುವಿನ ಮನೆಗೆ ತಲುಪಿದ್ದಾನೆ. ಊಟದ ಸಮಯದಲ್ಲಿ, ಮಟನ್​ ಕಡಿಮೆಯಾಗಿದ್ದು ಕೊನೆಯ ಏಳೆಂಟು ಜನರು ಕುರಿ ಮರಿ ವಂಚಿತರಾದರು.
ಇದನ್ನೂ ಓದಿ:51 ಟ್ರ್ಯಾಕ್ಟರ್​ಗಳಲ್ಲಿ ಮದುವೆ ದಿಬ್ಬಣ ಬಂದ ವರ
ಆಗಲೇ ತಡರಾತ್ರಿ ಆಗಿದ್ದರಿಂದ ವಧುವಿನ ಮನೆಯವರು ಮಟನ್​ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಹುಡುಗನ ಕಡೆಯವರಿಗೆ ಮಟನ್​ ಕೊರತೆಯೇ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿತು. ಈ ವರ್ತನೆಯಿಂದ ಅಸಮಾಧಾನಗೊಂಡ ವಧು, ಕಡೆಗೆ ಮದುವೆಯಾಗದಿರಲು ನಿರ್ಧರಿಸಿದಳು.
ಘಟನೆಯ ಕುರಿತು ಮಾತನಾಡಿದ ವಧು, “ಎಲ್ಲವೂ ಸ್ಥಳದಲ್ಲಿತ್ತು. ಮಟನ್​ ಕೂಡ ಬಡಿಸಲಾಗಿದೆ. ಆದರೆ ಕೊನೆಯ ಆರೇಳು ಜನರಿಗೆ ಲಭ್ಯವಾಗಿಲ್ಲ. ನಂತರ ಅವರು ನನ್ನ ತಂದೆಯ ಮೇಲೆ ಅಸಮರ್ಪಕ ನಿರ್ವಹಣೆಯ ಆರೋಪ ಮಾಡಿ ಜಗಳವಾಡಿದರು” ಎಂದು ಹೇಳಿದರು.
“ನನ್ನ ಪೋಷಕರು ಮತ್ತು ಇತರ ಕುಟುಂಬ ಸದಸ್ಯರು ಸುಮ್ಮನಿರಲು ಅವರನ್ನು ಕೇಳಿಕೊಂಡಿದ್ದು ಮಟನ್​ ಬದಲಿಗೆ ಕೋಳಿ ಮತ್ತು ಮೀನು ನೀಡುವ ಮೂಲಕ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ಅವರಿಗೆ ಮಟನ್ ಮಾತ್ರವೇ ಬೇಕಾಗಿತ್ತು. ಇದಾದ ಬಳಿಕ ಅವರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು” ಎಂದು ವಧು ಹೇಳಿದರು.
ಇದನ್ನೂ ಓದಿ:ಪತಿಯಿಂದ ದೂರ ಮಾಡಿ ಬೇರೆ ಮದುವೆ ಮಾಡಿದ್ರು: ಈಕೆ 2ನೇ ಪತಿಗೆ ರಾಖಿ ಕಟ್ಟಿದಳು!
“ನನ್ನ ತಂದೆ ಅವರಿಗೆ ಅಡ್ಡ ಬಿದ್ದು ನಮಸ್ಕರಿಸಿ ವಿಚಾರವನ್ನು ಬಗೆಹರಿಸುವಂತೆ ಮನವಿ ಮಾಡಿದರು. ಆದರೆ ಅವರು ಮಾತ್ರ ಒಪ್ಪಲೇ ಇಲ್ಲ. ಇದರಿಂದ ನನಗೆ ಬೇಜಾರಾಗಿದ್ದು ನಾನು ಮದುವೆಯಾಗುವುದಿಲ್ಲ, ಎಂದು ಹೇಳಿದೆ” ಎಂದು ವಧು ವಿವರಿಸಿದರು.
ಮತ್ತೊಂದೆಡೆ, ವರನ ಕಡೆಯವರು, ವಧುವಿನ ಕಡೆಯವರು ಮಾಡಿರುವ ಆರೋಪಗಳು ಸಂಪೂರ್ಣವಾಗಿ ನಿರಾಧಾರ ಎಂದು ಹೇಳಿದ್ದಾರೆ. “200 ಜನರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ವಧುವಿನ ಕಡೆಯವರು ತಿಳಿಸಿದ್ದಾರೆ. ಮೆರವಣಿಗೆಯಲ್ಲಿ ಸುಮಾರು 150 ಜನರಿದ್ದರು. ಆದರೆ ಅವರಲ್ಲಿ ಹಲವರಿಗೆ ಊಟ ಇರಲಿಲ್ಲ. ಈ ವಿಷಯವನ್ನು ನನ್ನ ತಂದೆ, ವಧುವಿನ ಚಿಕ್ಕಪ್ಪನಿಗೆ ತಿಳಿಸಿದಾಗ ಅವರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು. ಮದುವೆಯ ರದ್ದತಿಗೆ ಮಟನ್ ಕಾರಣವಲ್ಲ” ವರ ಹೇಳಿದರು. ರಾತ್ರಿ 12ರಿಂದ ಬೆಳಗಿನ ಜಾವ 4ರವರೆಗೆ ಮಾತುಕತೆ ನಡೆಸಲಾಗಿದ್ದು. ಮದುವೆಗೆ ಹಲವು ಬಾರಿ ಮನವಿ ಮಾಡಿದರೂ ನಿರಾಕರಿಸಿದರು ಎಂದು ವರನ ತಂದೆ ತಿಳಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
