ಪಟನಾ:ವರದಕ್ಷಿಣೆ ವಿಚಾರಕ್ಕೆ, ವಧು ಅಥವಾ ವರನ ಪ್ರೇಮ ಪುರಾಣದಿಂದಾಗಿ ಮಂಟಪದಲ್ಲಿಯೇ ಮದುವೆ ಕ್ಯಾನ್ಸಲ್​ ಆಗುವುದೆಲ್ಲ ಆಗಾಗ ನಡೆಯುತ್ತಿರುತ್ತದೆ. ಆದರೆ ಈ ಘಟನೆ ಹಾಗಲ್ಲ. ಬರೀ ಫೋಟೋ ನೋಡಿ ಮದುವೆಗೆ ಒಪ್ಪಿದ್ದ ಹುಡುಗಿಯ ಕಥೆಯಿದು.
ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ನೌತಾನ್ ಬ್ಲಾಕ್ ಪ್ರದೇಶದ ದೇವಾಲಯದಲ್ಲಿ ಮದುವೆ ಸಂಭ್ರಮ ಶುರುವಾಗಿತ್ತು. ವಧು ಮತ್ತು ವರನ ಕಡೆಯ ನೂರಾರು ನೆಂಟರು ಅದಾಗಲೇ ಮಂಟಪದಲ್ಲೆ ನೆರೆದಿದ್ದರು. ವಾಟ್ಸ್​ಆ್ಯಪ್​ನಲ್ಲಿ ವರನ ಫೋಟೋ ಕಂಡು ಮದುವೆಗೆ ಒಪ್ಪಿದ್ದ ವಧು ತಾಳಿ ಕಟ್ಟಿಸಿಕೊಳ್ಳಲು ಕಾಯುತ್ತಿದ್ದಳು. ಮದುವಣಗಿತ್ತಿಯನ್ನು ಶಾಸ್ತ್ರೋಸ್ತ್ರವಾಗಿ ಮಂಟಪಕ್ಕೆ ಕರೆದುಕೊಂಡು ಬರಲಾಗಿದೆ. ಆದರೆ ನಗು ನಗುತ್ತಾ ಮಂಟಪಕ್ಕೆ ಬಂದ ಆಕೆ ಕೆಲವೇ ಕ್ಷಣಗಳಲ್ಲಿ ಸಿಟ್ಟು ಮತ್ತು ಅಳುವಿನೊಂದಿಗೆ ಮಂಟಪದಿಂದ ಹೊರ ನಡೆದಿದ್ದಾಳೆ.
ಆಕೆ ವಾಟ್ಸ್​ಆ್ಯಪ್​ನಲ್ಲಿ ವರನ ಫೋಟೋ ನೋಡಿದಾಗ ಆತ ಅವಳಿಗೆ ಸುಂದರವಾಗಿ ಕಂಡಿದ್ದನಂತೆ. ಆದರೆ ಮಂಟಪದಲ್ಲಿ ಕಂಡ ಆತನ ಮುಖ ಆಕೆಗೆ ಇಷ್ಟವಾಗಿಲ್ಲ. ಹುಡುಗ ನಾನು ವಾಟ್ಸ್​ಆ್ಯಪ್​ನಲ್ಲಿ ನೋಡಿದ ಹುಡುಗನ ಹಾಗಿಲ್ಲ ಎಂದು ಗೋಳಿಡಲು ಆರಂಭಿಸಿದ್ದಾಳೆ. ಸೊಸೆಯಾಗಿ ಬರಬೇಕಾದವಳ ದೂರು ಕೇಳಿ ವರನ ಕುಟುಂಬದವರೂ ಸಿಟ್ಟಿಗೆದ್ದು ಜಗಳ ಆರಂಭಿಸಿದ್ದಾರೆ. ವಧುವಿನ ಕುಟುಂಬದವರು ಆಕೆಯ ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಅದು ಸಾಧ್ಯವಾಗದೆ ಎರಡೂ ಕುಟುಂಬಗಳ ನಡುವಿನ ಜಗಳ ತಾರಕಕ್ಕೇರಿದೆ. ಅಷ್ಟರಲ್ಲಿ ಊರಿನ ಮುಖ್ಯಸ್ಥರು ಮಧ್ಯಸ್ತಿಕೆ ವಹಿಸಿದ್ದು, ಮದುವೆ ಮಾಡದೆಯೇ ವರನ ಕುಟುಂಬವನ್ನು ವಾಪಾಸು ಕಳುಹಿಸಿದ್ದಾರೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಬಾಡಿ ಬಿಲ್ಡ್​ ಮಾಡೋಕೆ ಏನೇನೋ ಮಾಡಿದ; ಆಮೇಲಾಗಿದ್ದು ಕೇಳಿದರೆ ಗಾಬರಿಯಾಗೋದು ಗ್ಯಾರಂಟಿ

ಹೆಚ್ಚಿದ ಆನ್​ಲೈನ್​ ಶಾಪಿಂಗ್ ಫ್ರಾಡ್​ : ಸೈಬರ್​ ಲ್ಯಾಬ್​ಗಳ ಸ್ಥಾಪನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
