ಚೆನ್ನೈ :ಸಾಮಾನ್ಯವಾಗಿ ಪಾರಂಪರಿಕ ಮದುವೆಗಳಲ್ಲಿ ವಧು ನಾಚಿಕೊಂಡು ಅಳುಕುತ್ತಾ ನಗೆ ಸೂಸುವ ದೃಶ್ಯ ನೋಡುತ್ತೇವೆ. ಆದರೆ ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಮದುವೆ ಸಮಾರಂಭವೊಂದರಲ್ಲಿ ವಧುವು, ಕೋಲುಗಳನ್ನು ಹಿಡಿದು ನೆರೆದಿದ್ದ ಜನರಿಗೆ ಸೀಲಂಬಮ್​ ಎಂಬ ಸಾಹಸ ಕಲೆಯ ಪರಿಚಯ ಮಾಡಿಸಿದ್ದಾಳೆ.
ಪೊಲೀಸ್​ ಅಧಿಕಾರಿಯಾಗುವ ಆಸೆಯಿರುವ 22 ವರ್ಷದ ಪಿ.ನಿಶಾ ಈ ವಿಶೇಷ ವಧು. ನಿರಾಯಾಸವಾಗಿ ದೊಣ್ಣೆಗಳನ್ನು ಮತ್ತು ಸುತ್ತುಗತ್ತಿಯನ್ನು ಆಡಿಸುವ ಕಲೆಯನ್ನು ಪ್ರದರ್ಶಿಸಿದ ನಿಶಾಳ ಪ್ರತಿಭೆ ನೋಡಿ ಬಂಧು-ಬಳಗ ಚಕಿತಗೊಂಡಿದೆ. ಅಂದ ಹಾಗೆ ಮದುವೆ ಸಂದರ್ಭದಲ್ಲಿ ಸೀಲಂಬಂನ ಪ್ರದರ್ಶನ ಮಾಡಿಸುವ ಐಡಿಯಾ ವರ ಅರ್ಥಾತ್ ಆಕೆಯ ಗಂಡ ರಾಜ್​ಕುಮಾರ್​ನದೇ ಆಗಿತ್ತು ಎನ್ನಲಾಗಿದೆ.
ಇದನ್ನೂ ಓದಿ:ಕೋವಿಶೀಲ್ಡ್​ ಲಸಿಕೆ ಪಡೆದವರಿಗೆ ಗುಡ್​ ನ್ಯೂಸ್​: ಯೂರೋಪಿನ 9 ದೇಶಗಳಲ್ಲಿ ಗ್ರೀನ್​ ಪಾಸ್​
ನಿಶಾಳ ತಾಯಿ ಮಣಿ ಅವರು, ಹೆಣ್ಣುಮಕ್ಕಳು ಆರೋಗ್ಯವಾಗಿರಲು ಮತ್ತು ಆತ್ಮರಕ್ಷಣೆ ಮಾಡಿಕೊಳ್ಳಲು ಸೀಲಂಬಂ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ಅವಳಿಗೆ ತಮಿಳು ಪ್ರಕಾರದ ಸೀಲಂಬಂ ಕಲೆಯನ್ನು ಕಲಿಸಿದ್ದಾರೆ. ನಿಶಾ ಪೂರ್ಣ ಆಸಕ್ತಿಯಿಂದ ಚಿಕ್ಕವಯಸ್ಸಿನಿಂದ ಈ ಕಲೆಯನ್ನು ಅಭ್ಯಸಿಸುತ್ತಾ ಬಂದಿದ್ದಾಳೆ.
ಮದುವೆ ಏರ್ಪಾಟಾಗಿದ್ದ ತಿರುಕೋಲೂರ್​ ಗ್ರಾಮದಲ್ಲಿ ಹೊರಾಂಗಣದಲ್ಲಿ ಜನರು ಸುತ್ತುವರಿದಿರುವಂತೆ ನಿಶಾ, ರೇಷ್ಮೆ ಸೀರೆ ಮತ್ತು ಒಡವೆಗಳನ್ನು ತೊಟ್ಟು ಸೀಲಂಬಂನ ಚಮತ್ಕಾರಿಕ ಪ್ರದರ್ಶನ ನೀಡಿದ್ದಾಳೆ. ತನ್ನ ನೆಚ್ಚಿನ ಮಾರ್ಷಿಯಲ್​ ಆರ್ಟ್​ನ ಬಗ್ಗೆ ಅರಿವು ಮೂಡಿಸಿದ್ದಾಳೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.(ಏಜೆನ್ಸೀಸ್)
ಫೋನ್​ ಟ್ಯಾಪ್ ಕೇಸ್: ಶಾಸಕ ಬೆಲ್ಲದ್​ರ ಪರಿಚಯಸ್ಥರೇ ಕರೆ ಮಾಡಿದ್ದು ದೃಢ

ವೃಷಭಾವತಿ ಕಣಿವೆ ಮಾಲಿನ್ಯ ತಪಾಸಣೆಗೆ 3 ತುರ್ತು ಸ್ಪಂದನ ವಾಹನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
