ಕಾನ್ಪುರ:ಮೂರು ಗಂಟಿನ ಮದುವೆ ನೂರು ವರ್ಷಕ್ಕೂ ಮೀರಿದ್ದು ಎನ್ನುತ್ತಾರೆ ನಮ್ಮ ಹಿರಿಯರು. ದಾಂಪತ್ಯಕ್ಕೆ ಕಾಲಿಟ್ಟು ಜೀವನದ ಎರಡನೇ ಅಧ್ಯಾಯವನ್ನು ಪ್ರಾರಂಭಿಸುವ ಮೂಲಕ ಹತ್ತಾರು ಕನಸು ಕಾಣುವ ಅದೆಷ್ಟೋ ನವ ಜೋಡಿಗಳು, ನಮ್ಮ ಲೈಫ್​ ಹೀಗಿರಬೇಕು, ಹಾಗಿರಬೇಕು ಎಂದೆಲ್ಲಾ ಪೂರ್ವ ಯೋಜನೆ ಹಾಕಿಕೊಳ್ಳುತ್ತಾರೆ. ಆದ್ರೆ, ಹಸೆಮಣೆ ಏರುವ ಮುನ್ನ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ತಾಳಿ ಕಟ್ಟಲು ಇನ್ನೇನು ಕೆಲವೇ ಕ್ಷಣಗಳು ಬಾಕಿ ಎಂದಾಗ ಕೆಲವರ ಬಣ್ಣ ಬಟಾಬಯಲಾಗುವುದು ನಿಜಕ್ಕೂ ಒಂದು ಕ್ಷಣ ನಿಂತಲ್ಲೇ ಕುಸಿಯುವಂತೆ ಮಾಡುತ್ತದೆ. ಅಂತಹದ್ದೇ ಒಂದು ಘಟನೆ ಇಲ್ಲೂ ನಡೆದಿದೆ.
ಇದನ್ನೂ ಓದಿ:ಅನುದಾನ ಇಲ್ಲದೆ ಆಶ್ರಯ ಕೇಂದ್ರ ಬಂದ್ ನಲ್ಮ್ ಯೋಜನೆಯಡಿ ಆರಂಭವಾಗಿದ್ದ ಕೇಂದ್ರ
ನಾವು ನೋಡಿದ ಹುಡುಗನೊಂದಿಗೆ ಮದುವೆ ಮಾಡಿಬಿಟ್ಟರೇ ಸಾಕಪ್ಪ ಎಂದು ತಾವು ನಿಶ್ಚಯಿಸಿದ ವರನೊಂದಿಗೆ ಮಗಳನ್ನು ಧಾರೆ ಎರೆಯಲು ಮುಂದಾದ ಪೋಷಕರಿಗೆ ಮಗಳು ತೆಗೆದುಕೊಂಡ ನಿರ್ಧಾರ ತಿಳಿದು ಆಕಾಶವೇ ತಲೆಯ ಮೇಲೆ ಕುಸಿದಂತೆ ಆಗಿದೆ. ತಾಳಿ ಕಟ್ಟುವ ಶುಭ ಘಳಿಗೆಗೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಎನ್ನುವಾಗ ಆಕೆ ಮಾಡಿದ್ದನ್ನು ಮಾತ್ರ ಎರಡು ಕುಟುಂಬಸ್ಥರು ಮರೆಯಲಾಗದೆ ಕಣ್ಣೀರಿಟ್ಟಿದ್ದಾರೆ.
ಬ್ಯೂಟಿ ಪಾರ್ಲರ್‌ನಿಂದ ಮದುವೆ ಮಂಟಪಕ್ಕೆ ಬರಬೇಕಿದ್ದ ವಧು ತಾನು ಪ್ರೀತಿಸಿದ ಹುಡುಗನೊಂದಿಗೆ ಪರಾರಿಯಾದ ಘಟನೆ ಕಾನ್ಪರದಲ್ಲಿ ವರದಿಯಾಗಿದೆ. ಆದ್ರೆ, ಇದರ ಹಿಂದೆ ಬಲವಾದ ಕಾರಣವೂ ಇದೇ ಎಂಬುದು ಮತ್ತಷ್ಟು ಆಶ್ಚರ್ಯಕರ! ಯುವತಿಯ ಕುಟುಂಬಸ್ಥರು ಆಕೆ ಅನಾಮಧೇಯ ಯುವಕನನ್ನು ಪ್ರೀತಿಸಿದ್ದಳು ಎಂಬ ವಿಷಯವನ್ನು ಮುಂಚಿತವಾಗಿಯೇ ಅರಿತಿದ್ದರು. ಆದ್ರೆ, ಈ ಮದುವೆ ಅವರಿಗೆ ಸುತಾರಾಮ್​ ಇಷ್ಟವಿರಲಿಲ್ಲ. ಹೀಗಾಗಿ ಅನೇಕ ಬಾರಿ ಯುವತಿಗೆ ಬುದ್ಧಿ ಹೇಳಿ, ನಾವು ತೋರಿಸಿದ ಹುಡುಗನನ್ನೇ ನೀನು ಮದುವೆಯಾಗಬೇಕು ಎಂದು ಆಮಿಷ ಒಡ್ಡಿದ್ದರು.
ಇದನ್ನೂ ಓದಿ:ಹಾರೋಹಳ್ಳಿ, ಬಿಡದಿಗೂ ಮೆಟ್ರೋ ವಿಸ್ತರಿಸಿ ಕೇಂದ್ರ ಬಜೆಟ್‌ನ ಪ್ರಸ್ತಾವನೆ ಸದ್ಬಳಕೆಗೆ ಜನರ ಒತ್ತಾಯ
ಆದ್ರೆ, ಯುವತಿ ಇದಕ್ಕೆ ಒಪ್ಪಿಲ್ಲ. ತಾವು ತೋರಿಸಿದ ವರನೊಂದಿಗೆ ನಿನ್ನ ಮದುವೆ ಎಂದ ಪೋಷಕರು, ತಮ್ಮ ಸಮುದಾಯದಲ್ಲಿ ಯಾರನ್ನಾದರೂ ಮದುವೆಯಾಗಲು ಬಯಸಿ, ಹುಡುಗನನ್ನು ನಿಶ್ಚಯಿಸಿದ್ದರು. ಈ ಬಗ್ಗೆ ಮಗಳು ಅಸಮಾಧಾನ ಹೊರಹಾಕಿದ್ದೇ ಆದರೂ ಕಡೆಯದಾಗಿ ಸುಮ್ಮನೆ ಮದುವೆಗೆ ಸಿದ್ಧವಾಗಿದ್ದಾಳೆ. ಘಟನೆಯನ್ನು ತನ್ನ ಪ್ರಿಯಕರನಿಗೆ ತಿಳಿಸಿದ ಯುವತಿ, ಆತನೊಂದಿಗೆ ವಿವಾಹಕ್ಕೆ ಇನ್ನೇನು ಕೆಲವೇ ಸಮಯ ಬಾಕಿ ಎನ್ನುವಷ್ಟರಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾಳೆ.
ಘಟನೆಯಿಂದ ಕಂಗಾಲಾದ ವಧುವಿನ ಮನೆಯವರು ಸದ್ಯ ಈ ಬಗ್ಗೆ ಹೆಚ್ಚು ಮಾತನಾಡಲು ಬಯಸಿಲ್ಲ. ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಯುವತಿಗಾಗಿ ಪೊಲೀಸರು ಹುಡಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 2 =
Remember me
