ಬೆಂಗಳೂರು:ವಧು-ವರರ ಜಾಹೀರಾತು ಅಂಕಣ ಆಗಾಗ ಗಮನ ಸೆಳೆಯುತ್ತಿರುತ್ತದೆ. ಅದರಲ್ಲೂ ಒಮ್ಮೊಮ್ಮೆ ವಿಚಿತ್ರ ಬೇಡಿಕೆಗಳಿಂದಾಗಿ ಜಾಹೀರಾತು ಕೊಟ್ಟವರಿಗೆ ವಧು ಅಥವಾ ವರ ಸಿಕ್ಕಿರುತ್ತಾರೋ ಇಲ್ಲವೋ, ಆ ಬೇಡಿಕೆಗಳಿಂದಾಗಿಯೇ ಅಂಥ ಜಾಹೀರಾತುಗಳು ವೈರಲ್​ ಅಂತೂ ಆಗಿರುತ್ತವೆ. ಅಂಥದ್ದೇ ಒಂದು ಮ್ಯಾಟ್ರಿಮೋನಿಯಲ್ ಜಾಹೀರಾತು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಮಾತ್ರವಲ್ಲ, ‘ಸಾಫ್ಟ್​ವೇರ್ ಇಂಡಸ್ಟ್ರಿಗೆ ಭವಿಷ್ಯ ಇಲ್ಲವೇ?’ ಎಂಬ ಪ್ರಶ್ನೆಯನ್ನೂ ಕೆಲವರ ಮನಸಲ್ಲಿ ಮೂಡಿಸಿದೆ.
ಶ್ರೀಮಂತರ ಮನೆಯ ಎಂಬಿಎ ಪದವೀಧರೆಯೊಬ್ಬಳ ಮದುವೆಗಾಗಿ ಮ್ಯಾಟ್ರಿಮೋನಿಯಲ್​ನಲ್ಲಿ ಜಾಹೀರಾತು ಪ್ರಕಟವಾಗಿದ್ದು, ಆಕೆಗೆ ಸ್ವಜಾತಿಯ ಐಎಎಸ್​/ಐಪಿಎಸ್, ಪಿಜಿ ಡಾಕ್ಟರ್ ಅಥವಾ ಉದ್ಯಮಿ ಆಗಿರುವ ವರ ಬೇಕು ಎಂಬುದಾಗಿ ಬೇಡಿಕೆ ಇಡಲಾಗಿದೆ. ಅಲ್ಲದೆ ‘ದಯವಿಟ್ಟು ಸಾಫ್ಟ್​ವೇರ್ ಇಂಜಿನಿಯರ್ ಕರೆ ಮಾಡಬೇಡಿ’ ಎಂಬುದಾಗಿಯೂ ಈ ಜಾಹೀರಾತಲ್ಲಿ ಉಲ್ಲೇಖಿಸುವ ಮೂಲಕ, ಐಟಿ ಕ್ಷೇತ್ರದಲ್ಲಿರುವ ವರ ಬೇಡ ಎಂದು ಹೇಳಲಾಗಿದೆ.
ಈ ಜಾಹೀರಾತಿನ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಒಬ್ಬರು ಇದನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ಐಟಿ ಕ್ಷೇತ್ರದ ಭವಿಷ್ಯ ಚೆನ್ನಾಗಿದ್ದಂತಿಲ್ಲ ಎಂಬುದಾಗಿಯೂ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
Future of IT does not look so sound.pic.twitter.com/YwCsiMbGq2— Samir Arora (@Iamsamirarora)September 16, 2022
Future of IT does not look so sound.pic.twitter.com/YwCsiMbGq2
ಅಂಗಿ-ಬನಿಯನ್ ತೆಗೆಯಲು ತಕರಾರು: ದೇವಸ್ಥಾನಗಳಲ್ಲಿನ ಫಲಕ ತೆಗೆಸುವಂತೆ ಕೋರಿ ಅರ್ಜಿ
ಲಾಟರಿಯಲ್ಲಿ ಆಟೋ ಚಾಲಕನಿಗೆ 25 ಕೋಟಿ ರೂ. ಬಂಪರ್​ ಪ್ರೈಜ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 18 =
Remember me
