ಕೇರಳ:ಭಾರತದ ಹಲವು ರಾಜ್ಯಗಳಲ್ಲಿ ಮದುವೆಯ ಕಾಲ ಶುರುವಾಗಿದೆ, ಮದುವೆ ನಿಶ್ಚಯವಾದವರು ಈಗಾಗಲೆ ಮದುವೆ ತಯಾರಿಗಳನ್ನು ಶುರು ಮಾಡಿಕೊಂಡಿದ್ದಾರೆ. ಆದರೆ ಇಲ್ಲೊಂದು ಮದುವೆಯಲ್ಲಿ ವರನ ಗೆಳೆಯರು ಒಂದು ಒಪ್ಪಂದ ಪತ್ರವನ್ನು ತಯಾರಿಸಿದ್ದು ಜಾಲತಾಣಗಳಲ್ಲಿ ಆ ‘ಮದುವೆ ಒಪ್ಪಂದ’ದ ಪತ್ರ ಈಗ ವೈರಲ್ ಆಗಿದೆ. ಅದು ಸುಮ್ಮನೆ ಬಿಳಿ ಕಾಗದದ ಮೇಲೆ ಬರೆದ ‘ಒಪ್ಪಂದ ಪತ್ರ’ ಅಲ್ಲ, 50 ರೂ. ಸ್ಟಾಂಪ್ ಪೇಪರ್​​ನಲ್ಲಿ ಮುದ್ರಿತವಾಗಿದೆ!
‘ಮದುವೆ ಆದ್ಮೇಲೆ ನೀನು ಸಿಗೋದಿಲ್ಲ ಕಣಯ್ಯಾ…’ ಎಂಬ ಮಾತನ್ನು ಮದುವೆಯಾಗುವ ಹುಡುಗರಿಗೆ ಆತನ ಸ್ನೇಹಿತರು ಹೇಳುವುದನ್ನು ನೀವು ಕೇಳಿಯೇ ಇರುತ್ತೀರಿ. ಹಾಗಾಗದೆ ಇರಲಿ ಅಂತ ಮುಂಜಾಗ್ರತೆ ವಹಿಸಿರುವ ಸ್ನೇಹಿತರು ತಯಾರಿಸಿದ ಒಪ್ಪಂದ ಪತ್ರ ಇದು. ಈ ‘ವಿವಾಹ ಒಪ್ಪಂದ’ಕ್ಕೆ ಮದುವೆಯ ದಿನ ವಧು ಸಹಿ ಮಾಡಬೇಕಿತ್ತು.
ವಧುವಿನ ಹೆಸರು ಅರ್ಚನಾ. ವರನ ಹೆಸರು ರಘು. “ಮದುವೆ ಆದ ನಂತರವೂ ರಾತ್ರಿ ೯ ಗಂಟೆವರೆಗೆ ಸ್ನೇಹಿತರ ಜತೆ ಕಾಲ ಕಳೆಯಲು ರಘುಗೆ ಅವಕಾಶ ಇರಬೇಕು. ಆ ಸಮಯದಲ್ಲಿ ರಘುಗೆ ಅರ್ಚನಾ ಪದೇಪದೇ ಫೋನ್ ಮಾಡುವಂತಿಲ್ಲ. ಬೇಗ ಮನೆಗೆ ಬಾ ಅಂತ ಒತ್ತಾಯ ಮಾಡುವಂತಿಲ್ಲ”. ಈ ಸ್ಟಾಂಪ್ ಪೇಪ​ರನ್ನು 2022ರ ನವೆಂಬರ್ 5 ರಂದು ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ವಧುವಿನ ಕೈಯಲ್ಲಿ ಸಹಿ ಮಾಡಿಸಲಾಯಿತು.
‘ಮದುವೆಯ ನಂತರವೂ ನನ್ನ ಗಂಡ ಎಸ್​ ಕೆಡಿಆರ್ ರಘು ತನ್ನ ಸ್ನೇಹಿತರ ಜತೆ ರಾತ್ರಿ 9 ಗಂಟೆಯವರೆಗೆ ಕಾಲ ಕಳೆಯಲು ಅನುಮತಿಯನ್ನು ನೀಡುತ್ತೇನೆ ಮತ್ತು ಆ ಸಮಯದಲ್ಲಿ ಸತತವಾಗಿ ಫೋನ್ ಕಾಲ್ ಮಾಡಿ ತೊಂದರೆ ನೀಡುವುದಿಲ್ಲ ಎಂದು ಭರವಸೆ ಕೊಡುತ್ತೇನೆ.’ ಅಂತ ಅರ್ಚನಾ ಒಪ್ಪಿಕೊಂಡು ಸಹಿ ಮಾಡಿದ್ದಾಳೆ. ಈ ಜೋಡಿ ಮೂಲತಃ ಕೇರಳದವರು. ನವೆಂಬರ್ 5ರಂದು ಪಾಲಕ್ಕಾಡ್​​ನಲ್ಲಿ ಮದುವೆಯಾದರು. ಆ ಸಂದರ್ಭದಲ್ಲಿ ತಮಾಷೆಗಾಗಿ ಸ್ನೇಹಿತರು ಮಾಡಿಸಿರುವ ಈ ‘ಒಪ್ಪಂದ ಪತ್ರ’ ಈಗ ಭಾರೀ ವೈರಲ್ ಆಗಿದೆ. –ಏಜೆನ್ಸೀಸ್
ವರ್ಷಕ್ಕೆ ನಾಲ್ಕು ಚಿತ್ರಗಳಲ್ಲಿ ನಟಿಸುವುದರಲ್ಲಿ ತಪ್ಪೇನಿದೆ? ಅಕ್ಷಯ್​ ಕುಮಾರ್​ ಪ್ರಶ್ನೆ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × five =
Remember me
