ಜಾಜ್‌ಪುರ:ಸೇತುವೆಯ ಒಂದು ಬದಿಯ ಭಾಗವು ವಾಹನ ದಾಟಿದ ಕೆಲವೇ ಸೆಕೆಂಡುಗಳಲ್ಲಿ ಕುಸಿದು ಬಿದ್ದಿದ್ದರಿಂದ 50ಕ್ಕೂ ಹೆಚ್ಚು ಬಸ್ ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಒಡಿಶಾದ ಜಾಜ್‌ಪುರ್ ಜಿಲ್ಲೆಯ ರಸುಲ್‌ಪುರ ಬ್ಲಾಕ್ ಕಚೇರಿ ಬಳಿ ನಡೆದಿದೆ.ಈ ಘಟನೆಯು ಕೋಲ್ಕತ್ತಾ-ಚೆನ್ನೈ NH-16ನಲ್ಲಿ ನಡೆದಿದ್ದು, ಬಸ್ ಬಾಲಸೋರ್ ನಿಂದ ಭುವನೇಶ್ವರಕ್ಕೆ ತೆರಳುತ್ತಿತ್ತು. ಬಸ್​​ ದಡವನ್ನು ದಾಟಿದ ಕೂಡಲೇ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯ ಒಂದು ಬದಿಯ ಭಾಗವು ಕುಸಿದಿದೆ. ಈ ವೇಳೆ ಸೇತುವೆಯ ಭಾಗ ಕುಸಿದಿರುವುದನ್ನು ಕಂಡ ಟ್ರ್ಯಾಕ್ಟರ್ ಚಾಲಕ ಇತರ ವಾಹನಗಳು ಮುಂದೆ ಹೋಗದಂತೆ ತಡೆದಿದ್ದಾರೆ.ಇದನ್ನೂ ಓದಿ:ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರ ಸಾವುಈ ಕುರಿತು ಮಾತನಾಡಿದ ಟ್ರ್ಯಾಕ್ಟರ್ ಚಾಲಕ ರಘುನಾಥ್, ತಾನು ತನ್ನ ಟ್ರ್ಯಾಕ್ಟರ್‌ನಲ್ಲಿ ಖಾಂಡಿತಾರ್‌ನಿಂದ ಕುವಾಕಿಯಾ ಕಡೆಗೆ ಹೋಗುತ್ತಿದ್ದ. ತಾನು ರಸೂಲ್‌ಪುರ ಬ್ಲಾಕ್ ಆಫೀಸ್ ತಲುಪಿದಾಗ, ತನಗೆ ದೊಡ್ಡ ಶಬ್ದ ಕೇಳಿಸಿತು. ಏನಾಯಿತು ಎಂದು ತಾನು ಊಹಿಸುವ ಮೊದಲು, ಸೇತುವೆಯ ಒಂದು ಭಾಗವು ಕುಸಿದಿರುವುದನ್ನು ನೋಡಿದ್ದಾನೆ. ಕೂಡಲೇ ತಾನು ಟ್ರ್ಯಾಕ್ಟರ್​​ ರಸ್ತೆಗೆ ಅಡ್ಡಲಾಗಿರಿಸಿ ಹೆದ್ದಾರಿಯನ್ನು ನಿರ್ಬಂಧಿಸಿದೆ. ಬೇರೆ ವಾಹನಗಳು ಮುಂದೆ ಹೋಗದಂತೆ ತಡೆದೆ ಎಂದು ಹೇಳಿದ್ದಾರೆ.ನಂತರ ಆಗಮಿಸಿದ ಪೊಲೀಸರು ಪಾನಿಕೋಯಿಲಿ ಮತ್ತು ಚಂಡಿಖೋಲೆ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ ಹೆದ್ದಾರಿಯ ಇನ್ನೊಂದು ಬದಿಯ ಮೂಲಕ ತೆರಳಲು ಅನುಕೂಲ ಮಾಡಿಕೊಟ್ಟಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 13 =
Remember me
