ನವದೆಹಲಿ:ಭಾರತದಲ್ಲಿ ಪ್ರಸ್ತುತ ಮದುವೆ ಸೀಸನ್​ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರತಿದಿನ ನೂರಾರು ಮದುವೆಗಳು ನಡೆಯುತ್ತಿರುತ್ತವೆ. ವಿವಾಹಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಶೇರ್​ ಮಾಡಲಾಗುತ್ತಿದೆ. ಅವುಗಳಲ್ಲಿ ಕೆಲವೊಂದಿಷ್ಟು ವಿಡಿಯೋ ವಿಶೇಷ ಕಾರಣಗಳಿಂದಾಗಿ ವೈರಲ್​ ಆಗಿಬಿಡುತ್ತವೆ. ಇದೀಗ ಆ ಸಾಲಿಗೆ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.
ಹುಡುಗಿಯರು ತಮಗೆ ಇಷ್ಟವಿಲ್ಲದಿರುವುದನ್ನು ಸಹಿಸಿಕೊಳ್ಳಲು ಬಯಸುವುದಿಲ್ಲ. ಸಂದರ್ಭ ಯಾವುದೇ ಇರಲಿ, ಸಹಿಸುವ ಮಾತೇ ಇರುವುದಿಲ್ಲ. ಅದು ಮದುವೆಯ ವೇದಿಕೆಯಾದರೂ ಸರಿ. ವರನೊಬ್ಬ ವಿಗ್ ಧರಿಸಿರುವುದನ್ನು ತಿಳಿದ ವಧು, ಮದುವೆಯನ್ನು ರದ್ದುಗೊಳಿಸಿದ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ಇನ್ನೊಂದು ಘಟನೆಯಲ್ಲಿ ವರದಕ್ಷಿಣೆ ಕೇಳಿದ ಕಾರಣಕ್ಕೆ ಮದುವೆ ರದ್ದು ಮಾಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಇಂತಹ ಹಲವು ಘಟನೆಗಳು ನಡೆಯುತ್ತಿವೆ. ಇತ್ತೀಚೆಗೆ ಇಂಥದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ವಧುವಿನ ಕೆನ್ನೆಗೆ ವರ ಮುತ್ತು ಕೊಡಲು ಯತ್ನಿಸಿದಾಗ, ಇಷ್ಟವಿಲ್ಲದ ವಧು ವೇದಿಕೆಯಲ್ಲಿ ಹೈಡ್ರಾಮ ಸೃಷ್ಟಿಸಿರುವ ವಿಡಿಯೋ ವೈರಲ್​ ಆಗಿದೆ.
ವಿಡಿಯೋದಲ್ಲಿ ಏನಿದೆ?ವಧುವಿನ ಮುಖ ಹಿಡಿದು ಕೆನ್ನೆಗೆ ಚುಂಬಿಸಲು ವರ ಯತ್ನಿಸುತ್ತಾನೆ. ಇದರಿಂದ ಅಸಮಾಧಾನಗೊಳ್ಳುವ ವಧು ವೇದಿಕೆಯಲ್ಲೇ ವರನ ಜೊತೆ ಜಗಳಕ್ಕಿಳಿಯುತ್ತಾಳೆ. ಇಬ್ಬರು ಬಡಿದಾಡಿಕೊಳ್ಳುವ ಹಂತಕ್ಕೂ ಹೋಗುತ್ತದೆ. ವರನನ್ನು ಕೆಡವಿ ವಧು ದಾಳಿ ಮಾಡುವುದು ವಿಡಿಯೋದಲ್ಲಿದೆ. ಕೊನೆಗೆ ವೇದಿಕೆ ಮೇಲಿದ್ದ ಸಂಬಂಧಿಕರು ಹಾಗೂ ಆಪ್ತರು ಇಬ್ಬರ ಜಗಳವನ್ನು ತಡೆಯುತ್ತಾರೆ.
ಅಂದಹಾಗೆ ಈ ವಿಡಿಯೋ ಎಷ್ಟು ಸತ್ಯ ಮತ್ತು ಎಷ್ಟು ಸುಳ್ಳು ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಅಲ್ಲದೆ, ವಿಡಿಯೋ ಮೂಲ ಯಾವುದು ಅಂತಾನೂ ಉಲ್ಲೇಖವಾಗಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೂಲಗಳ ಪ್ರಕಾರ ಮದುವೆ ನಡೆಯುತ್ತಿರುವಾಗ ಹುಡುಗಿಗೆ ಸಿಹಿ ತಿನ್ನಿಸಲು ಹುಡುಗಿಯ ಸ್ನೇಹಿತರು ವರನನ್ನು ಕೇಳಿದ್ದಾರೆ. ಹೀಗಾಗಿ ವರ, ಸಿಹಿಯನ್ನು ತೆಗೆದುಕೊಂಡು ವಧುವಿಗೆ ತಿನ್ನಿಸಲು ಯತ್ನಿಸಿದನು. ಆದರೆ, ವಧು ಬೇಡ ಎಂದಳು. ಆದಾಗ್ಯೂ, ಬಲವಂತವಾಗಿ ತಿನ್ನಿಸಲು ಹೋದಾಗ ವಧು ದೂರ ಹೋಗುತ್ತಿದ್ದಳು. ಈ ವೇಳೆ ವಧುವಿಗೆ ವರನ ಕೆನ್ನೆಗೆ ಮುತ್ತಿಡುವ ಆಸೆಯಾಯಿತು. ಆಕೆಯನ್ನು ಎಳೆದುಕೊಂಡು ಮುತ್ತಿಡಲು ಪ್ರಯತ್ನಿಸುವಾಗ ವರನ ಮೇಲೆ ಕೋಪಗೊಂಡ ವಧು, ವೇದಿಕೆಯಲ್ಲೇ ಬಡಿದಾಡಿಕೊಂಡಿದ್ದಾರೆ.
ವಿಡಿಯೋ ನೋಡಿದವರು ಬಗೆ ಬಗೆಯ ಕಾಮೆಂಟ್​ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.(ಏಜೆನ್ಸೀಸ್​)
Kalesh B/w Husband and Wife in marriage ceremonypic.twitter.com/bjypxtJzjt
— Ghar Ke Kalesh (@gharkekalesh)December 13, 2022

ಗೌಡರ ಅಂಗಳದಲ್ಲಿ ಅಶೋಕ ಚಕ್ರಾಧಿಪತ್ಯ!; ಎದುರಾಳಿಯೇ ಇಲ್ಲದ ಚಕ್ರವ್ಯೂಹದಲ್ಲಿ ಸಾಮ್ರಾಟ: ಪದ್ಮನಾಭನಗರ ವಿಧಾನಸಭಾ ಕ್ಷೇತ್ರ

2021ರಲ್ಲೂ ಚೀನಿ ಸೈನಿಕರನ್ನು ಹಿಮ್ಮೆಟ್ಟಿಸಿದ್ದ ಭಾರತ ಸೇನೆ: ಹೊಸ ಉದ್ವಿಗ್ನತೆ ನಡುವೆ ಹಳೇ ವಿಡಿಯೋ ಬಹಿರಂಗ

ಕೇಂದ್ರದಲ್ಲಿ 9 ಲಕ್ಷ ಹುದ್ದೆ ಖಾಲಿ: ರೈಲು ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ಸದ್ಯಕ್ಕಿಲ್ಲ ರಿಯಾಯಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − thirteen =
Remember me
