ಶ್ರೀನಗರ:ಅಂದಾಜು 7 ತಿಂಗಳ ಬಳಿಕ ಕಣಿವೆ ರಾಜ್ಯದಲ್ಲಿ ಸ್ಥಗಿತಗೊಂಡಿದ ಇಂಟರ್​ನೆಟ್​ ಹಾಗೂ ಬ್ರಾಡ್​ಬ್ಯಾಂಡ್​ ಸೇವೆಯನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತ ಗುರುವಾರದಿಂದ ಮರು ಆರಂಭಿಸಿದೆ.
ಕಳೆದ ವರ್ಷ ಆ.5ರಂದು ಕಣಿವೆ ರಾಜ್ಯಕ್ಕೆ ಸಂವಿಧಾನದಲ್ಲಿ ವಿಶೇಷ ಅಧಿಕಾರ ನೀಡುವ 370ನೇ ವಿಧಿ ರದ್ದುಗೊಳಿಸಿದ ನಂತರ ಇಂಟರ್​ನೆಟ್​ ಹಾಗೂ ಬ್ರಾಡ್​ಬ್ಯಾಂಡ್​ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಕಣಿವೆ ರಾಜ್ಯದಲ್ಲಿ 2ನೇ ತಲೆಮಾರಿನ ತರಂಗಳ ವೇಗ (2ಜಿ ಸ್ಪೀಡ್​) ಹೊಂದಿರುವ ಇಂಟರ್​ನೆಟ್​ ಸೌಲಭ್ಯವನ್ನು ಒದಗಿಸಲು ಜಮ್ಮು ಮತ್ತು ಕಾಶ್ಮೀರ ಆಡಳಿತ ನಿರ್ಧರಿಸಿ ಮಾ. 4ರಂದು ಸುತ್ತೊಲೆ ಹೊರಡಿಸಿದೆ.
ಕಣಿವೆ ರಾಜ್ಯದಲ್ಲಿ ಇಂಟರ್​ನೆಟ್​ ಸೌಲಭ್ಯವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಕೆಲವರು ಸುಪ್ರೀಂಕೊರ್ಟ್​ ಮೆಟ್ಟಿಲೇರಿದ್ದರು. ಕೋರ್ಟ್​ ವಿಚಾರಣೆ ನಡೆಸಿ ಅಂತರ್ಜಾಲ ಸೌಲಭ್ಯ ಬಳಕೆ ಮನುಷ್ಯರ ಮೂಲಭೂತ ಹಕ್ಕು ಇದನ್ನು ಕಸಿಯುವಂತಿಲ್ಲ ಎಂದು ತೀರ್ಪು ನೀಡಿತು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − fifteen =
Remember me
