ಲಂಡನ್​:ಬ್ರಿಟನ್ ರಾಣಿ ಎಲಿಜಬೆತ್ II ಇಂದು ಕೊನೆಯುಸಿರೆಳೆದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಅವರ ಆರೋಗ್ಯದ ಪರಿಸ್ಥಿತಿ ಬಗ್ಗೆ ಇಂದು ಬೆಳಗ್ಗಿನಿಂದಲೇ ವೈದ್ಯರಿಗೆ ಆತಂಕ ಉಂಟಾಗಿದ್ದು, ಅವರ ಕುರಿತು ವಿಶೇಷ ಕಾಳಜಿ ವಹಿಸಲಾಗಿತ್ತು.
ಬೆಳಗ್ಗಿನಿಂದ ಅವರನ್ನು ಪರಿಣತರ ವೈದ್ಯರ ನಿಗಾದಲ್ಲಿ ಇರಿಸಿ ವಿಶೇಷ ಆರೈಕೆ ಒದಗಿಸಲಾಗಿದ್ದರೂ, ಅವರು ಚಿಕಿತ್ಸೆ ಫಲಿಸದೆ ಇಂದು ನಿಧನರಾದರು. ಅವರು ಇಂದು ಸ್ಕಾಟ್ಲೆಂಡ್​ನ ಬಲ್ಮೊರಲ್ ಕ್ಯಾಸಲ್​ನಲ್ಲಿ ಕೊನೆಯುಸಿರೆಳೆದರು ಎಂಬುದಾಗಿ ಬಕಿಂಗ್​ಹ್ಯಾಂ ಅರಮನೆ ಮೂಲಗಳು ತಿಳಿಸಿವೆ.
ರಾಣಿ ಕಳೆದ ಅಕ್ಟೋಬರ್​ನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದು, ನಡೆಯಲು ಹಾಗೂ ನಿಲ್ಲಲೂ ಆಗದ ಪರಿಸ್ಥಿತಿ ತಲುಪಿದ್ದರು. ಬುಧವಾರ ರಾಜಕೀಯ ಸಲಹೆಗಾರರ ಜತೆ ಮೀಟಿಂಗ್ ಇದ್ದಿದ್ದು, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಅವರು ಅದರಲ್ಲಿ ಭಾಗಿ ಆಗಿರಲಿಲ್ಲ. ಇಂದು ಬೆಳಗ್ಗೆ ದೈಹಿಕ ಪರಿಸ್ಥಿತಿ ತಪಾಸಣೆ ನಡೆಸಿದ ವೈದ್ಯರು, ವೈದ್ಯರ ನಿಗಾದಲ್ಲಿ ಇರುವುದು ಸೂಕ್ತ ಎಂದು ಸಲಹೆ ನೀಡಿದ್ದರಿಂದ ರಾಣಿ ವಿಶೇಷ ಆರೈಕೆಯಲ್ಲಿ ಇರಿಸಲಾಗಿತ್ತು.
ಗುಲಾಮಗಿರಿಯ ಮತ್ತೊಂದು ಗುರುತನ್ನು ಇಂದು ತೆಗೆಯಲಾಗಿದೆ ಎಂದ ಮೋದಿ: ಕರ್ತವ್ಯ ಪಥ ಉದ್ಘಾಟನೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 4 =
Remember me
