ನವದೆಹಲಿ :ವೈದ್ಯಕೀಯ ಸೇವಾಕರ್ತರ ಮೇಲೆ ನಡೆಯುವ ಹಿಂಸಾಚಾರದ ಬಗ್ಗೆ ದೇಶದಲ್ಲಿ ಒಂದು ಸಮಗ್ರವಾದ, ಏಕರೂಪ ಮತ್ತು ಪರಿಣಾಮಕಾರಿ ಕಾನೂನನ್ನು ಜಾರಿಗೊಳಿಸಬೇಕೆಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ಆಗ್ರಹಿಸಿದೆ. ಈ ಕುರಿತು ಐಎಂಎ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರಿಗೆ ಪತ್ರ ಬರೆದಿದೆ.
ದೇಶದಲ್ಲಿ ವೈದ್ಯರ ವಿರುದ್ಧ ವರದಿಯಾಗುತ್ತಿರುವ ಹಲ್ಲೆಗಳ ಹಿನ್ನೆಲೆಯಲ್ಲಿ ಐಎಂಎ ಈ ಮನವಿ ಮಾಡಿದೆ. ಇತ್ತೀಚಿನ ಪ್ರಕರಣದಲ್ಲಿ ಅಸ್ಸಾಂನಲ್ಲಿ ಕಿರಿಯ ವೈದ್ಯರೊಬ್ಬರನ್ನು ಮೃತರೋಗಿಯ ಸಂಬಂಧಿಕರ ದೊಡ್ಡ ಗುಂಪು ಮನಬಂದಂತೆ ಥಳಿಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದೆ.
ಇದನ್ನೂ ಓದಿ:ಗಾಯಕಿ ಶಮಿತಾ ಮಲ್ನಾಡ್ ಪುತ್ರನ ಪ್ರಶ್ನೆಗೆ ವಿರಾಟ್ ಕೊಹ್ಲಿ ಕೊಟ್ರು ಉತ್ತರ
“ವರ್ಷಗಳು ಕಳೆದಂತೆ ಆರೋಗ್ಯಸೇವಾಕರ್ತರ ಮೇಲಿನ ಹಿಂಸಾಚಾರ ಪ್ರಕರಣಗಳು ಹೆಚ್ಚಿವೆ ಮತ್ತು ವ್ಯಾಪಕವಾಗಿವೆ. ಈ ಆತಂಕಕಾರಿ ವಿಷಯವು ವೈದ್ಯರ ಕಾರ್ಯನಿರ್ವಹಣೆಗೆ ಕುತ್ತಾಗಿದೆ” ಎಂದು ಹೇಳಿರುವ ಐಎಂಎ, “ಭಾರತದಲ್ಲಿ ಆರೋಗ್ಯಸೇವೆಗೆ ಸಂಬಂಧಿಸಿದ ಹಿಂಸಾಚಾರದ ವಿರುದ್ಧ ಸಮಗ್ರವಾದ ಕಾನೂನಿನ ಅಗತ್ಯವಿದೆ. ಆದ್ದರಿಂದ ಪರಿಣಾಮಕಾರಿ ಮತ್ತು ಬಲ ಹೊಂದಿದ ಕಾಯ್ದೆಯೊಂದನ್ನು ಅನುಮೋದಿಸಬೇಕೆಂದು ಮನವಿ ಮಾಡುತ್ತೇವೆ” ಎಂದು ಪತ್ರದಲ್ಲಿ ಹೇಳಿದೆ.(ಏಜೆನ್ಸೀಸ್)
VIDEO | ಕರೊನಾ ರೋಗಿ ಸತ್ತಿದ್ದಕ್ಕೆ ವೈದ್ಯನನ್ನು ಹಿಗ್ಗಾಮುಗ್ಗಾ ಥಳಿಸಿದರು! ಹಲ್ಲೆ ಮಾಡಿದ 24 ಜನರು ಜೈಲಿಗೆ

ಲಸಿಕೆ ಪಡೆದು ಹೊಟೆಲ್​ನಲ್ಲಿ ತಂಗುವ ಆಫರ್​! ಮಾಮೂಲಿ ಫ್ರಿಜ್ಜಲ್ಲಿ ಕೋವಾಕ್ಸಿನ್ ಶೇಖರಣೆ​!

ಅಂಧ ದಂಪತಿಯ ಕುಟುಂಬಕ್ಕೆ ಪೊಲೀಸ್​ ಅಧಿಕಾರಿಯ ಸಹಾಯಹಸ್ತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + three =
Remember me
