ಪ್ರತಾಪ್​ಗಢ:ಉತ್ತರ ಪ್ರದೇಶದ ಪ್ರತಾಪ್‌ಗಢ ಎಂಬಲ್ಲಿ ಮಂಗಳವಾರ, ಜೂನ್ 14 ರಂದು ಮದುವೆ ಸಮಾರಂಭದಲ್ಲಿ ವರ ಮತ್ತು ವಧುವಿನ ಕುಟುಂಬಗಳ ನಡುವೆ ವಾಗ್ವಾದ ನಡೆದ ನಂತರ ಮದುವೆ ಸಮಾರಂಭ ರಣರಂಗವಾಗಿತ್ತು.
ವರ ಅಮರ್‌ಜೀತ್ ವರ್ಮಾ ವಧುವಿನ ಕುಟುಂಬದ ಬಳಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೇ ಜಗಳಕ್ಕೆ ಕಾರಣ ಎನ್ನಲಾಗಿದೆ.
ಮದುವೆಯ ‘ಜೈ ಮಾಲಾ’ ಸಮಾರಂಭದಲ್ಲಿ, ಅಮರ್‌ಜೀತ್‌ನ ಸ್ನೇಹಿತರು ಅನುಚಿತವಾಗಿ ವರ್ತಿಸಿದ್ದು ವಧು-ವರರ ಕುಟುಂಬಗಳ ನಡುವೆ ಜಗಳಕ್ಕೆ ಕಾರಣವಾಯಿತು. ವರ ಅಮರ್ಜೀತ್ ವಧುವಿನ ಕುಟುಂಬದ ಬಳಿ ವರದಕ್ಷಿಣೆ ಬೇಡಿಕೆ ಇಟ್ಟಿದ್ದು ಪರಿಸ್ಥಿತಿಯನ್ನು ವಿಕೋಪಕ್ಕೆ ತಿರುಗಿಸಿತ್ತು.

ಇದನ್ನೂ ಓದಿ:ಮದುವೆ ಮಂಟಪದಲ್ಲೇ ವರದಕ್ಷಿಣೆಗೆ ಬೇಡಿಕೆಯಿಟ್ಟ ವರನಿಗೆ ಕಾದಿತ್ತು ಭಾರೀ ಆಘಾತ! ವಿಡಿಯೋ ವೈರಲ್​​
ಹಲವು ಸುತ್ತಿನ ಮಾತುಕತೆಗಳ ನಂತರವೂ ಎರಡೂ ಕುಟುಂಬಗಳು ಒಪ್ಪಂದಕ್ಕೆ ಬರಲು ವಿಫಲವಾದ ನಂತರ ವರನನ್ನು ವಧುವಿನ ಕಡೆಯಿಂದ ಹಲವಾರು ಗಂಟೆಗಳ ಕಾಲ ಮರಕ್ಕೆ ಕಟ್ಟಿಹಾಕಲಾಗಿತ್ತು. ನಂತರ ಮಾಂಧಾತ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ವರನನ್ನು ಬಿಡುಗಡೆ ಮಾಡಿ ವಶಕ್ಕೆ ಪಡೆದಿದ್ದಾರೆ.
प्रतापगढ की तस्वीरें देखिए
दूल्हे ने किया शादी से इंकार ,दूल्हे को बंधक बनाकर दी गई तालिबानी सज़ा#pratapgarhpic.twitter.com/OtqTdzNj5A
— Rahul Sisodia (@Sisodia19Rahul)June 15, 2023

ಮಾಧ್ಯಮದವರೊಂದಿಗೆ ಮಾತನಾಡಿದ ಮಾಂಧಾತ ಠಾಣಾಧಿಕಾರಿ, ‘ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರು ಇದ್ದಾರೆ. ಆದರೆ ಇನ್ನೂ ರಾಜಿ ಮಾಡಿಕೊಂಡಿಲ್ಲ’ ಎಂದರು.
ಇದನ್ನೂ ಓದಿ:ವರದಕ್ಷಿಣೆ ಕಿರುಕುಳ; ಸೊಸೆಗೆ ಆ್ಯಸಿಡ್ ಕುಡಿಸಿ ಕೊಂದ ಅತ್ತೆ
ಮದುವೆ ಸಮಾರಂಭದ ವ್ಯವಸ್ಥೆಯಲ್ಲಿ ಮಹಿಳೆಯ ಕಡೆಯವರು ಅವರ ವೆಚ್ಚವನ್ನು ಪರಿಹಾರ ರೂಪದಲ್ಲಿ ಪಡೆಯಲು ಎರಡು ಕುಟುಂಬಗಳ ನಡುವೆ ಸಭೆ ಕೂಡ ನಡೆಯುತ್ತಿದೆ ಎಂದು SHO ಮತ್ತಷ್ಟು ಮಾಹಿತಿ ನೀಡಿದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 6 =
Remember me
